ಸಾರಾಂಶ
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದ ಹಿನ್ನೆಲೆಯಲ್ಲಿ ಬನಹಟ್ಟಿ ನಗರದ ಹಳೇ ಲೈಬ್ರರಿ ಹತ್ತಿರ ವಿಶೇಷ ಪೂಜೆ ನಡೆಸಿ ಶಾಸಕ ಸಿದ್ದು ಸವದಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬಹುದಿನಗಳ ಕನಸು ಇಂದು ಈಡೇರಿದಂತಾಗಿದ್ದು, ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾನ ಮೂಲಕ ಸಮಸ್ತ ಹಿಂದುಗಳಿಗೆ ಸಂತಸದ ದಿನವಾಗಿದೆ. ಶ್ರೀರಾಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದಾರೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದ ಹಿನ್ನೆಲೆಯಲ್ಲಿ ಬನಹಟ್ಟಿ ನಗರದ ಹಳೇ ಲೈಬ್ರರಿ ಹತ್ತಿರ ವಿಶೇಷ ಪೂಜೆ ನಡೆಸಿ ಮಾತನಾಡಿದರು. ಶ್ರೀರಾಮಚಂದ್ರ ತನ್ನ ಆದರ್ಶಯುತ ಮತ್ತು ಮೌಲ್ಯಯುತ ಜೀವನಕ್ರಮದಿಂದ ಇಂದಿಗೂ ಜನಮಾನಸದಲ್ಲಿ ಅನುಕರಣೀಯರಾಗಿದ್ದು, ಪೂಜ್ಯನೀಯ ಸ್ಥಾನ ಪಡೆದಿದ್ದಾರೆ. ತನ್ನ ಜನ್ಮ ಸ್ಥಳಕ್ಕೆ ಬರಲು ಮರ್ಯಾದಾ ಪುರುಷೋತ್ತಮನಿಗೆ ೫೫೦ ವರ್ಷಗಳು ಬೇಕಾಯಿತು. ಕೊನೆಗೂ ಇದೀಗ ಸುವರ್ಣ ಕಾಲ ಬಂದಿದ್ದು, ಇಂದು ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹ ಪ್ರತಿಷ್ಠಾಪನೆ ಸಂಭ್ರಮ ಸಡಗರದಿಂದ ಜರುಗಿದ್ದು, ಇದು ಸಮಸ್ತ ಭಾರತೀಯರ ಪಾಲಿಗೆ ಸಡಗರದ ಕ್ಷಣವಾಗಿದೆ ಎಂದರು.
ಬನಹಟ್ಟಿ ಹಿರೇಮಠದ ಶರಣ ಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಧರೆಪ್ಪ ಉಳ್ಳಾಗಡ್ಡಿ, ಶ್ರೀಶೈಲ ಬೀಳಗಿ, ಪ್ರಭಾಕರ ಮೊಳೇದ, ಶಂಕರ ಅಂಗಡಿ, ಈರಯ್ಯ ಪರಾಳಮಠ, ವಿದ್ಯಾ ದಬಾಡಿ, ಶ್ರೀಶೈಲ ಯಾದವಾಡ, ಅರವಿಂದ ಪತ್ತಾರ, ಮೋಹನ ಪತ್ತಾರ, ರಾಜುಗೌಡ ಪಾಟೀಲ, ಶಶಿಕಲಾ ಸಾರವಾಡ ಸೇರಿದಂತೆ ಅನೇಕರು ಇದ್ದರು.