ಸಾರಾಂಶ
ಇಲ್ಲಿಗೆ ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಶ್ರೀ ಹೆಬ್ಬೆಟ್ಟ ಬಸವೇಶ್ವರರ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು.ಪ್ರತಿ ವರ್ಷದಂತೆ ಸೋಮವಾರ ಸಂಜೆ ದಳವಾಯಿ ಕೋಡಿಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೋಡಿ ಹಸುಗಳ ಯಳವಾರಕ್ಕೆ ಸೌಧೆ ಮರದ ದಿಮ್ಮಿಗಳನ್ನು ಕಟ್ಟಿಕೊಂಡು ಮೆರವಣಿಗೆ ಮೂಲಕ ದೇವಾಲಯದ ಆವರಣಕ್ಕೆ ಸೌಧೆಗಳನ್ನು ಸಾಗಿಸುವ ಕಾರ್ಯ ನಡೆಯಿತು.
ಕನ್ನಡಪ್ರಭ ವಾರ್ತೆ ಹಲಗೂರು

ಪೂಜೆ- ಪುರಸ್ಕಾರಗಳ ನಂತರ ಕೊಂಡಕ್ಕೆ ಬೆಂಕಿ ಹಾಕಲಾಯಿತು. ರಾತ್ರಿಯಿಡೀ ಕೊಂಡವನ್ನು ಸಿದ್ಧಗೊಳಿಸುವ ಕಾರ್ಯ ನಡೆಯಿತು. ಮತ್ತೊಂದೆಡೆ ರಾತ್ರಿಯಿಡೀ ದೇವಾಲಯಕ್ಕೆ ಆಗಮಿಸಿದ ಭಕ್ತರು ಶ್ರೀಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಸಮರ್ಪಿಸಿದರು. ಮಂಗಳವಾರ ಬೆಳಗ್ಗೆ ಆರು ಗಂಟೆ ಸುಮಾರಿಗೆ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ದೇವಾಲಯದ ಬಸವನಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ಸಲ್ಲಿಸಿದ ನಂತರ ಮಡಿ ಹಾಸಿಗೆ ಮೇಲೆ ತಮಟೆ ವಾದ್ಯಗಳ ಸಮೇತ ದೇವಾಲಯದ ಮುಂಭಾಗದ ಕೊಂಡದ ಬಳಿಗೆ ಆಗಮಿಸಿದ ಅರ್ಚಕ ಮಹದೇವಸ್ವಾಮಿ ಅವರು ನೆರೆದಿದ್ದ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಕೊಂಡ ಹಾಯುವುದರೊಂದಿಗೆ ಈ ಕೊಂಡೋತ್ಸವಕ್ಕೆ ತೆರೆ ಬಿದ್ದಿತು.ನಂತರ ಮಂಗಳವಾರ ಮಧ್ಯಾಹ್ನದವರೆಗೂ ಶ್ರೀ ಬಸವೇಶ್ವರ ವಿಗ್ರಹವನ್ನು ರಥದಲ್ಲಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ದಳವಾಯಿ ಕೋಡಿಹಳ್ಳಿ ಗ್ರಾಮದ ಮಹಿಳೆಯರು ಆರತಿ ಬೆಳಗಿ ಶ್ರೀ ಬಸವೇಶ್ವರರಿಗೆ ತಮ್ಮ ಭಕ್ತಿ ಸಮರ್ಪಿಸಿದರು.ಗ್ರಾಮದ ಮುಖಂಡರಾದ ಕುಮಾರ್, ಶಿವಕೆಂಚೇಗೌಡ, ಗೂಳಿಗೌಡ, ಡಿ.ಎಲ್. ಮಾದೇಗೌಡ, ರವೀಶ್, ಬಸವರಾಜು, ಶಿವಕುಮಾರ, ನಾಗರಾಜು ಹಾಜರಿದ್ದರು.----------