ಭೂಮಿಗೆ ವಿಷ ಸಿಂಪಡಿಸಿ ಜೈವಿಕ ಗುಣ ನಾಶ: ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿಷಾದ

| Published : Sep 22 2024, 01:48 AM IST / Updated: Sep 22 2024, 01:49 AM IST

ಭೂಮಿಗೆ ವಿಷ ಸಿಂಪಡಿಸಿ ಜೈವಿಕ ಗುಣ ನಾಶ: ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿಷಾದ
Share this Article
  • FB
  • TW
  • Linkdin
  • Email

ಸಾರಾಂಶ

ಆನಂದಪುರ ಇಲ್ಲಿಗೆ ಸಮೀಪದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ 12ನೆಯ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವಿಶ್ರಾಂತ ಅಧ್ಯಕ್ಷ ಪ್ರೊಫೆಸರ್ ಎಸ್.ಜಿ. ಸಿದ್ದರಾಮಯ್ಯ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಆನಂದಪುರ

ಅಧಿಕ ಇಳುವರಿಯ ವ್ಯಾಮೋಹದಿಂದ ಭೂಮಿಗೆ ವಿಷವನ್ನು ಸಿಂಪಡಿಸಿ ನಮ್ಮ ನೆಲದಲ್ಲಿರುವ ಜೈವಿಕ ಗುಣವನ್ನು ನಾಶಪಡಿಸುತ್ತಿರುವುದು ವಿಷಾದನೀಯ ಎಂದು ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವಿಶ್ರಾಂತ ಅಧ್ಯಕ್ಷ, ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.

ಅವರು ಇಲ್ಲಿಗೆ ಸಮೀಪದ ಇರುವಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ, 12ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವ್ಯವಸಾಯ ಸಂಸ್ಕೃತಿಯನ್ನು ಕಾಣುವಂತಹ ಪ್ರದೇಶಗಳಾದ, ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆ, ಬೆಂಗಾಡು ಸೀಮೆ, ನೀರಾವರಿ ಪ್ರದೇಶ, ಈ ಪ್ರದೇಶದಲ್ಲಿನ ವಾತಾವರಣಕ್ಕೆ ಬೆಳೆಯುವಂತಹ ಬೆಳೆಗಳನ್ನು ಬೆಳೆಯುವಂತಹ ಪದ್ಧತಿ ವ್ಯವಸಾಯ ಸಂಸ್ಕೃತಿಯ ಪದ್ಧತಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಲೆನಾಡಿನಲ್ಲಿ ಬೆಳೆಯುವಂತಹ ಬೆಳೆಗಳು ಬಯಲು ಸೀಮೆಗಳಿಗೆ, ಬಯಲು ಸೀಮೆಯಲ್ಲಿ ಬೆಳೆಯುವಂತಹ ಬೆಳೆ ಮಲೆನಾಡಿಗೂ ವ್ಯಾಪಿಸಿದೆ. ರೈತರು ಅಧಿಕ ಇಳುವರಿಯ ವ್ಯಾಮೋಹಕ್ಕೆ ಒಳಗಾಗಿ ದ್ರಾಕ್ಷಿ ,ಡ್ರ್ಯಾಗನ್ ಫ್ರೂಟ್‌ ಇವುಗಳನ್ನು ಬೆಳೆಯುವಾಗ ಇರುವಂತಹ ಬೆಲೆ, ಬೆಳೆದ ನಂತರ ಬೆಳಗ್ಗೆ ಬೆಲೆ ಇಲ್ಲದೆ ರೈತರು ನಷ್ಟವನ್ನು ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಅಧಿಕ ಇಳುವರಿಗಾಗಿ ಹಾಕುತ್ತಿರುವ ವಿಷ ಭೂಮಿಯ ಒಳಗೆ ಇರುವ ಜೈವಿಕ ಸತ್ವವನ್ನು ಕಳೆದುಕೊಂಡು ಬರುಡು ಭೂಮಿಯಾಗುತ್ತಿದೆ. ಇದು ನಮ್ಮ ಪಾರಂಪರಿಕ ವ್ಯವಸಾಯ ಸಂಸ್ಕೃತಿಯಲ್ಲಿ. ಅನಿವಾರ್ಯವಾಗಿ ನಮ್ಮ ದೇಶ ಎದುರಿಸುತ್ತಿರುವ ಆಹಾರ ಕೊರತೆಯನ್ನು ನೀಗಿಸಲು ಅಧಿಕ ಇಳುವರಿಗಾಗಿ ಮಾಡುತ್ತಿರುವ ಪ್ರಯೋಗ ಇಡೀ ಭೂಮಿಯ ಜೈವಿಕ ಸತ್ವಗಳನ್ನು ಕಳೆದುಕೊಳ್ಳುವ ಮಟ್ಟಿಗೆ ತಲುಪಿದೆ ಇದು ವಿಷಾದನೀಯ ಸಂಗತಿ ಎಂದರು. ಪಾರಂಪರಿಕ ಕೃಷಿ ಜೀವವಿರೋಧಿಯಲ್ಲ, ನೈಸರ್ಗಿಕ ವಿರೋಧಿಯೂ ಅಲ್ಲ, ಇದಕ್ಕೆ ಪೂರಕವಾಗುವ ರೀತಿಯಲ್ಲಿ ಕಟ್ಟಿಕೊಂಡ ನಮ್ಮ ವ್ಯವಸಾಯ ಸಂಸ್ಕೃತಿ ಪಾರಂಪರಿಕ ಕೃಷಿ ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಆರ್.ಸಿ. ಜಗದೀಶ್ ಮಾತನಾಡಿ, ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾನಿಲಯ ಅಂತಾರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸುವಂತಹ ಮುಂಚೂಣಿಯಲ್ಲಿದೆ. ಉತ್ತಮ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಕ್ಷಣ ಫಲಪ್ರದವಾಗುತ್ತಿವೆ ಎಂದರು.

ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಡಾ. ಪಿ.ಕೆ ಬಸವರಾಜ್, ಶಿಕ್ಷಣ ನಿರ್ದೇಶಕ ಡಾ. ಬಿ.ಹೇಮ್ಲಾ ನಾಯಕ್ ಡಾ. ಬಿಎಂ ದುಶಂತ್ ಕುಮಾರ್, ಡಾ. ಕೆ.ಟಿ.ಗುರುಮೂರ್ತಿ, ಡಾ. ನಾರಾಯಣ ಎಸ್. ಡೀನ್ ವಿದ್ಯಾರ್ಥಿ ಕಲ್ಯಾಣ, ಡಾ. ಎಸ್, ಯು ,ಪಾಟೀಲ್, ಡಾ. ಕೆ. ಬಿ .ಶಿವಣ್ಣ, ಡಾ. ಜಿ.ಎಂ ದೇವಗಿರಿ ಪೊನ್ನಂಪೇಟೆ, ಡಾ.ವಿ.ಶ್ರೀನಿವಾಸ್ ಮೂಡಿಗೆರೆ, ಡಾ ಸುರೇಶ್ ಡಿ. ಏಕಬೋಟಿ. ಹಿರಿಯೂರು, ಡಾ. ಡಿ. ತಿಪ್ಪೇಶ್, ಡಾ. ಕೆ. ಸಿ ಶಶಿಧರ್, ಡಾ. ಬಿ.ಸಿ ಧನಂಜಯ್, ಡಾ. ಲಕ್ಷ್ಮಣ್ ಬ್ರಹ್ಮವರ ಕಾಲೇಜ್ ಪ್ರಾಂಶುಪಾಲ, ಡಾ. ಬಿ.ಎಂ ಆನಂದ್ ಕುಮಾರ್ ಪ್ರಾಂಶುಪಾಲರು ಡಿಪ್ಲೋಮೋ ಕಾಲೇಜ್ ಕತ್ತಲಗೆರೆ, ಆರ್. ದತ್ತಾತ್ರೇಯ, ಎ.ಎಂ ಅವಿನಾಶ್ ಉಪಸ್ಥಿತರಿದ್ದರು. ಡಾ.ವೈ. ಕಾಂತರಾಜ್, ಡಾ. ವೀರಣ್ಣ, ಡಾ.ರುದ್ರಗೌಡ ಹಾಗೂ ಸುಜಾತ ಇವರಿಗೆ ಸನ್ಮಾನಿಸಲಾಯಿತು.