ಸಾರಾಂಶ
ರಾಹುಲ್ ಗಾಂಧಿ ಮತಗಳ ಕಳ್ಳತನವಾಗಿದೆ ಎಂದು ಅಪಪ್ರಚಾರ ಮಾಡುವುದು ಕಾಂಗ್ರೆಸ್‌ನ ತತ್ವಗಳು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಹುಲ್ ಗಾಂಧಿ ಮತಗಳ ಕಳ್ಳತನವಾಗಿದೆ ಎಂದು ಅಪಪ್ರಚಾರ ಮಾಡುವುದು ಕಾಂಗ್ರೆಸ್ ನ ತತ್ವಗಳು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನ ಆರೋಪಕ್ಕೆ ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟ ಉತ್ತರ ನೀಡಿದೆ.
ಇದರ ಯಾವುದೇ ರೀತಿ ತಪ್ಪು ಆಗಿಲ್ಲ. ಅವರ ನಿಯಮದಂತೆ ಅವರು ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಬರೀ ದಿಕ್ಕು ತಪ್ಪಿಸುವುದು. ಅಪಪ್ರಚಾರ ಮಾಡುವುದು ಕಾಂಗ್ರೆಸ್ ನ ತತ್ವಗಳು ಎಂದು ಆರೋಪಿಸಿದರು.ಬಿಹಾರ ಸೇರಿದಂತೆ ಮುಂದೆ ಬರುವ ಚುನಾವಣೆಯಲ್ಲಿ ಅವರಿಗೆ ಭವಿಷ್ಯವಿಲ್ಲ.
ಅಥವಾ ಗೆಲ್ಲುವ ಯಾವುದೇ ವಿಶ್ವಾಸವಿಲ್ಲ. ಹೀಗಾಗಿಯೇ ಅವರು ಇಂತಹ ಅಪಪ್ರಚಾರ ಶುರುಮಾಡಿದ್ದಾರೆ. ಸೋಲುತ್ತೇವೆ ಎಂಬ ಕಾರಣದಿಂದ ಇಂತಹ ಅಪಪ್ರಚಾರ ಶುರುಮಾಡಿಕೊಂಡಿದ್ದಾರೆ. ಅವರು ಗೆದ್ದರೆ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನಿಸುತ್ತದೆ. ಸೋತಾಗ ವ್ಯವಸ್ಥೆಯೇ ಸರಿಯಿಲ್ಲ ಎನ್ನುತ್ತಾರೆ ಎಂದು ಹೇಳಿದರು.