ಶ್ರೀ ಪಂಚಬ್ರಹ್ಮ ಕಾಳಿಕಾದೇವಿಗೆ ವಿಶೇಷ ಪೂಜೆ

| Published : Feb 09 2025, 01:15 AM IST

ಸಾರಾಂಶ

ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಮಹಾಗಣಪತಿ ಹೋಮ, ಅಷ್ಟ ದಿಕ್ಪಾಲಕ ಹೋಮ, ಗಾಯತ್ರಿ ವಿಶ್ವಕರ್ಮ ಹೋಮ, ದುರ್ಗಾ ಹೋಮ, ಕಾಳಿಕಾ ದೇವತಾ ಹೋಮ, ಸುಮಂಗಲಿಯರಿಂದ ಲಲಿತ ಸಹಸ್ರನಾಮ ನಂತರ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ತಿಪಟೂರು: ನಗರದ ಕೋಟೆ ಶ್ರೀ ಪಂಚಬ್ರಹ್ಮ ಕಾಳಿಕಾದೇವಿ ದೇವಾಲಯದಲ್ಲಿ ೨೩ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ವೈಭವಯುತವಾಗಿ ನಡೆಯಿತು. ಶ್ರೀ ಪಂಚ ಬ್ರಹ್ಮ ಕಾಳಿಕಾದೇವಿಗೆ ಪಂಚಾಮೃತ ಅಭಿಷೇಕ, ಗಂಗಾವರಣ, ಮಹಾಗಣಪತಿ ಪೂಜೆ, ಸ್ವಸ್ತಿ ಪುಣ್ಯ ವಾಚನ ದೇವನಾಂದಿ ನವಗ್ರಹ ಆರಾಧನೆ, ಪಂಚಬ್ರಹ್ಮ ಸಹಿತ ವಿಶ್ವಕರ್ಮ ಆರಾಧನೆ, ಕಾಳಿಕಾದೇವಿಯವರ ಪ್ರಧಾನ ಕಳಸ ಸ್ಥಾಪನೆ, ಆವಾಹಿತ ದೇವತಾ ಪೂಜಾ ನಂತರ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಮಹಾಗಣಪತಿ ಹೋಮ, ಅಷ್ಟ ದಿಕ್ಪಾಲಕ ಹೋಮ, ಗಾಯತ್ರಿ ವಿಶ್ವಕರ್ಮ ಹೋಮ, ದುರ್ಗಾ ಹೋಮ, ಕಾಳಿಕಾ ದೇವತಾ ಹೋಮ, ಸುಮಂಗಲಿಯರಿಂದ ಲಲಿತ ಸಹಸ್ರನಾಮ ನಂತರ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ ನಗರದ ರಾಜಬೀದಿಗಳಲ್ಲಿ ಶ್ರೀ ಪಂಚಬ್ರಹ್ಮ ಕಾಳಿಕಾದೇವಿಯವರ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಲೋಕೇಶ್ವರ್, ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್, ನಗರಸಭಾ ಉಪಾಧ್ಯಕ್ಷೆ ಮೇಘನಾ, ವಿಶ್ವಕರ್ಮ ಮಹಿಳಾ ರಾಜ್ಯಾಧ್ಯಕ್ಷೆ ಡಾ ವಸಂತ ಮುರಳಿ ಸೇರಿ ಅಪಾರ ಭಕ್ತರು ಪಾಲ್ಗೊಂಡಿದ್ದರು.