ಸಾರಾಂಶ
ಗ್ರಾಮೀಣ ಪ್ರದೇಶದಲ್ಲಿನ ತಂಬ್ರಹಳ್ಳಿ ವಿದ್ಯಾರ್ಥಿನಿಯರು ಥ್ರೋಬಾಲ್‌ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ವಿವಿ ಸಂಘದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಕಿಪೊಗು ಪ್ರೌಢಶಾಲೆಯ ವಿದ್ಯಾರ್ಥಿನಿಯರು ವಿಜಯನಗರದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಕುರಿತು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ್ ರೆಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ತಂಬ್ರಹಳ್ಳಿ ವಿದ್ಯಾರ್ಥಿನಿಯರು ಥ್ರೋಬಾಲ್‌ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ವಿವಿ ಸಂಘದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಶಾಲೆಯ ದೈಹಿಕ ಶಿಕ್ಷಕರು, ಮುಖ್ಯಗುರುಗಳು, ಶಿಕ್ಷಕರು, ಬೋದಕೇತರ ಸಿಬ್ಬಂದಿ ವಿಶೇಷ ಆಸಕ್ತಿ ವಹಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದ್ದಾರೆ. ಕ್ರೀಡೆಯಿಂದ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುವುದರ ಜೊತೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.ದೈಹಿಕ ಮಾನಸಿಕ ಶಕ್ತಿಯಿಂದ ಸಮತೋಲನ ಆರೋಗ್ಯ ಹೊಂದಲು ಸಾಧ್ಯ. ಶಾಲೆಯು ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ಮೇಲುಗೈ ಸಾಧಿಸಲು ನಿರಂತರ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಕೆ.ವಿ.ಲೋಕೇಶ್, ದೈಹಿಕ ಶಿಕ್ಷಕ ಪ್ರಶಾಂತ, ಶಿಕ್ಷಕರಾದ ರಾಜೇಶ್ವರಿ, ಪರಿಮಳ, ಕಿನ್ನಾಳ್ ಕೊಟ್ರೇಶ್, ಜಿ.ಬಿ. ಮಂಜು, ಎಚ್.ಕೊಟ್ರುಗೌಡ, ಎಚ್.ಮಂಜುಗೌಡ, ಕಾಡಪ್ಪ, ಚನ್ನಬಸಪ್ಪ, ಬೋದಕೇತರ ಸಿಬ್ಬಂದಿ ನೇತ್ರಾ ಯಳಕಪ್ಪನವರ, ವಿಶ್ವನಾಥ, ಶಶಾಂಕ್, ಅಕ್ಕಿ ಗುರುಬಸವರಾಜ ಇದ್ದರು.ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಕಿಪೊಗು ಪ್ರೌಢಶಾಲೆ ವಿದ್ಯಾರ್ಥಿನಿಯರು ಜಿಲ್ಲಾಮಟ್ಟದ ಥ್ರೋಬಾಲ್‌ನಲ್ಲಿ ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.