ಸಾರಾಂಶ
ಹಿಂದಿನ ಅಧ್ಯಕ್ಷ ಎಸ್.ಎಂ.ಗಂಗಾಧರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಎಚ್.ಬಿ.ಸ್ವಾಮಿ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಶ್ರೀಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರದ ಸಂಘದ ಅಧ್ಯಕ್ಷರಾಗಿ ಎಚ್.ಬಿ.ಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಿ.ಧರಣೆಕುಮಾರ್ ಘೋಷಣೆ ಮಾಡಿದ್ದಾರೆ.ಹಿಂದಿನ ಅಧ್ಯಕ್ಷ ಎಸ್.ಎಂ.ಗಂಗಾಧರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಎಚ್.ಬಿ.ಸ್ವಾಮಿ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ನೂತನ ಅಧ್ಯಕ್ಷ ಎಚ್.ಬಿ.ಸ್ವಾಮಿ ಅವರನ್ನು ಉಪಾಧ್ಯಕ್ಷರಾದ ಎಂ.ವೀರಭದ್ರಸ್ವಾಮಿ, ಬಿ.ವಿ.ಮಂಜುನಾಥ್ ಇತರರು ಅಭಿನಂದಿಸಿದರು. ನಂತರ ಸ್ವಾಮಿ ಮಾತನಾಡಿ, ಸಂಘದ ಅಭಿವೃದ್ಧಿಗೆ ಹಾಗೂ ಸಾಲ ವಸಲಾತಿಯಲ್ಲಿ ಎಲ್ಲಾ ನಿರ್ದೇಶಕರ ಜೊತೆಗೂಡಿ ವಸೂಲಾತಿ ಮಾಡಿ ಸಂಘದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತೇನೆ. ಹೊಸದಾಗಿ ಸಾಲ ಕೊಡಲು ಎಲ್ಲಾ ರೀತಿಯ ರೂಪುರೇಷಗಳನ್ನು ಮಾಡಿಕೊಳ್ಳಲಾಗುವುದು ಎಂದರು.ಈ ವೇಳೆ ನಿರ್ದೇಶಕರಾದ ತೋಂಟದಾರ್ಯ, ಎಂ.ವೀರೇಂದ್ರ, ಪಿ.ಬಿ.ಮಹದೇವಸ್ವಾಮಿ, ಪಿ.ತ್ರಿವೇಣಿ, ಸಿ.ಜಿ.ಗೌರಿಶಂಕರ್, ಬಸವರಾಜು, ಪಿ.ರಾಜಶೇಖರ, ವೈ.ಬಿ.ಶ್ರೀಕಂಠಸ್ವಾಮಿ, ಎಂ.ಸಿದ್ದಲಿಂಗಪ್ರಸಾದ್ ಹಾಜರಿದ್ದರು. ಸಂಘದ ಕಾರ್ಯದರ್ಶಿ ರಾಜಮಣಿ, ಸಿಬ್ಬಂದಿ ಶಾಲಿನಿ, ಜಯಕುಮಾರಿ, ಸೌಮ್ಯ ಉಪಸ್ಥಿತರಿದ್ದರು.
ಬಿ.ಬೋರೇಗೌಡರಿಗೆ ಸ್ನೇಹಿತರು, ಅಭಿಮಾನಿಗಳಿಂದ ಅಭಿನಂದನೆಶ್ರೀರಂಗಪಟ್ಟಣ:
5 ಬಾರಿಗೆ ಮನ್ಮುಲ್ ನಿರ್ದೇಶಕರಾಗಿ ಆಯ್ಕೆಯಾದ ತಾಲೂಕಿನ ಎಂ.ಶೆಟ್ಟಹಳ್ಳಿ ಬಿ.ಬೋರೇಗೌಡ ಅವರನ್ನು ಸ್ನೇಹಿತರು ಹಾಗೂ ಅಭಿಮಾನಿಗಳು ಅಭಿನಂಧಿಸಿದರು.ಪಟ್ಟಣದ ಹಾಲು ಒಕ್ಕೂಟದ ಉಪ ಕಚೇರಿಗೆ ಪುರಸಭೆ ಸದಸ್ಯ ಕೆ.ಬಿ.ಬಸವರಾಜುನೇತೃತ್ವದಲ್ಲಿ ತೆರಳಿ ಬೋರೇಗೌಡರನ್ನು ಅಭಿನಂದಿಸಿ ಶುಭ ಕೋರಿದರು.
ನಂತರ ಬಸವರಾಜು ಮಾತನಾಡಿ, ಜಿಲ್ಲೆಯ ಹೈನುಗಾರಿಕೆಯಲ್ಲಿ ತೊಡಗಿರುವ ರೈತ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಬಂದಿರುವ ಬಿ.ಬೋರೇಗೌಡರು ಸತತ 5 ನೇ ಬಾರಿಗೆ ಆಯ್ಕೆಯಾಗಲು ಕಾರಣ. ಇವರು ಮತ್ತಷ್ಟು ಉತ್ತಮ ಕೆಲಸಗಳ ಮಾಡಿ ರೈತರ ಪರವಾಗಿ ಧ್ವನಿಯಾಗಿ ನಿಲ್ಲಲ್ಲಿ ಎಂದು ಶುಭ ಆರೈಸಿದರು.ಈ ವೇಳೆ ಕಸಾಪ ಮಾಜಿ ಅಧ್ಯಕ್ಷ್ಷ ಪುರುಷೋತ್ತಮ ಚಿಕ್ಕಪಾಳ್ಯ, ಪತ್ರಕರ್ತರ ಗಂಜಾಂ ಮಂಜು ಸೇರಿದಂತೆ ಇತರರು ಇದ್ದರು.