ಸಾರಾಂಶ
Sprinkler distribution program for farmers
ಕನ್ನಡಪ್ರಭ ವಾರ್ತೆ ಶಹಾಪುರ
2024-25ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಮುಖ್ಯಮಂತ್ರಿಗಳ ಸೂಕ್ಷ್ಮನೀರಾವರಿ ಯೋಜನೆಯಡಿ ರೈತರು ಶೇ.90ರ ಸಹಾಯಧನದಲ್ಲಿ ಸ್ಪ್ರಿಂಕ್ಲರ್ ರೈತರಿಗೆ (ಸಾಮಾನ್ಯ) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸ್ಪ್ರಿಂಕ್ಲರ್ ವಿತರಿಸುವ ಕಾರ್ಯಕ್ರಮವಿದ್ದು, ಇಚ್ಛೆಯುಳ್ಳ ರೈತ ಬಾಂಧವರು ದಾಖಲಾತಿಗಳೊಂದಿಗೆ ತಮ್ಮ ಇಚ್ಚೆಯ ಸಂಸ್ಥೆಗಳನ್ನು ಆಯ್ಕೆ ಮಾಡಿ ದಾಖಲಾತಿಗಳೊಂದಿಗೆ ರೈತರ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸಹಾಯಕ ಕೃಷಿ ನಿರ್ದೇಶಕ ಸುನೀಲಕುಮಾರ ಮನವಿ ಮಾಡಿದ್ದಾರೆ. 5 ಎಕರೆಗಿಂತ ಕಡಿಮೆ ಪ್ರದೇಶಕ್ಕೆ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ಪಡೆದ ಪರಿಶಿಷ್ಟ ಜಾತಿಯ ರೈತರು ಅವಕಾಶವಿರುವ 5 ಎಕರೆವರೆಗೆ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.ರೈತರ ಅರ್ಜಿಗೆ 3 ಪಾಸ್‌ಪೋರ್ಟ್ ಫೋಟೋ, ಆಧಾರ್ ಕಾರ್ಡ್, ಭೂ ಹಿಡುವಳಿ ಪ್ರಮಾಣ ಪತ್ರ, ನೀರು ಬಳಕೆ ಪತ್ರ, ಪಹಣಿ, ಬ್ಯಾಂಕ್ ಪಾಸ್ ಬುಕ್, 100 ರು.ಗಳ ಸ್ಟಾಂಪ್ ಪೇಪರ್, ಜಾತಿ ಪ್ರಮಾಣ ಪತ್ರ (ಪ.ಜಾತಿ/ಪ.ಪಂಗಡ ರೈತರಿಗೆ) ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದ್ದಾರೆ.---------
14ವೈಡಿಆರ್1: ಸುನೀಲಕುಮಾರ, ಕೃಷಿ ನಿರ್ದೇಶಕರು, ಶಹಾಪುರ.