ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಭಾಗಿ
ದಕ್ಷಿಣ ಭಾರತದ ಅಯೋಧ್ಯೆಯಾಗಿ ಪರ್ತಗಾಳಿಕನ್ನಡಪ್ರಭ ವಾರ್ತೆ ಕಾರವಾರದಕ್ಷಿಣ ಗೋವಾದಲ್ಲಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ನ. 28ರಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ 77 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ಹಾಗೂ ಥೀಮ್ ಪಾರ್ಕ್ ಅನ್ನು ಅನಾವರಣಗೊಳಿಸಲಿದ್ದಾರೆ.
ಮುಂಬರುವ ದಿನಗಳಲ್ಲಿ ಪರ್ತಗಾಳಿ ದಕ್ಷಿಣ ಭಾರತದ ಅಯೋಧ್ಯೆಯಾಗಲಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಪ್ರದೀಪ ಪೈ, ಜಂಟಿ ಕಾರ್ಯದರ್ಶಿ ಅಣ್ಣಪ್ಪ ಕಾಮತ, ಸಾರ್ವಜನಿಕ ಸಂಪರ್ಕಾಧಿಕಾರಿ ಮುಕುಂದ ಕಾಮತ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.ಶ್ರೀರಾಮನ ಕಂಚಿನ ಪ್ರತಿಮೆಯನ್ನು ಸರದಾರ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ನಿರ್ಮಿಸಿದ ಶಿಲ್ಪಿ ರಾಮ ಸುತಾ ನಿರ್ಮಿಸಿದ್ದಾರೆ. ಇದಲ್ಲದೆ, ರಾಮಾಯಣ ಆಧಾರಿತ ಥೀಮ್ ಪಾರ್ಕ್, 3 ಡಿ ಪ್ರೊಜೆಕ್ಷನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.
ಮಠಕ್ಕೆ 550 ವರ್ಷದ ತುಂಬಿರುವ ಹಿನ್ನೆಲೆಯಲ್ಲಿ ಮಠದ ಇತಿಹಾಸ, ಪರಂಪರೆಯನ್ನು ಅಜರಾಮರವಾಗಿಸುವ ಹಿನ್ನೆಲೆಯಲ್ಲಿ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಶ್ರೀಗಳ ದೂರದೃಷ್ಟಿತ್ವ, ಪರಿಕಲ್ಪನೆ ಹಾಗೂ ಮಾರ್ಗದರ್ಶನ ಮತ್ತು ಕೃಪಾಶೀರ್ವಾದದಲ್ಲಿ ಈ ಕಾರ್ಯಕ್ರಮಗಳು ನಡೆಯುತ್ತವೆ. ಶ್ರೀಗಳು 550 ಕೋಟಿ ಶ್ರೀ ರಾಮನಾಮ ಜಪವನ್ನು ಸಮೂಹವಾಗಿ ಜಪಿಸಬೇಕು ಎಂದು ಸೂಚಿಸಿದ್ದರು. ಅದರಂತೆ ಈಗಾಗಲೆ 550 ಕೋಟಿ ರಾಮನಾಮ ಜಪ 120 ಕೇಂದ್ರ ಹಾಗೂ 104 ಉಪಕೇಂದ್ರದಲ್ಲಿ ನಡೆದಿದೆ. ಶ್ರೀ ರಾಮದೇವರ ಹೆಸರಲ್ಲಿ ಶ್ರೀರಾಮ ರಥಯಾತ್ರೆಗೆ ಬದರಿನಾಥದಿಂದ ಅ. 19ಕ್ಕೆ ಚಾಲನೆ ನೀಡಲಾಗಿದ್ದು, ಅದು ಅಯೋಧ್ಯಾ, ವಾರಾಣಸಿ, ನಾಸಿಕ ಮಾರ್ಗವಾಗಿ ಕರ್ನಾಟಕ, ಗೋವಾದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸಂಚರಿಸಿ ಪರ್ತಗಾಳಿಗೆ ತಲುಪಲಿದೆ ಎಂದು ಹೇಳಿದರು.ನ. 27ರಿಂದ ಒಟ್ಟೂ 11 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ನ. 28ರಂದು ಶ್ರೀಗಳು ಶ್ರೀ ರಾಮನಿಗೆ ಪ್ರಾಣ ಪ್ರತಿಷ್ಠೆ ಮಾಡಲಿದ್ದಾರೆ. ಪ್ರತಿದಿನ 6-7 ಸಾವಿರ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
11 ದಿನಗಳ ಕಾರ್ಯಕ್ರಮದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು, 4, 5, 6 ಯೋಗಾ ಶಿಬಿರಗಳು, 6 ಮತ್ತು 7ರಂದು ಮೆಡಿಕಲ್ ಕ್ಯಾಂಪ್‌ಗಳನ್ನು ಕೂಡ ಆಯೋಜಿಸಲಾಗಿದೆ. ಆರೋಗ್ಯ ಶಿಬಿರದಲ್ಲಿ ಮಣಿಪಾಲ, ವಿಕ್ಟರ್ ಹಾಗೂ ಕೆಲವು ಆಸ್ಪತ್ರೆಯ ತಜ್ಞ ವೈದ್ಯರುಗಳು ಆಗಮಿಸಲಿದ್ದಾರೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಇತ್ಯಾದಿಗಳ ಕಡೆಯಿಂದ ಶ್ರೀ ಮಠಕ್ಕೆ ಭಕ್ತಾದಿಗಳು ಆಗಮಿಸಲಿದ್ದಾರೆ. ಪ್ರತಿನಿತ್ಯ ಅನ್ನದಾಸೋಹ ಹಾಗೂ ಎಲ್ಲ ರೀತಿಯ ಮೂಲಭೂತ ಸೌಕರ್ಯ ವ್ಯವಸ್ಥೆಗೊಳಿಸಲಾಗಿದೆ ಎಂದರು.ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಶ್ರೀ ಮಠದಲ್ಲಿ ಮುಂದೆ ವೇದಪಾಠಶಾಲೆ ಪ್ರಾರಂಭಿಸುವ ಯೋಚನೆಯಿದೆ. ಪರ್ತಗಾಳಿ ಸುತ್ತಮುತ್ತ ಅರಣ್ಯೀಕರಣ, ಯೋಗ ಶಾಲೆಯ ಬಗ್ಗೆ ಯೋಜಿಸಲಾಗಿದೆ. ಒಟ್ಟಾರೆಯಾಗಿ ನಮ್ಮ ಪರ್ತಗಾಳಿ ಮಠವು ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಅಯೋಧ್ಯೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.ಜಂಟಿ ಖಜಾಂಚಿ ಯೋಗೇಶ ಕಾಮತ, ಮಾಧ್ಯಮ ಸಂಚಾಲಕ ರಾಮಚಂದ್ರ ಕಿಣಿ, ರಾಜೇಶ ನಾಯಕ, ಮುರಳೀಧರ ಮಠದ ಅಧ್ಯಕ್ಷ ಮಾಧವ ಭಟ್, ಕಾರ್ಯದರ್ಶಿ ಸಂಜಯ ಪ್ರಭು ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))