ತರೀಕೆರೆಯಲ್ಲಿ ಶ್ರೀ ಬನಶಂಕರಿದೇವಿ ಬನದ ಹುಣ್ಣಿಮೆ, ರಥೋತ್ಸವ

| Published : Jan 26 2024, 01:46 AM IST

ತರೀಕೆರೆಯಲ್ಲಿ ಶ್ರೀ ಬನಶಂಕರಿದೇವಿ ಬನದ ಹುಣ್ಣಿಮೆ, ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ ತಾಲೂಕು ದೇವಾಂಗ ಸಮಾಜ, ಶ್ರೀಬನಶಂಕರಿ ದೇವಿ ದೇವಸ್ಥಾನ ಸೇವಾ ಸಂಘದಿಂದ ಪಟ್ಟಣದಲ್ಲಿ ಶ್ರೀ ಬನಶಂಕರಿ ದೇವಿಯವರ ಬನದ ಹುಣ್ಣಿಮೆ ಮತ್ತು ಹತ್ತನೇ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ, ತರೀಕೆರೆ

ತರೀಕೆರೆ ತಾಲೂಕು ದೇವಾಂಗ ಸಮಾಜ, ಶ್ರೀಬನಶಂಕರಿ ದೇವಿ ದೇವಸ್ಥಾನ ಸೇವಾ ಸಂಘದಿಂದ ಪಟ್ಟಣದಲ್ಲಿ ಶ್ರೀ ಬನಶಂಕರಿ ದೇವಿಯವರ ಬನದ ಹುಣ್ಣಿಮೆ ಮತ್ತು ಹತ್ತನೇ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ತಾಲೂಕು ದೇವಾಂಗ ಸಮಾಜದ ಅಧ್ಯಕ್ಷ ಟಿ.ಜಿ.ಶಂಕರ್, ವಾಣಿ ಶ್ರೀನಿವಾಸ್, ಮಾಜಿ ಪುರಸಭಾಧ್ಯಕ್ಷ ಟಿ.ಏಸ್.ರಮೇಶ್, ಗಿರಿಜಮ್ಮ ನಾಗರಾಜ್, ಪುರಸಭೆ ಸದಸ್ಯೆ ದಿವ್ಯ ರವಿ, ಟಿ.ಎನ್.ಲೋಕೇಶ್, ಟಿ.ಆರ್. ನಾಗರಾಜ ಶೆಟ್ಟರು, ಟಿ.ಬಿ.ಕೃಷ್ಣ ಮೂರ್ತಿ, ತರೀಕೆರೆ ತಾಲೂಕು ದೇವಾಂಗ ಸಮಾಜದ ಪದಾದಿಕಾರಿಗಳು ಮತ್ತು ಸದಸ್ಯರು ರಥಕ್ಕೆ ಚಾಲನೆ

ನೀಡಿದರು.

ಭಕ್ತಾದಿಗಳು ಹರ್ಷದಿಂದ ಘೋಷಣೆಯೊಂದಿಗೆ ರಥಕ್ಕೆ ಬಾಳೆಹಣ್ಣು ಅರ್ಪಿಸಿ, ಭಕ್ತಿಪೂರ್ವಕವಾಗಿ ಎಳೆದು ಶ್ರೀ ಬನಶಂಕರಿ ದೇವಿಕೃಪೆಗೆ ಪಾತ್ರರಾದರು.

ಶ್ರೀ ಬನಶಂಕರಿಯ 10 ವರ್ಷದ ರಥೋತ್ಸವದ ಬಾವುಟವನ್ನು ಹರಾಜಿನಲ್ಲಿ ಟಿ.ಎನ್.ಸೋಮಶೇಖರ್ ಸ್ವೀಕರಿಸಿ ಮುಂದಿನ ವರ್ಷ ನಡೆಯಲಿರುವ ಹನ್ನೊಂದನೇ ರಥೋತ್ಸವದ ಮೊದಲ ಪೂಜೆ ಅವಕಾಶ ಪಡೆದುಕೊಂಡರು. ವಾಣಿ ಶ್ರೀನಿವಾಸ್ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಹೃದಯರೋಗ ತಜ್ಞ ಡಾ.ಶಿವಶಂಕರ್, ಪುರಸಬಾ ಮಾಜಿ ಅಧ್ಯಕ್ಷ ಟಿ.ಆರ್.ನಾಗರಾಜ್, ಟಿ.ಎಸ್. ರಮೇಶ್, ಪುರಸಬೆ ಸದಸ್ಯೆ ದಿವ್ಯ ರವಿ, ತಾಲೂಕು ದೇವಾಂಗ ಸಮಾಜದ ಲೋಕೇಶ್, ಟಿ.ಬಿ.ಕೃಷ್ಣಮೂರ್ತಿ, ತಾಲೂಕು ದೇವಾಂಗ ಸಮಾಜದ ಪದಾಧಿಕಾರಿಗಳು, ಸದಸ್ಯರು, ಭಕ್ತರು ಭಾಗವಹಿಸಿದ್ದರು.25ಕೆಟಿಆರ್.ಕೆ.5ಃ

ತರೀಕೆರೆಯಲ್ಲಿ ತಾಲೂಕು ದೇವಾಂಗ ಸಮಾಜ, ಶ್ರೀ ಬನಶಂಕರಿ ದೇವಿ ದೇವಸ್ಥಾನ ಸೇವಾ ಸಂಘದಿಂದ ಶ್ರೀ ಬನಶಂಕರಿ ದೇವಿ ಬನದ ಹುಣ್ಣಿಮೆ ಮತ್ತು ಹತ್ತನೇ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.