ನಗರದ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಕಾರ್ತಿಕ ಮಾಸದ ದೀಪೋತ್ಸವದ ಸಂದರ್ಭದಲ್ಲಿ ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಆಶ್ರಯದಲ್ಲಿ 47ನೇ ವರ್ಷದ ಗುರ್ಜಿಯಲ್ಲಿ ದೀಪಾರಾಧಾನೋತ್ಸವ (ಮಂಗಳೂರಿನ ಪ್ರಥಮ ಗುರ್ಜಿ ದೀಪೋತ್ಸವ) ಸೋಮವಾರ ಸಂಭ್ರಮದಿಂದ ನಡೆಯಿತು.

ಮಂಗಳೂರು : ನಗರದ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಕಾರ್ತಿಕ ಮಾಸದ ದೀಪೋತ್ಸವದ ಸಂದರ್ಭದಲ್ಲಿ ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಆಶ್ರಯದಲ್ಲಿ 47ನೇ ವರ್ಷದ ಗುರ್ಜಿಯಲ್ಲಿ ದೀಪಾರಾಧಾನೋತ್ಸವ (ಮಂಗಳೂರಿನ ಪ್ರಥಮ ಗುರ್ಜಿ ದೀಪೋತ್ಸವ) ಸೋಮವಾರ ಸಂಭ್ರಮದಿಂದ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಶ್ರೀ ಕಾಳಿಕಾಂಬಾ, ಶ್ರೀ ಸುಬ್ರಮಣ್ಯ ದೇವರ ಉತ್ಸವ ಬಲಿ ನಡೆದು, ಲಾಲಾಕಿಯಲ್ಲಿ ದೇವರ ಉತ್ಸವ ನಗರದರಥಬೀದಿಯಲ್ಲಿ ತರಕಾರಿ ತಾಜಾ ಹಣ್ಣು ಹಂಪಲು ಪುಷ್ಪಗಳಿಂದ ಅಲಂಕೃತವಾದ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯಿಂದ ನಡೆಸಲ್ಪಡುವ ರಥಬೀದಿ ಜಂಕ್ಷನ್‌ನಲ್ಲಿ ನಡೆಯುವ ಗುರ್ಜಿ ಬಳಿ ತೆರಳಿ ಪೂಜೆ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಿಸಿ ಗುರ್ಜಿಗೆ ಅಲಂಕರಿಸಿದ ತರಕಾರಿ, ಹಣ್ಣು ಹಂಪಲನ್ನು ಭಕ್ತಾದಿಗಳ ಸಮಕ್ಷಮ ಬಹಿರಂಗವಾಗಿ ಏಲಂ ಮಾಡಲಾಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಲೋಕೇಶ್ ಆಚಾರ್ಯ ಚಿಲಿಂಬಿ, ಎರಡನೇ ಮೊಕ್ತೇಸರ ಕೆ.ಉಮೇಶ್ ಆಚಾರ್ಯ ಪೊಳಲಿ ಕರಿಯoಗಳ, ಮೂರನೇ ಮೊಕ್ತೇಸರ ಪಿ.ರವೀಂದ್ರ ಆಚಾರ್ಯ, ಮಂಗಳಾದೇವಿ ಹಾಗೂ ಆಡಳಿತ ಮಂಡಳಿ ಸದಸ್ಯರು, ನಿವೃತ್ತ ತಹಶೀಲ್ದಾರ್ ಕೆ.ಉಮೇಶ್ ಆಚಾರ್ಯ ಪಾಂಡೇಶ್ವರ, ಕ್ಷೇತ್ರದ ಮಾಜಿ ಮೊಕ್ತೇಸರರು, ಮಾಜಿ ಆಡಳಿತ ಮಂಡಳಿ ಸದಸ್ಯರು, ಶ್ರೀಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಸಿದ್ದಕಟ್ಟೆ ಮತ್ತು ಸದಸ್ಯರು, ವಿಶ್ವಬ್ರಾಹ್ಮಣ ಮಹಿಳಾ ಸಮಿತಿ, ದ.ಕ.ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿಶ್ವಕರ್ಮ ಯುವ ವೇದಿಕೆ, ವಿಶ್ವಕರ್ಮ ಯುವ ಮಿಲನ, ಗುರು ಸೇವಾ ಪರಿಷತ್ ಸದಸ್ಯರು ಹಾಗೂ ಭಕ್ತರು ಇದ್ದರು.