ಮಂಗಳೂರು ಕಡಲ ತೀರದಲ್ಲಿ ಬಾನೆತ್ತರ ಹಾರಾಡಿದ ‘ಶ್ರೀರಾಮ’ ಗಾಳಿಪಟ

| Published : Jan 23 2024, 01:46 AM IST

ಸಾರಾಂಶ

ಮಹಾನಗರ ಪಾಲಿಕೆ ದೇರೇಬೈಲ್‌ ವಾರ್ಡ್‌ ಸದಸ್ಯ ಗಣೇಶ್‌ ಕುಲಾಲ್‌ ನೇತೃತ್ವದಲ್ಲಿ ಸ್ಥಳೀಯ ಶಶಿಧರ್‌ ಎಂಬವರು ಶ್ರೀರಾಮನ ಗಾಳಿಪಟ ಸಿದ್ಧಪಡಿಸಿದ್ದರು. ಈ ಗಾಳಿಪಟವನ್ನು ತಣ್ಣೀರುಬಾವಿ ಕಡಲ ತೀರದಲ್ಲಿ ಬಾನೆತ್ತರಕ್ಕೆ ಹಾರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಸಡಗರದ ಹಿನ್ನೆಲೆಯಲ್ಲಿ ಸೋಮವಾರ ಮಂಗಳೂರಿನ ಸಮುದ್ರ ಕಿನಾರೆಯಲ್ಲಿ ಶ್ರೀರಾಮನ ಗಾಳಿಪಟವನ್ನು ಆಳೆತ್ತರದಲ್ಲಿ ಹಾರಿಸಲಾಯಿತು. ಮಹಾನಗರ ಪಾಲಿಕೆ ದೇರೇಬೈಲ್‌ ವಾರ್ಡ್‌ ಸದಸ್ಯ ಗಣೇಶ್‌ ಕುಲಾಲ್‌ ನೇತೃತ್ವದಲ್ಲಿ ಸ್ಥಳೀಯ ಶಶಿಧರ್‌ ಎಂಬವರು ಶ್ರೀರಾಮನ ಗಾಳಿಪಟ ಸಿದ್ಧಪಡಿಸಿದ್ದರು. ಈ ಗಾಳಿಪಟವನ್ನು ತಣ್ಣೀರುಬಾವಿ ಕಡಲ ತೀರದಲ್ಲಿ ಬಾನೆತ್ತರಕ್ಕೆ ಹಾರಿಸಲಾಯಿತು. ಬೀಚ್‌ನಲ್ಲಿ ಸೇರಿದ್ದ ಪ್ರವಾಸಿಗರು ಶ್ರೀರಾಮನ ಗಾಳಿಪಟ ನಭಕ್ಕೆ ಏರುತ್ತಿದ್ದಂತೆ ಜೈಶ್ರೀರಾಮ್‌ ಘೋಷಣೆ ಕೂಗಿ ಪ್ರಾಣಪ್ರತಿಷ್ಠಾ ದಿನವನ್ನು ಸಂಭ್ರಮಿಸಿದರು. ಈ ಸಂದರ್ಭ ಪಾಲಿಕೆ ಉಪ ಮೇಯರ್‌ ಸುನಿತಾ ಮತ್ತಿತರರಿದ್ದರು.ಶ್ರೀರಾಮಲಲ್ಲಾ ಪ್ರತಿಷ್ಠಾಪನೆ: ಉಳ್ಳಾಲದಲ್ಲಿ ಮೆರೆದ ಸಾಮರಸ್ಯ

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರತಿಷ್ಠಾಪನೆಗೆ ಉಳ್ಳಾಲ- ತೊಕ್ಕೊಟ್ಟಿನಾದ್ಯಂತ ಸಂಭ್ರಮ ಮನೆ ಮಾಡಿತು. ತೊಕ್ಕೊಟ್ಟು ಒಳಪೇಟೆ, ಉಳ್ಳಾಲಬೈಲ್ ಸುತ್ತಮುತ್ತ ಅಕ್ಷರ ಕನ್‌ಸ್ಟ್ರಕ್ಷನ್ಸ್ ಬೆಂಗಳೂರು ಹಾಗೂ ತೊಕ್ಕೊಟ್ಟು ಒಳಪೇಟೆ ನಿವಾಸಿಗಳು ಧರ್ಮಭೇದವಿಲ್ಲದೆ ಸಾರ್ವಜನಿಕರಿಗೆ ಮೋತಿ ಕೇಶರ್ ಲಡ್ಡು ಹಾಗೂ ಪಾನಕ ವಿತರಿಸಿದರು.200 ಕೆ.ಜಿ. ತೂಕದ 4,000 ಮೋತಿ ಕೇಶರ್ ಲಡ್ಡುಗಳನ್ನು ಉಳ್ಳಾಲ ತಾಲೂಕಿನ ವಿವಿಧೆಡೆ ಅಕ್ಷರ ಕನ್ ಸ್ಟ್ರಕ್ಷನ್ಸ್ ಸಂಸ್ಥೆ ವಿತರಿಸಿತು. ತೊಕ್ಕೊಟ್ಟು ಒಳಪೇಟೆ, ಉಳ್ಳಾಲಬೈಲ್, ಗ್ರಾಮಚಾವಡಿ ದಕ್ಷ ಯುವಬಳಗ, ನಾಗಮೂಲೆ ಬಬ್ಬುಸ್ವಾಮಿ ದೈವಸ್ಥಾನ, ನೇತ್ರಾವತಿ ಫ್ರೆಂಡ್ಸ್ ಕಡವಿನಬಳಿ, ದೇರಳಕಟ್ಟೆ ಅಯ್ಯಪ್ಪ ಭಜನಾಮಂದಿರ ಬಳಿ ಲಡ್ಡು ಹಾಗೂ ಪಾನಕ ವಿತರಿಸಲಾಯಿತು.ಉಳ್ಳಾಲ ನಗರಸಭೆ ಮಾಜಿ ಸದಸ್ಯ ಭಗವಾನ್ ದಾಸ್ ತೊಕ್ಕೊಟ್ಟು, ಅಕ್ಷರ ಕನ್‌ಸ್ಟ್ರಕ್ಷನ್‌ ಪ್ರಬಂಧಕ ಪುಷ್ಪರಾಜ್ ಪಾವೂರು ಸಹಿತ ಪ್ರಮುಖರು ಪಾಲ್ಗೊಂಡರು.