ಶ್ರೀಕೃಷ್ಣ ಕಥಾ ವೇಷ, ಶ್ರೀ ಕೃಷ್ಣ ಪಾಂಚಜನ್ಯ ಸ್ಪರ್ಧೆ: ದಹಿ ಹಂಡಿ ಪ್ರದರ್ಶನ

| Published : Sep 18 2025, 01:11 AM IST

ಶ್ರೀಕೃಷ್ಣ ಕಥಾ ವೇಷ, ಶ್ರೀ ಕೃಷ್ಣ ಪಾಂಚಜನ್ಯ ಸ್ಪರ್ಧೆ: ದಹಿ ಹಂಡಿ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯಲ್ಲಿ ಗಣ್ಯರ ಕೂಡುವಿಕೆಯಲ್ಲಿ ಅದ್ಧೂರಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಉಡುಪಿ: ನಗರದ ಖ್ಯಾತ ದಂತ ವೈದ್ಯ ಡಾ. ವಿಜಯೇಂದ್ರ ವಸಂತ್, ಬ್ರಹ್ಮಾವರ ಜಿ ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಪ್ರಕಾಶಚಂದ್ರ ಶೆಟ್ಟಿ, ಹೊಟೇಲ್ ಉದ್ಯಮಿ ಭುವನೇಂದ್ರ ಕಿದಿಯೂರ್, ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ ನ ಪ್ರಭಾಕರ್ ನಾಯಕ್ ಅಮ್ಮುಂಜೆ, ಮಸ್ಕತ್ ಉದ್ಯಮಿ ಯುವರಾಜ್ ಸಾಲಿಯಾನ್ ಅವರ ಜಂಟಿ ಆಶ್ರಯದಲ್ಲಿ ಉಡುಪಿಯಲ್ಲಿ ಅದ್ಧೂರಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಭಾವಿ ಪರ್ಯಾಯ ಪೀಠಾರೋಹಣಗೈಯಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅವರ ಪತ್ನಿ ಶ್ರುತಿ, ರಂಗನಟಿ ಪೂರ್ಣಿಮಾ ಸುರೇಶ್, ಪರ್ಯಾಯ ಸಮಿತಿಯ ಕಾರ್ಯದರ್ಶಿ ಮೋಹನ್ ಭಟ್ ಹಾಗೂ ಆಯೋಜಕರು ಹಾಜರಿದ್ದರು. ನಂತರ ನಡೆದ ಶ್ರೀ ಕೃಷ್ಣ ಕಥಾ ವೇಷ ಸ್ಪರ್ಧೆ ಹಾಗೂ ಶಂಖ ಮೊಳಗಿಸುವ ಶ್ರೀ ಕೃಷ್ಣ ಪಾಂಚಜನ್ಯ ಸ್ಪರ್ಧೆಗಳಲ್ಲಿ 110 ಕ್ಕೂ ಹೆಚ್ಚು ಮಕ್ಕಳು ವೇಷ ಭಾಗವಹಿಸಿ ಸಂಭ್ರಮಿಸಿದರು. ವಿಜೇತ ಮಕ್ಕಳನ್ನು ಅಭಿನಂದಿಸಿ ಪಾರಿತೋಷಕಗಳನ್ನು ನೀಡಲಾಯಿತು. ಅದೃಷ್ಟಶಾಲಿ ಮಗುವಿಗೆ ಚೀಟಿ ಎತ್ತಿ ಬಾಲ ಕೃಷ್ಣನ ವಿಗ್ರಹ ನೀಡಲಾಯಿತು.

ಡಾ. ವಿಜಯೇಂದ್ರ ಸ್ವಾಗತಿಸಿದರು. ಶ್ರೀ ಪ್ರಕಾಶಚಂದ್ರ ಶೆಟ್ಟಿ ವಂದಿಸಿದರು. ಪ್ರೀತಿ ಸನಿಲ್ ಕಾರ್ಯಕ್ರಮ ನಿರ್ವಹಿಸಿದರು. ಸುಪ್ರೀತ, ರಕ್ಷ ಹಾಗೂ ಭವಾನಿ, ಡಾ.ಸಂಧ್ಯಾ ಕಾರ್ಯಕ್ರಮ ಸಂಯೋಜಿಸಿದರು.ಡಾ. ಪಲ್ಲವಿ ವಿಜಯೇಂದ್ರ ನೇತೃತ್ವದಲ್ಲಿ ದಹಿ ಹಂಡಿ - ಮೊಸರು ಗಡಿಗೆ ಒಡೆಯುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದನ್ನು ಸಾವಿರಾರು ಮಂದಿ ವೀಕ್ಷಿಸಿದರು.