ಎಸ್‌ಎಸ್‌ಆರ್‌ವಿಎಂನಲ್ಲಿ ಶ್ರೀ ಕರುನಾಡು ಕಪ್‌: ಕ್ರಿಕೆಟ್‌, ಕಬಡ್ಡಿ, ಬಾಸ್ಕೆಟ್‌ಬಾಲ್‌ ಸ್ಪರ್ಧೆ

| Published : Nov 16 2025, 01:15 AM IST

ಎಸ್‌ಎಸ್‌ಆರ್‌ವಿಎಂನಲ್ಲಿ ಶ್ರೀ ಕರುನಾಡು ಕಪ್‌: ಕ್ರಿಕೆಟ್‌, ಕಬಡ್ಡಿ, ಬಾಸ್ಕೆಟ್‌ಬಾಲ್‌ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಿಕೆಟ್‌, ಕಬಡ್ಡಿ, ಬಾಸ್ಕೆಟ್‌ಬಾಲ್‌ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬೆಂಗಳೂರು: ಶ್ರೀ ಶ್ರೀ ರವಿಶಂಕರ್‌ ವಿದ್ಯಾ ಮಂದಿರ, ಬೆಂಗಳೂರು (ಈಸ್ಟ್‌) ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಥಮ ಬಾರಿಗೆ ಆಯೋಜಿಸಿದ ‘ಶ್ರೀ ಶ್ರೀ ಕರುನಾಡು ಕಪ್‌’ 2025 ಕ್ರೀಡಾಕೂಟ ಇತ್ತೀಚೆಗೆ ನಡೆಯಿತು.ಕ್ರೀಡಾಕೂಟವನ್ನು ಎಸ್‌ಎಸ್‌ಆರ್‌ವಿಎಂ (ಪೂರ್ವ) ಪ್ರಾಂಶುಪಾಲರಾದ ರೇಷ್ಮಾ ಗಣೇಶ್‌ ಉದ್ಘಾಟಿಸಿದರು. ಕ್ರಿಕೆಟ್‌, ಕಬಡ್ಡಿ, ಬಾಸ್ಕೆಟ್‌ಬಾಲ್‌ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. 14 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನ್‌ಮೆಂಟ್‌ನಲ್ಲಿ ವೈದೇಹಿ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ವಿಜೇತರಾಗಿ, ದೆಹಲಿ ಪಬ್ಲಿಕ್‌ ಸ್ಕೂಲ್‌ ಎಲೆಕ್ಟ್ರಾನಿಕ್‌ ಸಿಟಿ ರನ್ನರ್‌ ಅಪ್‌ ಗಳಿಸಿತು.14 ವರ್ಷದೊಳಗಿನ ಕಬಡ್ಡಿ ಹುಡುಗಿಯರ ವಿಭಾಗದಲ್ಲಿ ದೆಹಲಿ ಪಬ್ಲಿಕ್‌ ಇಂಟರ್‌ನ್ಯಾಷನಲ್‌ ಶಾಲೆ(ಉತ್ತರ) ಗೆದ್ದರೆ, ದೆಹಲಿ ಪಬ್ಲಿಕ್‌ ಶಾಲೆ ಬೆಂಗಳೂರು ಈಸ್ಟ್‌ ರನ್ನರ್‌ ಅಪ್‌ ಆಯಿತು. 17 ವರ್ಷದೊಳಗಿನ ಹುಡುಗಿಯರ ವಿಭಾಗದಲ್ಲಿ

ಆರ್‌ಎನ್‌ಎಸ್‌ ಇಂಟರ್‌ನ್ಯಾಷನಲ್‌ ಶಾಲೆ ಪ್ರಥಮ, ಎಸ್‌ಎಸ್‌ಆರ್‌ವಿಎಂ ಈಸ್ಟ್‌ ರನ್ನರ್‌ ಅಪ್‌ ಸ್ಥಾನ ಗಳಿಸಿತು. 14 ವರ್ಷದೊಳಗಿನವರ ಹುಡುಗರ ವಿಭಾಗದಲ್ಲಿ ಪ್ರಿನ್ಸ್‌ ಅಕಾಡೆಮಿ ಪ್ರಥಮ, ದೆಹಲಿ ಪಬ್ಲಿಕ್‌ ಇಂಟರ್‌ನ್ಯಾಷನಲ್‌ ಶಾಲೆ ಉತ್ತರ ದ್ವಿತೀಯ, 17ರ ವಯೋಮಿತಿ ವಿಭಾಗದ ಹುಡುಗರ ಸ್ಪರ್ಧೆಯಲ್ಲಿ ದೆಹಲಿ ಪಬ್ಲಿಕ್‌ ಶಾಲೆ ಬೆಂಗಳೂರು ಈಸ್ಟ್‌ ಪ್ರಥಮ, ಪ್ರಿನ್ಸ್‌ ಅಕಾಡೆಮಿ ದ್ವಿತೀಯ ಸ್ಥಾನಿಯಾಯಿತು.ಬಾಸ್ಕೆಟ್‌ಬಾಲ್‌ 16 ವರ್ಷದೊಳಗಿನವರ ಹುಡುಗಿಯರ ವಿಭಾಗದಲ್ಲಿ ಗೇರ್‌ ಇನೋವೇಟಿವ್‌ ಇಂಟರ್‌ನ್ಯಾಷನಲ್‌ ಶಾಲೆ ಪ್ರಥಮ, ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ ಬೆಂಗಳೂರು ಈಸ್ಟ್‌ ದ್ವಿತೀಯ ಸ್ಥಾನಿಯಾಯಿತು. ಹುಡುಗರ ವಿಭಾಗದಲ್ಲಿ ಗೇರ್‌ ಇನೋವೇಟಿವ್‌ ಇಂಟರ್‌ನ್ಯಾಷನಲ್‌ ಶಾಲೆ ಗೆದ್ದರೆ, ವಿಬ್‌ಗಯಾರ್‌ ಶಾಲೆ ರನ್ನರ್‌ ಅಪ್‌ ಆಯಿತು.

ವಿಜೇತರಿಗೆ ಟ್ರೋಫಿ ವಿತರಣೆ ವೇಳೆ ಪ್ರಾಂಶುಪಾಲೆ ಡಾ.ರೇಷ್ಮಾ ಗಣೇಶ್‌, ಉಪಪ್ರಾಂಶುಪಾಲರಾದ ಗೀತಾ ಜಿ, ಅಕಾಡೆಮಿಕ್‌ ಹೆಡ್‌ ದೀಪಾ, ದೈಹಿಕ ಶಿಕ್ಷಣ ಶಿಕ್ಷಕರಾದ ದಾಸಪ್ಪ, ಡಿ.ಕಿರಣ್‌ ಕುಮಾರ್‌, ಕಿಶೋರ್‌ ಕುಮಾರ್‌ ಉಪಸ್ಥಿತರಿದ್ದರು.