ಕಡೂರು: ಪಟ್ಟಣದ ಶ್ರೀ ಕೆಂಚಾಂಬ ದೇವಿ ಸಿಡಿ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ಶ್ರೀ ಕನಕರಾಯನ ಗುಡ್ಡದದ ಶ್ರೀ ಕನಕರಾಯ ಸ್ವಾಮಿಗೆ ಕ್ಷೀರಾಭಿಷೇಕ ಮತ್ತು ಪೂಜಾ ಕಾರ್ಯ ನೆರವೇರಿದವು. ಬಳಿಕ ದೊಡ್ಡಪೇಟೆ ಛತ್ರದ ಬೀದಿಯ ಶ್ರೀ ಕೆಂಚಾಂಬ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ಅಭಿಷೇಕ, ಅಲಂಕಾರ ಮತ್ತು ಪೂಜಾ ಕಾರ್ಯ ಸಲ್ಲಿಕೆಯಾದವು. ಮಧ್ಯಾಹ್ನ ಭಕ್ತರು ತಮ್ಮ ಮಕ್ಕಳಿಗೆ ಸಿಡಿ ಆಡಿಸುವ ಹರಕೆ ಹೊತ್ತಿದ್ದ ಭಕ್ತರ ಪಟ್ಟಣದ ಅನೇಕ ಮನೆಗಳಿಗೆ ಮೆರವಣಿಗೆಯೊಂದಿಗೆ ತೆರಳಿದ ದೇವರು ಮಕ್ಕಳನ್ನು ಕೆಂಚಾಂಬ ದೇವಾಲಯದ ಸಿಡಿ ಆಡಿಸುವ ಮೈದಾನಕ್ಕೆ ಕರೆ ತರಲಾಯಿತು.
ಕಡೂರು: ಪಟ್ಟಣದ ಶ್ರೀ ಕೆಂಚಾಂಬ ದೇವಿ ಸಿಡಿ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ಬೆಳಿಗ್ಗೆ ಶ್ರೀ ಕನಕರಾಯನ ಗುಡ್ಡದದ ಶ್ರೀ ಕನಕರಾಯ ಸ್ವಾಮಿಗೆ ಕ್ಷೀರಾಭಿಷೇಕ ಮತ್ತು ಪೂಜಾ ಕಾರ್ಯ ನೆರವೇರಿದವು. ಬಳಿಕ ದೊಡ್ಡಪೇಟೆ ಛತ್ರದ ಬೀದಿಯ ಶ್ರೀ ಕೆಂಚಾಂಬ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ಅಭಿಷೇಕ, ಅಲಂಕಾರ ಮತ್ತು ಪೂಜಾ ಕಾರ್ಯ ಸಲ್ಲಿಕೆಯಾದವು. ಮಧ್ಯಾಹ್ನ ಭಕ್ತರು ತಮ್ಮ ಮಕ್ಕಳಿಗೆ ಸಿಡಿ ಆಡಿಸುವ ಹರಕೆ ಹೊತ್ತಿದ್ದ ಭಕ್ತರ ಪಟ್ಟಣದ ಅನೇಕ ಮನೆಗಳಿಗೆ ಮೆರವಣಿಗೆಯೊಂದಿಗೆ ತೆರಳಿದ ದೇವರು ಮಕ್ಕಳನ್ನು ಕೆಂಚಾಂಬ ದೇವಾಲಯದ ಸಿಡಿ ಆಡಿಸುವ ಮೈದಾನಕ್ಕೆ ಕರೆ ತರಲಾಯಿತು.ಭಕ್ತರು ದೇವರಿಗೆ ಅರಿಶಿನ ಕುಂಕುಮ ಎರಚಿ ನಮಸ್ಕರಿಸಿದರು ಬಳಿಕ ಶ್ರೀಕೆಂಚಾಂಬನನ್ನು ಸಿಡಿ ಆಡಿಸುವ ಮೂಲಕ ಸಿಡಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಬ್ಯಾಗಡೇಹಳ್ಳಿ ತಿಮ್ಮಯ್ಯ ಹಾಗೂ ಜನಮಿತ್ರ ನಾರಾಯಣ ಕುಟುಂಬದವರು ಸಿಡಿ ನಡೆಸಿಕೊಟ್ಟರು. ನೂರಾರು ಸಂಖ್ಯೆಯಲ್ಲಿ ಭಕ್ತರು ಬರುವ ಮೂಲಕ ಸಿಡಿ ಮಹೋತ್ಸವ ಯಾವುದೇ ಗೊಂದಲವಿಲ್ಲದೆ ಸಂಪನ್ನಗೊಂಡಿತು.
ಮಧ್ಯಾಹ್ನ ಓಕುಳಿ ಹಾಗೂ ಸಂಜೆ ಮಡಲಕ್ಕಿ ಸೇವೆ ನಡೆಯಿತು. ಇದೇ ಸಂದರ್ಭದಲ್ಲಿ ಹನ್ನೆರಡು ಹರಿವಾಣದ ಗೌಡರಾದ ಭರತ್ ಕೆಂಪರಾಜು, ಪುರಸಭೆ ಸದಸ್ಯ ತೋಟದ ಮನೆ ಮೋಹನ್, ಈರಳ್ಳಿ ರಮೇಶ್, ನಲ್ಲೂರಿ ಸುರೇಶ್, ದೇವಾಲಯ ಸಮಿತಿ ಮುಖಂಡರು, ಭಕ್ತರು ಸೇರಿದಂತೆ ಮತ್ತಿತರರು ಇದ್ದರು.24ಕೆಕೆಡಿಯು1. ಕಡೂರು ಪಟ್ಟಣದ ಛತ್ರದ ಬೀದಿಯಲ್ಲಿರುವ ಶ್ರೀ ಕೆಂಚಾಂದೇವಿಯವರ ಸಿಡಿ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.