ಶ್ರೀಕೃಷ್ಣನ ಬೋಧನೆ ಬದುಕಿಗೆ ದಾರಿದೀಪ

| Published : Aug 17 2025, 02:33 AM IST

ಸಾರಾಂಶ

ನಾನು ಎಂಬ ಅಹಂಕಾರ ಬಿಟ್ಟಾಗ ಮಾತ್ರ ಜಗತ್ತು ಖುಷಿ ಕೊಡುತ್ತೆ, ಏನಿದಿಯೂ ಅದನ್ನು ಗೌರವಿಸಿ ಅನುಭವಿಸುವುದನ್ನು ಕಲಿತಾಗ ಮಾತ್ರ ಸಂತೃಪ್ತಿ ಹೊಂದಬಹುದಾಗಿದೆ

ಕೊಟ್ಟೂರು: ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆ ಪ್ರತಿಯೊಬ್ಬರ ಬದುಕಿಗೆ ದಾರಿ ದೀಪವಾಗಿದೆ ಎಂದು ತಹಸೀಲ್ದಾರ್‌ ಅಮರೇಶ ಜಿ.ಕೆ. ಹೇಳಿದರು.

ಶನಿವಾರ ತಾಲೂಕಾಡಳಿತದಿಂದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಹಮ್ಮಿಕೊಂಡಿದ ಶ್ರೀಕೃಷ್ಣ ಜಯಂತಿ ಅಂಗವಾಗಿ ಶ್ರೀಕೃಷ್ಣ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿದರು.

ನಾನು ಎಂಬ ಅಹಂಕಾರ ಬಿಟ್ಟಾಗ ಮಾತ್ರ ಜಗತ್ತು ಖುಷಿ ಕೊಡುತ್ತೆ, ಏನಿದಿಯೂ ಅದನ್ನು ಗೌರವಿಸಿ ಅನುಭವಿಸುವುದನ್ನು ಕಲಿತಾಗ ಮಾತ್ರ ಸಂತೃಪ್ತಿ ಹೊಂದಬಹುದಾಗಿದೆ ಎಂದು ಶ್ರೀಕೃಷ್ಣ ಹೇಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದರು ಎಂದರು.

ಚಿರಿಬಿ ಗ್ರಾಮದ ಯಾದವ ಸಮುದಾಯದ ಮುಖಂಡ ಹೊಸಮನಿ ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯ ಎಸ್.ಗಂಗಾಧರ ಮಾತನಾಡಿದರು.

ಗ್ರೇಡ್-2 ತಹಸೀಲ್ದಾರ್ ಪ್ರತಿಭ ಎಂ.ಶಿರಸ್ತಧಾರ್ ಎಸ್.ರೇಖಾ, ದೇವರಾಜ ಅರಸು, ಮಂಜುನಾಥ ದ್ಯಾವಮ್ಮ, ಮಂಜಪ್ಪ ಸೌಜನ್ಯ, ಜ್ಯೋತಿ ಬಾಯಿ, ಚಿರಿಬಿ ಭೀಮಪ್ಪ, ಎಸ್, ಹನುಂತಪ್ಪ, ಎಸ್.ನಾಗಪ್ಪ, ಪೂಜಾರಿ ಗೋವಿದಪ್ಪ, ಎನ್.ಕೊಟ್ರೇಶ್, ಕೆ.ವಿಜಯಕುಮಾರ್ ಭಾಗವಹಿಸಿದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.