ಕವಿತಾಳ ವಿವಿಧೆಡೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

| Published : Aug 27 2024, 01:36 AM IST

ಸಾರಾಂಶ

ಕವಿತಾಳ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ವೆಂಕಟೇಶ ನಾಯಕ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಿಬ್ಬಂದಿ ಉಪಸ್ಥಿತರಿದ್ದರು.

ಕವಿತಾಳ: ಪಟ್ಟಣದ ವಿವಿಧೆಡೆ ಶ್ರೀ ಕೃಷ್ಣ ಜಯಂತಿಯನ್ನು ಸೋಮವಾರ ಅದ್ಧೂರಿಯಾಗಿ ಆಚರಿಸಲಾಯಿತು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ವೆಂಕಟೇಶ ನಾಯಕ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಿಬ್ಬಂದಿ ಉಪಸ್ಥಿತರಿದ್ದರು.

ಇಲ್ಲಿನ ಪಪಂಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಶ್ರೀಕೃಷ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಮಾಜದ ಮುಖಂಡರಾದ ತಾಯಣ್ಣ ಯಾದವ, ರಾಜು ಯಾದವ, ಬಸವರಾಜ ಯಾದವ, ಮಲ್ಲಪ್ಪ ಯಾದವ, ತಿಮ್ಮಣ್ಣ ಯಾದವ, ಯಂಕಪ್ಪ ಯಾದವ, ಮೌನೇಶ್ ಯಾದವ, ಯಮನಪ್ಪ ಯಾದವ, ಬಸವರಾಜ ಯಾದವ, ಯಶೋದಾರಾಜ, ಯಲ್ಲಮ್ಮ, ಬಸ್ಸಮ್ಮ, ಪದ್ದಮ್ಮ ಸಾಬಮ್ಮ, ಶಿವಮ್ಮ, ಯಂಕಮ್ಮ ಹಾಗೂ ಪಪಂ ಸಿಬ್ಬಂದಿ ರಾಘವೇಂದ್ರ ಮುತಾಲಿಕ್‌, ಪ್ರಶಾಂತ ಕುಮಾರ, ರಾಘವೇಂದ್ರ, ರಾಮು, ವೆಂಕಟೇಶ, ರಾಮಲಿಂಗಪ್ಪ, ದರ್ವೇಶ ಸೇರಿದಂತೆ ಮತ್ತಿತರರು ಇದ್ದರು.

ಕುಂಭ ಕಳಸದೊಂದಿಗೆ ಆಗಮಿಸಿದ್ದ ಮಹಿಳೆಯರು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.