ಸಮಾನತೆಯ ಸಿದ್ಧಾಂತ ಸಾರಿದವರೇ ಶ್ರೀನಾರಾಯಣ ಗುರುಗಳು: ಎ.ನಾರಾಯಣಸ್ವಾಮಿ

| Published : Sep 08 2025, 01:00 AM IST

ಸಾರಾಂಶ

ಸಮಾಜದ ಅಸಮಾನತೆ ದೂರವಾಗಿ ಕಟ್ಟಕಡೆಯ ವ್ಯಕ್ತಿ ಕೂಡ ಶಿಕ್ಷಣವಂತರಾಗುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಆಂದೋಲನ ಮಾದರಿಯಲ್ಲಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ನಾರಾಯಣ ಗುರುಗಳು.

ಕನ್ನಡಪ್ರಭ ವಾರ್ತೆ ಮದ್ದೂರು

ದೇಶದಲ್ಲಿ ಅಸಮಾನತೆ, ಜಾತಿ ಪದ್ಧತಿ ವಿಜೃಂಬಿಸುತ್ತಿದ್ದ ಕಾಲದಲ್ಲಿ ಸಮಾನತೆಯ ಸಿದ್ಧಾಂತ ಸಾರಿದವರೇ ಶ್ರೀನಾರಾಯಣ ಗುರುಗಳು ಎಂದು ಆರ್ಯ ಈಡಿಗರ ಸಂಘದ ತಾಲೂಕು ಅಧ್ಯಕ್ಷ ಎ.ನಾರಾಯಣಸ್ವಾಮಿ ಭಾನುವಾರ ಹೇಳಿದರು.

ಪಟ್ಟಣದ ಶ್ರೀಉಗ್ರ ನರಸಿಂಹ ಸ್ವಾಮಿ ದೇವಾಲಯದ ಬಳಿಯಿಂದ ತಾಲೂಕು ಆಡಳಿತ ಹಾಗೂ ಆರ್ಯ ಈಡಿಗರ ಸಂಘದ ಸಹಯೋಗದಲ್ಲಿ ನಡೆದ ಬ್ರಹ್ಮಶ್ರೀನಾರಾಯಣ ಗುರುಗಳ 171ನೇ ಜಯಂತಿ ಅಂಗವಾಗಿ ನಡೆದ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಸಮಾಜದ ಅಸಮಾನತೆ ದೂರವಾಗಿ ಕಟ್ಟಕಡೆಯ ವ್ಯಕ್ತಿ ಕೂಡ ಶಿಕ್ಷಣವಂತರಾಗುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಆಂದೋಲನ ಮಾದರಿಯಲ್ಲಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ನಾರಾಯಣ ಗುರುಗಳು ಎಂದು ಬಣ್ಣಿಸಿದರು.

ಕರಾಳ ಜಾತಿ ವ್ಯವಸ್ಥೆ ಕಾಲದಲ್ಲಿ ನಾರಾಯಣ ಗುರುಗಳು ಎಲ್ಲಾ ಜಾತಿ, ವರ್ಗದವರು ಸಮಾನರು ಎಂಬ ಸಂದೇಶ ಸಾರು ವಮೂಲಕ ಆಗಿನ ಕಟ್ಟುಪಾಡುಗಳ ವಿರುದ್ಧ ಜನಜಾಗೃತಿ ಮೂಡಿಸಿ ಸ್ವಾಮಿ ಸ್ವಾಭಿಮಾನಿ ಸಮಾಜಕ್ಕೆ ನಾಂದಿ ಹಾಡಿದ ಗುರುವರ್ಯರು ಎಂದು ಅಭಿಪ್ರಾಯಪಟ್ಟರು.

ನಂತರ ತಾಲೂಕು ಕಚೇರಿ ಸಭಾಂಗಣ ನಡೆದ ಶ್ರೀನಾರಾಯಣ ಗುರುಗಳ ಜಯಂತಿ ಅಂಗವಾಗಿ ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಪ್ರಧಾನ ಭಾಷಣ ಮಾಡಿದರು. ಮಾನವ ಸಮಾಜದ ಸರ್ವ ಜನಾಂಗದವರು ಶಿಕ್ಷಣವಂತರಾಗಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಕಂಕಣ ತೊಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಆರ್ಯ ಈಡಿಗರ ಸಂಘದ ಗೌರವಾಧ್ಯಕ್ಷ ತಮ್ಮಯ್ಯ, ಉಪಾಧ್ಯಕ್ಷರಾದ ಎ.ಎಚ್.ನಾರಾಯಣಸ್ವಾಮಿ, ಹೋಬಳಿ ರಂಗ, ಕಾರ್ಯದರ್ಶಿ ಸಂಘಟನಾ ಕಾರ್ಯದರ್ಶಿ ನಿತಿನ್ ಗೌಡ, ಕಾರ್ಯದರ್ಶಿಶ್ರೀನಿವಾಸ್, ಜಿಲ್ಲಾ ಪ್ರತಿನಿಧಿ ಸೌಮ್ಯ, ಮುಖಂಡರಾದ ಗೋವಿಂದರಾಜು, ದೇವರಾಜು, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹಾದೇವು, ಅಹಿಂದ ಸಂರಕ್ಷಣಾ ವೇದಿಕೆಯ ಶ್ರೀನಿವಾಸ ಶೆಟ್ಟಿ, ಶಶಿಕುಮಾರ್, ವಿಶ್ವಕರ್ಮ ಸಂಘಟನೆಯ ಪಿ.ಆನಂದಾಚಾರ್ ಮತ್ತಿತರರು ಭಾಗವಹಿಸಿದ್ದರು.

ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಆಚರಣೆ

ಶ್ರೀರಂಗಪಟ್ಟಣ:

ಪಟ್ಟಣದ ತಾಲೂಕು ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ಬ್ರಹ್ಮರ್ಷಿ ನಾರಾಯಣಗುರು ಜಯಂತಿಯನ್ನು ಆಚರಿಸಲಾಯಿತು. ತಾಲೂಕು ದಂಡಾಧಿಕಾರಿ ಚೇತನ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ನಗುವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಮಮತಾ ಪ್ರಧಾನ ಭಾಷಣ ಮಾಡಿ, ಬ್ರಹ್ಮಶ್ರೀ ನಾರಾಯಣ ಗುರು ಅವರ ಕುರಿತ ಜೀವನ ಚರಿತ್ರೆಯನ್ನು ಪ್ರವಚನ ನೀಡಿದರು.

ಈ ವೇಳೆ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀನಿವಾಸ್, ಉಪಾಧಕ್ಷ ರವಿಕುಮಾರ್, ಸಮಾಜದ ಇತರೆ ಮುಖಂಡರುಗಳು , ಪುರಸಭೆ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅಧಿಕಾರಿ ವರ್ಗ ಹಾಜರಿದ್ದರು.