ಲೋಕೋದ್ಧಾರಕ್ಕೆ ಸ್ವಾರ್ಥವನ್ನು ಬದಿಗೊತ್ತಿದ ಶ್ರೀರಾಮ

| Published : Oct 13 2024, 01:07 AM IST

ಲೋಕೋದ್ಧಾರಕ್ಕೆ ಸ್ವಾರ್ಥವನ್ನು ಬದಿಗೊತ್ತಿದ ಶ್ರೀರಾಮ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು: ಅಯೋಧ್ಯಾಧಿಪತಿ ಪ್ರಭು ಶ್ರೀರಾಮಚಂದ್ರ ಲೋಕದ ಉದ್ಧಾರಕ್ಕಾಗಿ ಸ್ವಾರ್ಥವನ್ನು ಬದಿಗೊತ್ತಿ ಜೀವನ ನಡೆಸಿ ಮಾದರಿಯಾಗಿದ್ದ ಎಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಬಾಳೆಹೊನ್ನೂರು: ಅಯೋಧ್ಯಾಧಿಪತಿ ಪ್ರಭು ಶ್ರೀರಾಮಚಂದ್ರ ಲೋಕದ ಉದ್ಧಾರಕ್ಕಾಗಿ ಸ್ವಾರ್ಥವನ್ನು ಬದಿಗೊತ್ತಿ ಜೀವನ ನಡೆಸಿ ಮಾದರಿಯಾಗಿದ್ದ ಎಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.ಪಟ್ಟಣದ ಮಾರ್ಕಾಂಡೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿರುವ ಹದಿನೈದನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಸಮಾಜದಲ್ಲಿ ನಮ್ಮ ಬದುಕು ಹೇಗೆ ಇರಬೇಕು ಎಂಬುದಕ್ಕೆ ಶ್ರೀರಾಮ ಆದರ್ಶನಾಗಿದ್ದರೆ, ಬದುಕು ಹೇಗೆ ಇರಬಾರದು ಎಂಬುದಕ್ಕೆ ರಾವಣ ಆದರ್ಶನಾಗಿದ್ದಾನೆ. ಉತ್ತಮ ವ್ಯಕ್ತಿಗಳಾಗಿ ಬದುಕಿದರೆ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದರು.ನವರಾತ್ರಿ ಉತ್ಸವವು ವಿಶಿಷ್ಟ ಉತ್ಸವವಾಗಿದ್ದು, ಇದಕ್ಕೆ ಹಲವಾರು ಕಾರಣಗಳಿವೆ. ನಮ್ಮ ಸಂಸ್ಕೃತಿಯಲ್ಲಿ ಮಾತಾ ಪಿತರಿಗೆ, ಆಚಾರ್ಯರಿಗೆ ಹೇಗೆ ಗೌರವ ಸೂಚಿಸಬೇಕು ಎಂಬುದನ್ನು ಹಲವು ಮಾರ್ಗದರ್ಶನಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಮಾತೆಯರು, ಮಾತೃಭೂಮಿ ಮೇಲೆ ನಮಗೆ ಹೇಗೆ ಗೌರವ ಇರಬೇಕು ಎಂಬುದನ್ನು ಪ್ರಭು ಶ್ರೀರಾಮಚಂದ್ರ ತೋರಿಸಿಕೊಟ್ಟಿದ್ದು, ಭಾರತದ ಆಚಾರ, ವಿಚಾರಗಳೇ ನಮ್ಮ ಮಾತೃಭೂಮಿಯಾಗಿದೆ ಎಂದು ಹೇಳಿದರು.

ಬಾಳೆಹೊನ್ನೂರು ಪಟ್ಟಣದಲ್ಲಿ ಹಿಂದೂ ಸಮುದಾಯದ ವಿವಿಧ ಜಾತಿಗಳು ಒಗ್ಗೂಡಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತಸವಾಗಿದ್ದು, ನವರಾತ್ರಿ ಮಹೋತ್ಸವಕ್ಕೆ ವಿಶೇಷ ಅರ್ಥ ಬಂದಿದೆ ಎಂದರು.

ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಮಾತನಾಡಿ, ನವರಾತ್ರಿ ಆಚರಣೆಗೆ ವಿಶೇಷ ಅರ್ಥವಿದ್ದು, ಧರ್ಮ ರಕ್ಷಣೆಗಾಗಿ ದುರ್ಗಾ ಮಾತೆಯು ತಾಯಿ ರೂಪದಲ್ಲಿ ಅವತಾರ ಎತ್ತಿ ಬಂದಿದ್ದಾಳೆ. ಪ್ರಸ್ತುತ ಧರ್ಮವನ್ನು ನಮ್ಮ ಕೈಗೆ ಕೊಟ್ಟಿದ್ದು, ಹಿಂದೂಗಳು ಜಾಗೃತರಾಗಬೇಕಿದೆ. ಧರ್ಮದ ಜಾಗೃತಿಯನ್ನು ಪಡೆಯಬೇಕಿದೆ ಎಂದರು.ಸನಾತನ ಧರ್ಮಕ್ಕೆ ಸಮಸ್ಯೆ ಇರುವುದು ಬೇರೆ ಧರ್ಮದಿಂದಲ್ಲ. ನಮ್ಮ ಧರ್ಮದಲ್ಲಿ ಹುಟ್ಟಿ ಅದರ ವಿರುದ್ಧವೇ ಕೆಲಸ ಮಾಡುವವರಿದ್ದು, ಇವರಿಂದಲೇ ಧರ್ಮಕ್ಕೆ ಆತಂಕ ಎದುರಾಗಿದೆ. ಹಿಂದೂ ಸಮಾಜ ಜಾಗೃತರಾಗಿ ಒಗ್ಗಟ್ಟಾದರೆ ಎಂತಹ ಜಾಗೃತಿಬೇಕಾದರೂ ತರಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ರಾಮಮಂದಿರ ನಿರ್ಮಾಣವಾಗಿದೆ ಎಂದು ಹೇಳಿದರು.ರಾಮಮಂದಿರ ನಿರ್ಮಾಣವಾದರೆ ನಮ್ಮ ಕೆಲಸ ನಿಂತಿಲ್ಲ. ಮನೆ ಮನೆಯೂ ಅಯೋಧ್ಯೆಯಾಗಬೇಕು ಎಂಬುದು ನಮ್ಮ ಆಶಯವಾಗಿದೆ. ನಮ್ಮ ಮಕ್ಕಳಲ್ಲಿ ರಾಮನ ಭಕ್ತಿ, ಜಾಗೃತಿ ಬೆಳೆದಿರಬೇಕಾಗಿದ್ದು, ಜಾಗೃತಿ ಮಕ್ಕಳಲ್ಲಿ ಇದ್ದರೆ ಹಿಂದೂ ಸಮಾಜವನ್ನು ಅಲುಗಾಡಿಸುವ ಶಕ್ತಿ ಯಾರಿಗೂ ಇಲ್ಲವಾಗಿದೆ ಎಂದು ತಿಳಿಸಿದರು. ಪ್ರಸ್ತುತ ಹಿಂದೂಗಳ ರಾಮಮಂದಿರ ನಿರ್ಮಾಣ ಕನಸು ಸಾಕಾರಗೊಂಡಿದ್ದು, ಮುಂದೆ ಶ್ರೀಕೃಷ್ಣ ಜನ್ಮಭೂಮಿ ಮಥುರಾ ಕನಸು ಸಾಕಾರಗೊಳ್ಳಬೇಕಿದೆ. ಧರ್ಮ ಜಾಗೃತಿಯನ್ನು ಮಾಡಿದರೆ ಶ್ರೀಕೃಷ್ಣ ಜನ್ಮಭೂಮಿಯ ಕನಸು ಸಾಕಾರಗೊಳ್ಳಲಿದೆ ಎಂದರು.ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ನವರಾತ್ರಿ ಪೂಜಾ ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಕಾರ್ಯಾಧ್ಯಕ್ಷ ಬಿ.ಚನ್ನಕೇಶವಗೌಡ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಕೋಶಾಧ್ಯಕ್ಷ ಭಾಸ್ಕರ್ ವೆನಿಲ್ಲಾ, ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಉಪಾಧ್ಯಕ್ಷ ಶಿವರಾಮಶೆಟ್ಟಿ, ಸಹ ಖಜಾಂಚಿ ಚೈತನ್ಯ ವೆಂಕಿ ಮತ್ತಿತರರು ಹಾಜರಿದ್ದರು.