ಮೇ ೨೩,೨೪ ಮತ್ತು ೨೫ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ರಾಜ್ಯ ಮಟದ ಕ್ರೀಡಾಕೂಟ ನಡೆಯಲಿವೆ.
ಕಾರಟಗಿ: ತಾಲೂಕಿನ ಸರ್ಕಾರಿ ನೌಕರರಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಈಗಾಗಲೇ ಜಿಲ್ಲಾ ಮಟ್ಟದ ಕ್ರೀಡಾಕೂಟದ ಖೋಖೋ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಜಯ ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟದಲ್ಲೂ ವಿಜೇತರಾಗಿ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ ಕ್ರೀಡಾಪಟುಗಳಿಗೆ ಕರೆ ನೀಡಿದರು.
ಪಟ್ಟಣದ ಶ್ರೀಸಿದ್ದೇಶ್ವರ ರಂಗಮಂದಿರದ ಆವರಣದಲ್ಲಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿ, ಸದಸ್ಯರು ಹಾಗೂ ಕ್ರೀಡಾಪಟುಗಳ ಸಮ್ಮುಖದಲ್ಲಿ ಮರಲಾನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ, ಯುವ ಮುಖಂಡ ಸಿ.ಎಚ್. ರವಿನಂದ, ಕ್ರೀಡಾಪಟುಗಳಿಗೆ ಜರ್ಸಿ ವಿತರಿಸಿ ಮಾತನಾಡಿದರು.ಮೇ ೨೩,೨೪ ಮತ್ತು ೨೫ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ರಾಜ್ಯ ಮಟದ ಕ್ರೀಡಾಕೂಟ ನಡೆಯಲಿವೆ. ನಮ್ಮ ತಾಲೂಕಿನ ನೌಕರರು ಮತ್ತಷ್ಟು ತರಬೇತಿ ಪಡೆದು ರಾಜ್ಯ ಮಟ್ಟದಲ್ಲಿಯೂ ಜಯ ಸಾಧಿಸಲಿ.ಅವರಿಗೆ ಬೇಕಾದ ಸಹಕಾರ ತಾಲೂಕು ಘಟಕ ನೀಡಲಿದೆ ಎಂದರು.
ಬಳಿಕ ಜೆರ್ಸಿ ಕೊಡುಗೆಯಾಗಿ ನೀಡಿದ ಯುವ ಮುಖಂಡ ಸಿ.ಎಚ್.ರವಿನಂದ ಮಾತನಾಡಿ, ಅಧಿಕ ಕಾರ್ಯದೊತ್ತಡದ ನಡುವೆಯೂ ಸರ್ಕಾರಿ ನೌಕರರು ಆಟೋಟಗಳಲ್ಲಿ ಭಾಗವಹಿಸಿರುವುದು ಸಂತಸದ ವಿಚಾರ. ಆರೋಗ್ಯದ ದೃಷ್ಠಿಯಿಂದ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾದ ಹವ್ಯಾಸವಾಗಿದ್ದು, ನಮ್ಮಲ್ಲಿನ ಪ್ರತಿಭೆ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿ ವಿಜೇತರಾಗಿ ಕಾರಟಗಿಯ ಕೀರ್ತಿ ಹೆಚ್ಚಿಸಬೇಕು ಎಂದರು.ಬಳಿಕ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ೫೦ ಕ್ರೀಡಾಪಟುಗಳಿಗೆ ಜೆರ್ಸಿ ಕೊಡುಗೆಯಾಗಿ ನೀಡಿ ಬೆಂಬಲ ನೀಡಿರುವ ಯುವ ಮುಖಂಡ ಸಿ.ಎಚ್.ರವಿನಂದ ಅವರನ್ನು ನೌಕರರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮಂಜುನಾಥ ಹಿರೇಮಠ, ಗೌರವಾಧ್ಯಕ್ಷ ಬಸವರಾಜ್ ರ‍್ಯಾವಳದ್, ಉಪಾಧ್ಯಕ್ಷ ತಿಮ್ಮಣ್ಣ ನಾಯಕ ನಿರ್ದೇಶಕ ಗುರುಪ್ರಸಾದ್, ಮಲ್ಲೇಶಿ, ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಮರೇಶ್ ಮೈಲಾಪುರ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಶರಣಪ್ಪ ಸೋಮಲಾಪುರ, ರಾಘವೇಂದ್ರ ಕಂಠಿ, ಮಲ್ಲಿಕಾರ್ಜುನ ಪಾಟೀಲ್, ದೇವೇಂದ್ರಪ್ಪ ಮೈಲಾಪುರ, ಗಂಗಪ್ಪ, ಖೋಖೋ ತಂಡದ ನಾಯಕ ಸಂಗಪ್ಪ, ಜಿ.ಅಮರಮ್ಮ, ಸವಿತಾ ಚೋರಗಿ, ನಾಗರತ್ನ, ರತ್ನ, ಗಿರಿಜಾ, ರೇಣುಕಮ್ಮ, ಶ್ರೀದೇವಿ, ಬಸವರಾಜೇಶ್ವರಿ, ಚೈತ್ರಾಂಜಲಿ, ರೇಣುಕಾ, ಶಾರದಾ, ಜ್ಯೋತಿ, ಅಂಬಿಕಾ ಅನಿತಾ ಇತರ ಕ್ರೀಡಾಪಟುಗಳು ಇನ್ನಿತರರು ಇದ್ದರು.