ಹೊಸಪೇಟೆಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಉತ್ತರಾಧನೆ

| Published : Aug 13 2025, 12:30 AM IST

ಹೊಸಪೇಟೆಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಉತ್ತರಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರ ಸೇರಿದಂತೆ ತಾಲೂಕಿನ ವಿವಿಧ ಶ್ರೀರಾಯರ ಮಠಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾಧನೆ ನಿಮಿತ್ತ ಮಹಾರಥೋತ್ಸವ ಮಂಗಳವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರ ಸೇರಿದಂತೆ ತಾಲೂಕಿನ ವಿವಿಧ ಶ್ರೀರಾಯರ ಮಠಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾಧನೆ ನಿಮಿತ್ತ ಮಹಾರಥೋತ್ಸವ ಮಂಗಳವಾರ ನಡೆಯಿತು.

ನಗರದ ರಾಣಿಪೇಟೆ ರಾಯರ ಮಠದಲ್ಲಿ ಉತ್ತರಾಧನೆ ಪ್ರಯುಕ್ತ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ಸರ್ವಸೇವಾ, ಕನಕಾಭಿಷೇಕ, ಮಹಾನೈವೇದ್ಯ, ಹಸ್ತೋದಕ ಜರುಗಿತು. ಅಲಂಕಾರ ಪಂಕ್ತಿ, ಭಕ್ತರಿಗೆ ಅನ್ನದಾನ ನೆರವೇರಿಸಲಾಯಿತು. ಬೆಳಗ್ಗೆ ಪ್ರಮುಖ ಮಾರ್ಗದಲ್ಲಿ ಉತ್ಸವಮೂರ್ತಿ ರಥೋತ್ಸವ ನಡೆಯಿತು.

ಭಜನೆ, ಕೀರ್ತನೆಗಳೊಂದಿಗೆ ನೆರವೇರಿಸಲಾಯಿತು. ಮಠದ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಮಾರುತಿ ಆಚಾರ್ಯ ಇತರರಿದ್ದರು.

ನಗರದ ಗಾಂಧಿ ಕಾಲನಿ ರಾಯರ ಮಠದಲ್ಲಿ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ಸರ್ವಸೇವಾ, ಕನಕಾಭಿಷೇಕ, ಮಹಾನೈವೇದ್ಯ, ಹಸ್ತೋದಕ ನಡೆಸಲಾಯಿತು. ಶ್ರೀಮಠದ ಆವರಣದಲ್ಲಿ ರಥೋತ್ಸವ ಜರುಗಿತು. ವ್ಯವಸ್ಥಾಪಕ ಕೃಷ್ಣಮೂರ್ತಿ ಇತರರಿದ್ದರು.

ನಗರದ ವಿಜಯ ಚಿತ್ರಮಂದಿರ ಸಮೀಪದ ರಾಯರ ಮಠಗಳಲ್ಲಿ ಬೆಳಗ್ಗೆ ವಿಶೇಷವಾಗಿ ಹಾಲಿನ ಅಭಿಷೇಕ, ಫಲ ಪಂಚಾಮೃತಾಭಿಷೇಕ, ಸರ್ವಸೇವಾ, ಕನಕಾಭಿಷೇಕ, ಮಹಾನೈವೇದ್ಯ, ಹಸ್ತೋದಕ ನಡೆಸಲಾಯಿತು. ನಂತರ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಆರಾಧನೆ ಪ್ರಯುಕ್ತ ರಾಯರ ಬೃಂದಾವನಗಳಿಗೆ ವಿಶೇಷವಾಗಿ ರಜತ, ರೇಷ್ಮೆ ಸೇರಿದಂತೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಯಿತು. ಮಠಾಧಿಕಾರಿ ಭೀಮಸೇನಾಚಾರ್ಯ, ಪವನಾಚಾರ್ಯ ಇತರರಿದ್ದರು.

ತಾಲೂಕಿನ ಕಮಲಾಪುರ ಪಟ್ಟಣದ ಶ್ರೀರಾಯರ ಮಠದಲ್ಲಿ ವಿಶೇಷವಾಗಿ ಉತ್ತರಾಧನೆ ನಡೆಯಿತು. ಕನಕಾಭಿಷೇಕ, ರಾಯರ ಪಾದುಕ ಪೂಜೆ, ನೈವೇದ್ಯ ಮಹಾಮಂಗಳಾರತಿ ನಡೆಯಿತು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಬೆಳಗ್ಗೆ ಕಮಲಾಪುರದ ಪ್ರಮುಖ ಮಾರ್ಗದಲ್ಲಿ ರಥೋತ್ಸವ ನಡೆಯಿತು.

ವ್ಯವಸ್ಥಾಪಕ ಗುಂಜಳ್ಳಿ ಟೀಕಾಚಾರ್ಯ, ಮಂತ್ರಾಲಯ ಗುರುಸಾರ್ವಭೌಮರ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ, ಹರಿಗೌಡ, ಧೀರೇಂದ್ರ ಆಚಾರ್ಯ, ವಾದಿರಾಜ್ ಇತರರಿದ್ದರು. ಮಹಿಳೆಯರಿಂದ ಭಜನೆ ನಡೆಯಿತು.