ಶ್ರೀ ಕೃಷ್ಣ ಜನ್ಮಾಷ್ಟಮಿ ಸೀಮಿತ ಆಚರಣೆ ಅಲ್ಲ

| Published : Aug 27 2024, 01:45 AM IST

ಸಾರಾಂಶ

ಹನೂರು ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾಗಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶಾಸಕ ಎಂ ಆರ್ ಮಂಜುನಾಥ್ ಮಾತನಾಡಿದರು.

ಹನೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಾಜಕ್ಕೆ ಸೀಮಿತ ಆಚರಣೆ ಅಲ್ಲ. ಎಲ್ಲ ಸಮಾಜಕ್ಕೂ ಅನ್ವಯವಾಗಿದೆ ಎಂದು ಶಾಸಕ ಎಂ.ಆರ್‌. ಮಂಜುನಾಥ್‌ ಹೇಳಿದರು. ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಪರಮಾತ್ಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜೆಯನ್ನು‌ ನೆರವೇರಿಸಿ ಮಾತನಾಡಿದರು. ಹಲವು ವರ್ಷಗಳಿಂದಲೂ ಕೂಡ ತಾಲೂಕಿನ ಕೆಂಚಯ್ಯ ದೊಡ್ಡಿ , ಕೆಂಪಯ್ಯನಟ್ಟಿ ಎಂ.ಟಿ ದೊಡ್ಡಿ ಹಾಗೂ ಎಲ್ಲೇಮಾಳ ಸೇರಿ ಹಲವು ಗ್ರಾಮಗಳಲ್ಲಿ‌ ಜರುಗುವ ಜನ್ಮಾಷ್ಟಮಿಯಲ್ಲೂ ಪ್ರತಿ ಬಾರಿ ಪಾಲ್ಗೊಳ್ಳುತ್ತಿದ್ದೇನೆ. ಮುಂದಿನ ವರ್ಷಗಳಲ್ಲಿ ವಿಜೃಂಭಣೆಯಿಂದ ತಾಲೂಕು ಕೇಂದ್ರದಲ್ಲಿ ಆಚರಣೆ ಮಾಡಲು ಚಿಂತನೆ ಇದೆ ಎಂದು ಭರವಸೆ ನೀಡಿದರು. ಗೋಪಾಲಕರ ಸಮುದಾಯ ಬೇಡಿಕೆಗಳನ್ನು ಈಡೇರಿಸುವ ಕೆಲಸಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಮಾತನಾಡಿ, ಯಾವುದೇ ಧರ್ಮ ಆಗಿರಲಿ ಅದರಲ್ಲಿನ ಉತ್ತಮ ಸಂದೇಶ ಸಮಾಜಕ್ಕೆ ಒಳತಾಗುವಂತಾಗಲಿ ಎಂದರು. ಈ ಸಂದರ್ಭದಲ್ಲಿ ಇಒ ಉಮೇಶ್, ದೈಹಿಕ ಪರಿವೀಕ್ಷಕ ಮಹದೇವ್, ಯಾದವ ಸಮಾಜದ ಮುಖಂಡರಾದ ಎಸಿಪಿ ಮಹಾದೇವ, ಸುರೇಶ್, ಶಿಕ್ಷಕ ಚಿನ್ನಪ್ಪಯ್ಯ, ಮಹೇಶ್, ಚಿನ್ನವೆಂಕಟ, ನಾರಾಯಣ್, ಮಹೇಶ್ ನಾರಾಯಣ, ಮುತ್ತುರಾಜು, ನಾಗರಾಜು, ವಿಜಯ್ ಕುಮಾರ್ ಸೇರಿದಂತೆ ಗ್ರಾಮ ಆಡಳಿತಾಧಿಕಾರಿ ಶೇಷಣ್ಣ, ಕಾವ್ಯ ಸೇರಿದಂತೆ ಮತ್ತಿತರರು ಇದ್ದರು.