ಶ್ರೀರಾಮುಲುಗೆ ಅತ್ಯಧಿಕ ಮತಗಳ ಲೀಡ್ ಖಚಿತ: ಶಾಸಕ ನೇಮಿರಾಜ

| Published : Apr 06 2024, 12:50 AM IST

ಶ್ರೀರಾಮುಲುಗೆ ಅತ್ಯಧಿಕ ಮತಗಳ ಲೀಡ್ ಖಚಿತ: ಶಾಸಕ ನೇಮಿರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲೇ ವಿಧಾನಸಭೆ ಚುನಾವಣೆಯ ಲೀಡ್‌ ಗಿಂತ ಎರಡು ಪಟ್ಟು ಲೀಡ್‌ ರಾಮುಲು ಅವರಿಗೆ ದೊರಕಿಸಿಕೊಡುತ್ತಿವೇ.

ಕೊಟ್ಟೂರು: ಈ ಬಾರಿಯ ಬಳ್ಳಾರಿ ಲೋಕಸಭ ಕ್ಷೇತ್ರದಿಂದ ಬಿಜೆಪಿ ಮೈತ್ತಿ ಅಭ್ಯರ್ಥಿ ಬಿ.ಶ್ರೀರಾಮುಲು ಅತ್ಯಧಿಕ ಮತಗಳ ಲೀಡ್‌ ನೊಂದಿಗೆ ಚುನಾಯಿತರಾಗಲಿದ್ದಾರೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.ಗುರುವಾರ ಸಂಜೆ ತಾಲೂಕಿನ ಚಪ್ಪರದಹಳ್ಳಿಯಲ್ಲಿನ ಎಂ.ಎಂ.ಜೆ. ಹರ್ಷವರ್ಧನ್‌ ತೋಟದಲ್ಲಿ ಆಯೋಜಿಸಿದ್ದ ಕೊಟ್ಟೂರು ತಾಲೂಕು ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲೇ ವಿಧಾನಸಭೆ ಚುನಾವಣೆಯ ಲೀಡ್‌ ಗಿಂತ ಎರಡು ಪಟ್ಟು ಲೀಡ್‌ ರಾಮುಲು ಅವರಿಗೆ ದೊರಕಿಸಿಕೊಡುತ್ತಿವೇ. ಈ ಮೂಲಕ ರಾಮುಲು ದಿಗ್ವಿಜಯ ಸಾಧಿಸಲಿದ್ದಾರೆ. ಈ ಕಾರಣಕ್ಕಾಗಿ ಕಾರ್ಯಕರ್ತರು ತುರುಸಿನಿಂದ ಪ್ರಚಾರ ಕೈಗೊಳ್ಳಲು ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯರ್ತಕರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದರು.

ಲೋಕಸಭೆ ಚುನಾವಣೆ ಬಿ.ಶ್ರೀ ರಾಮುಲು ಅವರ ರಾಜಕೀಯ ಪುನರ್‌ ಜೀವನಕ್ಕೆ ಮುನ್ಸೂಚನೆಯಾಗಲಿದೆ. ಈ ಬಾರಿಯ ಕಾರ್ಯಕರ್ತರು ನಿಟ್ಟಿನಲ್ಲಿ ಪ್ರಚಾರ ಕೈಗೊಳ್ಳಲು ಎಲ್ಲ ಬಗೆಯ ಸಿದ್ಧತೆ ಕೈಗೊಳ್ಳುವತ್ತ ಮುನ್ನಡೆದಿದ್ದಾರೆ ಎಂದು ಅವರು ಹೇಳಿದರು.

ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಈಗಾಗಲೇ ಒಗ್ಗೂಡಿ ಮೈತ್ರಿ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಜಯಶೀಲರನ್ನಾಗಿ ಮಾಡಲು ಶ್ರಮಿಸಲಿದ್ದಾರೆ. ಎಪ್ರಿಲ್‌ 7 ರಂದು ಕೊಟ್ಟೂರು ತಾಲೂಕಿಗೆ ಪ್ರಚಾರಕ್ಕೆಂದು ಆಗಮಿಸುವ ಅಭ್ಯರ್ಥಿ ಶ್ರೀರಾಮುಲು ಅವರ ಬೆಂಬಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಪಾಳ್ಗೊಳ್ಳಲು ಎಲ್ಲ ಬಗೆಯ ಸಿದ್ಧತೆ ಕೈಗೊಂಡಿದ್ದಾರೆ ಎಂದರು.

ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್‌ ಮಾತನಾಡಿ, ಕಾಂಗ್ರೆಸ್‌ ನ ಎಲ್ಲ ಬಗೆಯ ಆಮಿಷಗಳಿಗೆ ಮತದಾರರು ಬಲಿಯಾಗದಂತೆ ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರು ವ್ಯಾಪಕ ಪ್ರಚಾರ ಕೈಗೊಳ್ಳಲಿದ್ದಾರೆ ಎಂದರು.

ಅಲ್ಲದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ ಅದ್ಭುತ ಜಯ ಸಾಧಿಸಿದಂತೆ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ರಾಮುಲು ಅವರನ್ನು ಗೆಲ್ಲಿಸಲು ಪಣತೊಟ್ಟು ಪ್ರತಿಯೊಬ್ಬರು ಶ್ರಮಿಸಲಿದ್ದಾರೆ ಎಂದರು.

ಮುಖಂಡರಾದ ಕಂದಗಲ್ಲು ನೀಲಕಂಠಪ್ಪ, ಕೋಗಳಿ ಸಿದ್ದಲಿಂಗನಗೌಡ್ರು, ಅಂಬಳಿ ಸಿದ್ಲಿಂಗಪ್ಪ, ಕನ್ನಕಟ್ಟಿ ವಿಜಯಕುಮಾರ್, ಅಂಬಳಿ ಭರಮರೆಡ್ಡಿ ಮೈದೂರು ಕೊಟ್ರೇಶ್‌, ತಿಮ್ಮಲಾಪುರ ಕೊಟ್ರೇಶ್‌, ಬೂದಿ ಶಿವಕುಮಾರ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.