ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿವಿ ಮೊಹಲ್ಲಾದ ಎಸ್.ಪಿ.ವಿ.ಜಿ.ಎಂ.ಸಿ ಟ್ರಸ್ಟ್ 63ನೇ ಪಾರಪರಿಕ ಸಂಗೀತೋತ್ಸವವನ್ನು ಸೆ. 7 ರಿಂದ 18 ರವರೆಗೆ ಆಯೋಜಿಸಿದೆ.ವಿ.ವಿ. ಮೊಹಲ್ಲಾ 8ನೇ ಕ್ರಾಸ್‌ನ ಟ್ರಸ್ಟ್‌ಆವರಣದಲ್ಲಿ ಸೆ. 7ರಂದು ಸಂಜೆ 6.45ಕ್ಕೆ ಮಾಲಿನಿ ಮತ್ತು ತಂಡದವರಿಂದ ಹರಿಕಥೆ ನಡೆಯಲಿದೆ. ವಿದ್ವಾನ್‌ಎ. ಉದಯರಾಜು ಹಾರ್ಮೋನಿಯಂ, ಎಂ.ಆರ್. ಶ್ರೀಕಂಠ ತಬಲ ಸಹಕಾರ ನೀಡುವರು.
ಸೆ. 8ರಂದು ಸಂಜೆ 6ರಂದು ಪಾರಂಪರಿಕ ಸಂಗೀತೋತ್ಸವವನ್ನು ಶಾಸಕ ಕೆ. ಹರೀಶ್‌ಗೌಡ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಪಾಲ್ಗೊಳ್ಳುವರು. ಉದ್ಯಮಿ ಜಗನ್ನಾಥ ಶೆಣೈ ಅಧ್ಯಕ್ಷತೆ ವಹಿಸುವರು. ಬಳಿಕ ವಿದುಷಿ ಸೂರ್ಯಗಾಯತ್ರಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನಕ್ಕೆ ವಿದ್ವಾನ್‌ಆದರ್ಶ ಅಜಯಕುಮಾರ್‌ವಯೋಲಿನ್, ಕೃಪಾಲ್‌ಸಾಯಿರಾಂ ಮೃದಂಗ ಮತ್ತು ಪ್ರಶಾಂತ್‌ಶಂಕರ್‌ತಬಲ ನೆರವು ನೀಡುವರು.ಸೆ. 9ರಂದು ಸಂಜೆ 5.30 ರಿಂದ 6.45 ರವರೆಗೆ ಗಣೇಶ ಪುರಾಣ ಅವರಿಂದ ಕಾವ್ಯ ಗಾಯನಕ್ಕೆ ಶುಭಾ ರಾಘವೇಂದ್ರ ವಾಚಿಸಿದರೆ, ಎ. ನಿರಂಜನ ವ್ಯಾಖ್ಯಾನಿಸುವರು. 6.45ಕ್ಕೆ ವಿದ್ವಾನ್‌ತಿರುವಾರೂರು ಗಿರೀಶ್‌ಗಾಯನಕ್ಕೆ, ವಯೋಲಿನ್‌ಆರ್.ಕೆ. ಶ್ರೀರಾಂಕುಮಾರ್, ಮೃದಂಗ ತಿರುವಾರೂರು ಭಕ್ತವತ್ಸಲ, ಖಂಜಿರಾ ವ್ಯಾಸವಿಠಲ ನೆರವಾಗುವರು. ಸೆ. 10ರಂದು ಸಂಜೆ 6.45ಕ್ಕೆ ವಿದ್ವಾನ್‌ಹರೀಶ್‌ಶಿವರಾಮಕೃಷ್ಣನ್‌ಗಾಯನಕ್ಕೆ, ವಯೋಲಿನ್‌ಕಾರ್ತಿಕ್‌ನಾಗರಾಜ್, ಮೃದಂಗ ಉಮಯಾಳಪುರಂ ಸಿವರಾಮ್ ಮತ್ತು ರಿದಂಪ್ಯಾಡ್ ಗೆ ಅರುಣ್‌ಕುಮಾರ್‌ನೆರವಾಗುವರು.
ಸೆ. 11ರಂದು ಆದಿ ಪುರಾಣ- ಭರತ ಬಾಹುಬಲಿ ಯುದ್ಧ ಕುರಿತು ವಿದ್ವಾನ್‌ಸುಹಾಸ್‌ಭಾರದ್ವಾಜ್‌ವಾಚಿಸಿದರೆ, ಡಾ. ಜ್ಯೋತಿಶಂಕರ್‌ವ್ಯಾಖ್ಯಾನಿಸಿದರು. ಸಂಜೆ 6.45ಕ್ಕೆ ವಿದ್ವಾನ್ ವಿಘ್ನೇಶ್‌ಈಶ್ವರ್‌ಗಾಯನಕ್ಕೆ ಸಾಯಿ ರಕ್ಷಿತ್‌ವಯೋಲಿನ್, ಉಮಯಾಳಪುರಂ ಸಿವರಾಮನ್‌ಮೃದಂಗ ಮತ್ತು ಬಿ.ಎಸ್. ಪುರುಷೋತ್ತಮ್‌ಖಂಜಿರಾ ನುಡಿಸುವರು.ಸೆ. 12 ರಂದು ಶ್ರೀ ದತ್ತ ಭಾಗವತ ಕಾವ್ಯವನ್ನು ವಸಂತ ವೆಂಕಟೇಶ್‌ವಾಚಿಸಿದರೆ, ಧರಿಶ್ರೀ ಆನಂದರಾವ್‌ವ್ಯಾಖ್ಯಾನಿಸುವರು. ಸಂಜೆ 6.45ಕ್ಕೆ ವಿದ್ವಾನ್‌ಕಲ್ಯಾಣಪುರಂ ಎಸ್. ಅರವಿಂದ್‌ಗಾಯನ, ಎಚ್.ಎನ್. ಭಾಸ್ಕರ್‌ವಯೋಲಿನ್, ಕೆ.ಯು. ಜಯಚಂದ್ರರಾವ್ ಮೃದಂಗ, ಬಿ.ಎಸ್. ಪುರುಷೋತ್ತಮ್‌ಖಂಜಿರಾದಲ್ಲಿ ನೆರವಾಗುವರು.
ಸೆ. 13ರಂದು ಕಾಳಿದಾಸ ಮಹಾಕವಿಯ ರಘುವಂಶವನ್ನು ವಿದುಷಿ ಮಹಿಮಾ ಕಶ್ಯಪ್‌ವಾಚಿಸಿದರೆ, ಡಾ.ಎಚ್.ಎ. ನಾಗರಾಜರಾವ್‌ವ್ಯಾಖ್ಯಾನಿಸುವರು. ಸಂಜೆ 6.45ಕ್ಕೆ ವಿದುಷಿ ಸ್ಪೂರ್ತಿ ರಾವ್‌ಗಾಯನ, ಶ್ರೀಲಕ್ಷ್ಮೀ ಎಸ್. ಭಟ್‌ವಯೋಲಿನ್, ಅದಮ್ಯ ರಮಾನಂದ್‌ಮೃದಂಗ, ಶಮಿತ್‌ಗೌಡ ಘಟ ನೆರವಾಗುವರು.ಸೆ. 14ರಂದು ಬೆಳಗ್ಗೆ 10ಕ್ಕೆ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ನಡೆಯಲಿದೆ. ಸಂಜೆ 5.30 ರಿಂದ 6.45 ರವರೆಗೆ ಮಾರುತಿ ಭಕ್ತಿ ದರ್ಪಣ ಕಾವ್ಯವನ್ನು ಕುಮಾರಿ ಧನ್ಯ ವಾಚಿಸುವರು. ವಿದ್ವಾನ್‌ಕಜಪ ಮಂಜುನಾಥ್‌ವ್ಯಾಖ್ಯಾನಿಸುವರು. ಸಂಜೆ 5.30ಕ್ಕೆ ವಿದುಷಿ ಸಂಗೀತಾ ಕಟ್ಟಿ ಗಾಯನಕ್ಕೆ ಸತೀಶ್‌ಕೊಲ್ಲಿ ಹಾರ್ಮೋನಿಯಂ ಮತ್ತು ಕೇಶವ್‌ಜೋಶಿ ತಬಲಾದಲ್ಲಿ ಸಹಕರಿಸುವರು.
ಸೆ. 15 ರಂದು ಬೆಳಗ್ಗೆ 8 ಗಂಟೆಗೆ ಗಣಪತಿ ಮತ್ತು ಭೂ ಸೂಕ್ತ ಹೋಮ ನಡೆಯಲಿದೆ. ಸಂಜೆ 5.30ಕ್ಕೆ ಕನ್ನಡ ಭಾಗವತ ಕಾವ್ಯವನ್ನು ವಿದುಷಿ ಡಿ.ಎನ್. ಸ್ವಾತಿ ವಾಚಿಸಿದರೆ, ಶ್ರೀನಿವಾಸ ಫಣಿ ವ್ಯಾಖ್ಯಾನಿಸುವರು. ಸಂಜೆ 6.30ಕ್ಕೆ ವಿದ್ವಾನ್‌ಶ್ರುತಿಸಾಗರ್‌ಅವರಿಂದ ವೇಣುವಾದನ, ಚಾರುಮತಿ ರಘುರಾಮನ್ ಅವರ ವಯೋಲಿನ್, ಅನಂತ್ ಕೃಷ್ಣನ್‌ಅವರ ಮೃದಂಗ, ಸುಂದರ್‌ಕುಮಾರ್‌ಅವರ ಖಂಜಿರಾದಲ್ಲಿ ಸಹಕರಿಸುವರು.ಸೆ. 16 ರಂದು ಸಂಜೆ ಶಿವತತ್ವ ಚಿಂತಾಮಣಿ ಕಾವ್ಯವನ್ನು ಕೆ.ಎಸ್. ಭಾಗ್ಯಲಕ್ಷ್ಮೀ ವಾಚಿಸಿದರೆ, ಮೊರಬದ ಮಲ್ಲಿಕಾರ್ಜುನ ವ್ಯಾಖ್ಯಾನಿಸುವರು. ಸಂಜೆ 6.45ಕ್ಕೆ ವಿದ್ವಾನ್‌ಕುನ್ನಕ್ಕುಡಿ ಬಾಲಮುರಳಿಕೃಷ್ಣ ಅವರಿಂದ ಗಾಯನ, ಅಕ್ಕರೈ ಶುಭಲಕ್ಷ್ಮೀ ಅವರ ವಯೋಲಿನ್, ಸುಂದರ್‌ಕುಮಾರ್‌ಅವರ ಮೃದಂಗ ಮತ್ತು ಗುರುಪ್ರಸನ್ನ ಅವರು ಖಂಜಿರಾದಲ್ಲಿ ಸಹಕರಿಸುವರು.
ಸೆ. 17ರಂದು ಸಂಜೆ 5.30 ರಿಂದ ಕಿರಗಸೂರು ರಾಜಪ್ಪ ಮತ್ತು ತಂಡದವರಿಂದ ರಂಗಗೀತೆ, ಸಂಜೆ 6.45ಕ್ಕೆ ದ್ವಂದ್ವ ವಯೋಲಿನ್‌ವಾದನದಲ್ಲಿ ಅಕ್ಕರೈ ಶುಭಲಕ್ಷ್ಮೀ, ಅಕ್ಕರೈ ಸ್ವರ್ಣಲತಾ ಪಾಲ್ಗೊಳ್ಳುವರು. ಸುಮೇಶ್‌ನಾರಾಯಣನ್‌ಮೃದಂಗ ಮತ್ತು ಸುಂದರ್‌ಕುಮಾರ್‌ಖಂಜಿರಾ ನುಡಿಸುವರು. ಸೆ. 18 ರಂದು ಸಂಜೆ 5.30ಕ್ಕೆ ಪಂಡಿತ್‌ಭೀಮಾಶಂಕರ ಬಿದನೂರ ಮತ್ತು ವಿದಯಾರ್ಥಿಗಳಿಂದ ಸಮೂಹ ತಬಲ ವಾದನ ಇರುತ್ತದೆ. ಸಂಜೆ 6.45ಕ್ಕೆ ವಿದ್ವಾನ್‌ಟಿ.ಎಂ. ಕೃಷ್ಣ ಅವರಿಂದ ಗಾಯನ, ಅಕ್ಕರೈ ಶುಭಲಕ್ಷ್ಮೀ ಅವರ ವಯೋಲಿನ್, ವಿದ್ವಾನ್‌ಸುಮೇಶ್‌ನಾರಾಯಣ್ ಅವರ ಮೃದಂಗ ಮತ್ತು ಸುಕನ್ಯಾ ರಾಮಗೋಪಾಲ್‌ಅವರು ಘಟ ನುಡಿಸುವರು.