ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸತತ ನಾಲ್ಕನೇ ವರ್ಷದ ಭುವನೇಂದ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ನಡೆಯಿತು.

ಕಾರ್ಕಳ: ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸತತ ನಾಲ್ಕನೇ ವರ್ಷದ ಭುವನೇಂದ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ನಡೆಯಿತು.

ಪಂದ್ಯಾಟ ಉದ್ಘಾಟಿಸಿದ ಪವರ್ ಪಾಯಿಂಟ್ ಸಂಸ್ಥೆ ಮಾಲೀಕ, ಉದ್ಯಮಿ ಮಹಾವೀರ ಹೆಗ್ಡೆ ಮಾತನಾಡಿ, ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸುವುದೂ ಒಂದು ಕಲೆ. ವಿದ್ಯಾರ್ಥಿಗಳು ಸ್ವತಃ ಸಂಪನ್ಮೂಲಗಳನ್ನು ಸಂಗ್ರಹಿಸಿ ಇಂತಹ ಕ್ರೀಡಾಕೂಟವನ್ನು ವೈಭವದಿಂದ ಆಯೋಜಿಸುವುದು ಎಲ್ಲರಲ್ಲೂ ಉತ್ಸಾಹ ಮೂಡಿಸುತ್ತದೆ. ಜೀವನ ಪ್ರತಿಕ್ಷಣವೂ ಹೋರಾಟವಾಗಿದ್ದು, ಸಮಸ್ಯೆಗಳ ಜೊತೆಗೆ ಅವಕಾಶಗಳೂ ಇರುತ್ತವೆ. ವಿದ್ಯಾರ್ಥಿಗಳು ಕ್ರೀಡೆಯನ್ನು ಜೀವನದ ಆಧಾರವಾಗಿ ತೆಗೆದುಕೊಂಡು ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ರೈಟ್ ಟ್ಯಾಕ್ಸ್ ಮೇಟ್ ಸಂಸ್ಥೆಯ ಮಾಲೀಕ, ಕಾಲೇಜಿನ ಹಳೆ ವಿದ್ಯಾರ್ಥಿಆದ ಸಿ.ಎ. ಹರೀಶ್ ರಾವ್ ಮಾತನಾಡಿ, ಮತ್ತೆ ಕಾಲೇಜಿಗೆ ಬಂದು ಮನೆಗೆ ಮರಳಿದ ಅನುಭವವಾಗುತ್ತಿದೆ. ಭುವನೇಂದ್ರ ಕಾಲೇಜು ಪಾಠದ ಜೊತೆಗೆ ಕ್ರೀಡೆಗೂ ಸಮಾನ ಪ್ರೋತ್ಸಾಹ ನೀಡುತ್ತದೆ. ಯಾವುದೇ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸಲು ನಾಯಕತ್ವ ಗುಣಗಳು ಅಗತ್ಯವಾಗಿದ್ದು, ಅದು ಆತ್ಮವಿಶ್ವಾಸದಿಂದ ಮಾತ್ರ ಸಾಧ್ಯ. ಈ ಕಾಲೇಜು ಅಂತಹ ಗುಣಗಳನ್ನು ಬೆಳೆಸಲು ಅವಕಾಶ ನೀಡಿದೆ. ಗೆದ್ದವರು ಮಾತ್ರ ವಿಜೇತರಲ್ಲ, ಪ್ರಯತ್ನಿಸಿದ ಪ್ರತಿಯೊಬ್ಬರೂ ಗೆಲ್ಲುವವರೇ ಎಂದು ಹೇಳಿದರು.

ಪುರಸಭಾ ಸದಸ್ಯ ಪ್ರದೀಪ್ ರಾಣೆ ಮಾತನಾಡಿ, ಭುವನೇಂದ್ರ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಈ ಕಾಲೇಜು ನನಗೆ ಜೀವನದಲ್ಲಿ ಅನೇಕ ಅವಕಾಶಗಳನ್ನು ನೀಡಿದೆ. ಪ್ರಾಚಾರ್ಯರ ಪ್ರೀತಿ ಮತ್ತು ಕ್ರೀಡಾ ಪ್ರೋತ್ಸಾಹದಿಂದ ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳು ಲಭ್ಯವಾಗುತ್ತವೆ. ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಸಂತೋಷದ ಸಂಗತಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ವಿದ್ಯಾರ್ಥಿಗಳು ಸ್ಥಿರವಾದ ಅಭ್ಯಾಸ ಕ್ರಮವನ್ನು ರೂಢಿಸಿಕೊಳ್ಳಬೇಕು. ನಿಧಾನವಾದ ಪ್ರಗತಿಯೇ ದೀರ್ಘಕಾಲೀನ ಯಶಸ್ಸಿಗೆ ಕಾರಣವಾಗುತ್ತದೆ. ಇಂದು ವೇದಿಕೆಯಲ್ಲಿ ಅತಿಥಿಗಳಾಗಿ ಕಾಣಿಸಿಕೊಂಡಿರುವವರು ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾಗಿರುವುದು ಹೆಮ್ಮೆಯ ಸಂಗತಿ. ಈ ಪರಂಪರೆ ಮುಂದುವರಿಯಬೇಕು. ವಿದ್ಯಾರ್ಥಿಗಳ ಪರಿಶ್ರಮದಿಂದಲೇ ಇಂತಹ ಅದ್ಧೂರಿ ಕ್ರಿಕೆಟ್ ಪಂದ್ಯಾಟಗಳು ಸಾಧ್ಯವಾಗುತ್ತವೆ ಎಂದು ಹೇಳಿದರು.

ಪರ್ವಾಜೆ ಹೈಸ್ಕೂಲ್ ಮುಖ್ಯ ಶಿಕ್ಷಕಿ ವೇದಾವತಿ, ಐಕ್ಯೂಎಸಿ ಸಂಯೋಜಕ ಪ್ರೊ. ಲಕ್ಷ್ಮೀನಾರಾಯಣ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ್ ಭಟ್, ಸಹ ಕ್ಷೇಮಪಾಲನಾ ಅಧಿಕಾರಿ ನಂದಕಿಶೋರ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಚಂದ್ರ ಉಪಸ್ಥಿತರಿದ್ದರು.

ಹಿತ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿ ಸ್ವಾಗತಿಸಿದರು ಹಾಗೂ ಕ್ರೀಡಾ ಕಾರ್ಯದರ್ಶಿ ಅನನ್ಯ ವಂದಿಸಿದರು.