ಸಾರಾಂಶ
ವಿಷ್ಣುಸಮುದ್ರ ಕೆರೆಯ ಏರಿ ದಡದಲ್ಲಿರುವ ಶ್ರೀ ಭೀಷ್ಟಮ್ಮನವರ ಜಾತ್ರಾ ಮಹೋತ್ಸವನ್ನು ಬಿಟ್ರುವಳ್ಳಿ ಗ್ರಾಮಸ್ಥರ ವತಿಯಿಂದ ನಡೆಸಿ ಬಂದ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಶ್ರೀ ಭೀಷ್ಟಮ್ಮನವರನ್ನು ವಿಷ್ಣುಸಮುದ್ರ ಕೆರೆ ಏರಿಯ ಮೇಲೆ ಪ್ರತಿಷ್ಠಾಪಿಸಿದ್ದು, ಪ್ರತಿ ವರ್ಷ ದೀಪಾವಳಿ ಹಬ್ಬದ ತರುವಾಯ ಜಾತ್ರಾ ಮಹೋತ್ಸವ ನಡೆಸಲಾಗುತ್ತದೆ. ಗಣಪತಿ ಪೂಜೆ, ಗಂಗಾಪೂಜೆ, ಮಹಾಮಂಗಳಾರತಿ ನಡೆಸಿದ ಬಳಿಕ ಉತ್ಸವಮೂರ್ತಿ ಸನ್ನಿಧಾನದಲ್ಲಿ ಜಾತ್ರೆಯನ್ನು ನಡೆಸುತ್ತಾ ಬಂದ ಭಕ್ತರಿಗೆ ಶ್ರೀ ಭೀಷ್ಟಮ್ಮನವರ ಚಾರಿಟಬಲ್ ಟ್ರಸ್ಟ್ ಬಿಟ್ರುವಳ್ಳಿ ಮತ್ತು ಭಕ್ತರ ಸಹಕಾರದಿಂದ ಅನ್ನ ದಾಸೋಹ ವ್ಯವಸ್ಥೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ವಿಷ್ಣುಸಮುದ್ರ ಕೆರೆಯ ಏರಿ ದಡದಲ್ಲಿರುವ ಶ್ರೀ ಭೀಷ್ಟಮ್ಮನವರ ಜಾತ್ರಾ ಮಹೋತ್ಸವನ್ನು ಬಿಟ್ರುವಳ್ಳಿ ಗ್ರಾಮಸ್ಥರ ವತಿಯಿಂದ ನಡೆಸಿ ಬಂದ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.ಶ್ರೀ ಭೀಷ್ಟಮ್ಮನವರನ್ನು ವಿಷ್ಣುಸಮುದ್ರ ಕೆರೆ ಏರಿಯ ಮೇಲೆ ಪ್ರತಿಷ್ಠಾಪಿಸಿದ್ದು, ಪ್ರತಿ ವರ್ಷ ದೀಪಾವಳಿ ಹಬ್ಬದ ತರುವಾಯ ಜಾತ್ರಾ ಮಹೋತ್ಸವ ನಡೆಸಲಾಗುತ್ತದೆ. ಗಣಪತಿ ಪೂಜೆ, ಗಂಗಾಪೂಜೆ, ಮಹಾಮಂಗಳಾರತಿ ನಡೆಸಿದ ಬಳಿಕ ಉತ್ಸವಮೂರ್ತಿ ಸನ್ನಿಧಾನದಲ್ಲಿ ಜಾತ್ರೆಯನ್ನು ನಡೆಸುತ್ತಾ ಬಂದ ಭಕ್ತರಿಗೆ ಶ್ರೀ ಭೀಷ್ಟಮ್ಮನವರ ಚಾರಿಟಬಲ್ ಟ್ರಸ್ಟ್ ಬಿಟ್ರುವಳ್ಳಿ ಮತ್ತು ಭಕ್ತರ ಸಹಕಾರದಿಂದ ಅನ್ನ ದಾಸೋಹ ವ್ಯವಸ್ಥೆ ಮಾಡಲಾಯಿತು.
ಶ್ರೀ ಭೀಷ್ಟಮ್ಮನವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ.ವಿಷ್ಣುಸಮುದ್ರ ಕೆರೆಯನ್ನು ನಿರ್ಮಿಸುವ ಸಂದರ್ಭದಲ್ಲಿ ಕೆರೆ ಏರಿ ನಿಲ್ಲದೆ ನೀರು ಹರಿಯುತ್ತಿದ್ದು, ಈ ಸಂದರ್ಭದಲ್ಲಿ ಗೊಟ್ರುವಳ್ಳಿಯಿಂದ ಬಿಟ್ರುವಳ್ಳಿಗೆ ಬಂದ ಸೊಸೆಯ ಅಹುತಿ ಕೇಳಿದ್ದು, ಬಳಿಕ ಸೊಸೆ ಮಹಾಮಂಗಳಾರತಿ ನಡೆಸುವ ವೇಳೆ ಕೆರೆಗೆ ಆಹುತಿಯಾದ ದಿನದಿಂದ ಭೀಷ್ಟಮ್ಮ ಎಂಬ ಸೊಸೆ ಇಲ್ಲಿಯೇ ದಡ ಮೇಲೆ ಕಲ್ಲಾಗಿ ಕುಳಿತು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾ ಬಂದಿದ್ದಾಳೆ. ಇತ್ತೀಚಿಗೆ ಬಿಟ್ರುವಳ್ಳಿ ಗ್ರಾಮಸ್ಥರು ಸೇರಿ ವಿಷ್ಣುಸಮುದ್ರ ಕೆರೆ ಏರಿ ಮೇಲೆ ಸುಂದರ ಮಂಟಪ ನಿರ್ಮಿಸಲಾಗಿದೆ. ಅಲ್ಲದೆ ಬಿಟ್ರುವಳ್ಳಿ ಗ್ರಾಮದಲ್ಲಿ ಶ್ರೀ ಭೀಷ್ಟಮ್ಮನವರ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಗ್ರಾಮದಲ್ಲಿ ಸುಮಾರು ೪೦ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ದೇಗುಲ ನಿರ್ಮಿಸಿ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಚಂದ್ರಶೇಖರ್, ಶಾಂತೇಗೌಡ, ಚನ್ನಬಸವೇಗೌಡ, ಅಣ್ಣೇಗೌಡ, ಸುಧೀರ್, ಪರಮೇಶ್, ರಾಜಶೇಖರ್, ಬಸವರಾಜು, ಕಾಂತರಾಜು, ರಾಜೇಗೌಡ, ಹನುಮಂತೇಗೌಡ, ಶೇಖರ್, ಚಂದ್ರೇಗೌಡ, ಯೋಗೇಶ್, ಜಯಣ್ಣ, ಲಕ್ಷ್ಮಣ್, ಪುಟ್ಟಸ್ವಾಮಿ, ಬಿ.ಸಿ.ಉಮೇಶ್, ಜಗದೀಶ್, ಅಣ್ಣಪ್ಪ, ಈಶ್ವರಪ್ಪ, ಪರಮೇಶ್, ಶಿವಪ್ಪ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.