ಸಾರಾಂಶ
ಲೋಕಾಪುರ: ಪಟ್ಟಣದ ಆರಾಧ್ಯ ದೈವ ಶ್ರೀ ಲೋಕೇಶ್ವರ ಜಾತ್ರಾ ಮಹೋತ್ಸವಕ್ಕೆ ಮಾ.೫ರಂದು ಚಾಲನೆ ದೊರೆತಿದ್ದು, ೧೩ರವರೆಗೆ ವಿಜೃಭಂಣೆಯಿಂದ ನಡೆಯಲಿದ್ದು, ೯ರಂದು ಮಹಾರಥೋತ್ಸವ ಜರುಗಲಿದೆ.
ಕನ್ನಡಪ್ರಭ ಜಾತ್ರೆ ಲೋಕಾಪುರ: ಪಟ್ಟಣದ ಆರಾಧ್ಯ ದೈವ ಶ್ರೀ ಲೋಕೇಶ್ವರ ಜಾತ್ರಾ ಮಹೋತ್ಸವಕ್ಕೆ ಮಾ.೫ರಂದು ಚಾಲನೆ ದೊರೆತಿದ್ದು, ೧೩ರವರೆಗೆ ವಿಜೃಭಂಣೆಯಿಂದ ನಡೆಯಲಿದೆ.
ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಮತ್ತು ಪಟ್ಟಣದ ಗಣ್ಯರಾದ ಲೋಕಣ್ಣ ಚನ್ನಪ್ಪ ಉದಪುಡಿ ಅವರ ಸಹಕಾರ ಜಾತ್ರಾ ಕಮಿಟಿ ಅಧ್ಯಕ್ಷ ಕಿರಣರಾವ್ ಮೋಹನರಾವ್ ದೇಸಾಯಿ ಅವರ ನೇತೃತ್ವದಲ್ಲಿ ಜಾತ್ರೆ ಜರುಗಲಿದೆ.ಮಂಗಳವಾರ ಕಳಸ ಮತ್ತು ನಂದಿಕೋಲು ಮೆರವಣಿಗೆ ಸಂಭ್ರಮದಿಂದ ಜರುಗಿಲು. ಮಾ.೬ರಂದು ನಂದಿಕೋಲು ಉತ್ಸವ, ಮಾ.೭ರಂದು ಗ್ರಾಮದೇವತೆಗೆ ಉಡಿ ತುಂಬುವುದು, ಮಾ.೮ರಂದು ಮಹಾಶಿವರಾತ್ರಿ ನಿಮಿತ್ತ ಶ್ರೀ ಲೋಕೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಲಿದೆ. ಸಂಜೆ ೬ಕ್ಕೆ ಲೋಕೇಶ್ವರ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘದ ವತಿಯಿಂದ ರಾಜ್ಯಮಟ್ಟದ ಭಜನಾ ಉತ್ಸವ ನಡೆಯಲಿದೆ.
ಮಾ.೯ರಂದು ಸಂಜೆ ೫ಕ್ಕೆ ವಿಜೃಂಭಣೆಯಿಂದ ಮಹಾರಥೋತ್ಸವ ಜರಗಲಿದೆ. ರಾತ್ರಿ ೧೦ ಗಂಟೆಗೆ ಶ್ರೀ ಜ್ಞಾನೇಶ್ವರ ನಾಟ್ಯ ಸಂಘ ಲೋಕಾಪುರ ಅವಂರಿಂದ ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ನಾಟಕ ಪ್ರದರ್ಶನ, ಮಾ.೧೩ರಂದು ಕಳಸ ಇಳಿಸುವುದು. ಕುಸ್ತಿ ನಂತರ ಮಾನ ಪಾನ ಕಾರ್ಯಕ್ರಮ. ರಾತ್ರಿ ೯ ಗಂಟೆಗೆ ಮಹಾಂತೇಶ ಅಣ್ಣಾ ಅಭಿಮಾನಿ ಬಳಗದ ವತಿಯಿಂದ ನಾಟಕ ಪ್ರದರ್ಶನ ನಡೆಯಲಿದೆ.ಸ್ಪರ್ಧೆಗಳು: ಮಾ.೧೦ರಂದು ತೆರೆಬಂಡಿ ಸ್ಪರ್ಧೆ ಮತ್ತು ಸುತಬಂಡಿ ಸ್ಪರ್ಧೆ, ಮಾ.೧೧ರಂದು ರಂಗೋಲಿ ಸ್ಪರ್ಧೆ, ಫೆ.೧೨ರಂದು ನಿಮಿಷದ ಚಕ್ಕಡಿ ಓಡಿಸುವ ಸ್ಪರ್ಧೆ ಹಾಗೂ ಮಾ.೧೩ರಂದು ಚಕ್ಕಡಿ ಒಡಿಸುವ ಸ್ಪರ್ಧೆ (ಒಂದು ಎತ್ತು ಒಂದು ಕುದುರೆ), ಚಕ್ಕಡಿ ಮತ್ತು ಕುಸ್ತಿ ಸ್ಪರ್ಧೆಗಳು ಜರಗಲಿವೆ.
ಜಿಲ್ಲೆಯ ಮುಧೋಳ ತಾಲೂಕಿನ ದಕ್ಷಿಣಕ್ಕೆ ಇರುವ ಲೋಕೇಶ್ವರ ಜಾತ್ರೆ ಈ ಭಾಗದ ಬಹುದೊಡ್ಡ ಜಾತ್ರೆಯಾಗಿದೆ. ಈ ಪ್ರಸಿದ್ಧ ಜಾತ್ರೆಗೆ ರಾಜ್ಯದ ಮೂಲೆ-ಮೂಲೆಗಳಿಂದ ಭಕ್ತರ ಆಗಮನದ ಜತೆಗೆ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳನಾಡು ರಾಜ್ಯಗಳಲ್ಲಿ ಭಕ್ತರ ಮಹಾಪೂರವೇ ಹರಿದು ಬರುತ್ತದೆ. ಅನ್ನಪ್ರಸಾದ: ಮಾ.೯ ರಿಂದ ೧೩ರವರೆಗೆ ಬರುವ ಸಕಲ ಭಕ್ತಾಧಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಜಾತ್ರಾ ಕಮೀಟಿ ತಿಳಿಸಿದೆ.;Resize=(128,128))
;Resize=(128,128))
;Resize=(128,128))
;Resize=(128,128))