ಸಾರಾಂಶ
ಲೋಕಾಪುರ: ಸಮೀಪದ ಮುದ್ದಾಪುರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಯೋಧ್ಯೆಯ ಮಂತ್ರಾಕ್ಷತೆ ಪೂಜೆ ಮತ್ತು ವಿತರಣೆ ಸಮಾರಂಭಕ್ಕೆ ಮುಧೋಳ ತಾಲೂಕು ಮಾಳಿ ಸಮಾಜದ ಉಪಾಧ್ಯಕ್ಷ ಸುರೇಶ ಮಾಳಿ ಚಾಲನೆ ನೀಡಿದರು. ಬಳಿಕ ಮಾತನಾಡಿ ವಿಶ್ವದ ಎಲ್ಲ ಜನರ ಆದರ್ಶ ಮತ್ತು ಅನುಕರಣಿಯ ಶಕ್ತಿಯಾಗಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ವಿಶ್ವದ ಎಲ್ಲ ಜನರ ಆದರ್ಶ ಮತ್ತು ಅನುಕರಣಿಯ ಶಕ್ತಿಯಾಗಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಮುಧೋಳ ತಾಲೂಕು ಮಾಳಿ ಸಮಾಜದ ಉಪಾಧ್ಯಕ್ಷ ಸುರೇಶ ಮಾಳಿ ಹೇಳಿದರು.ಸಮೀಪದ ಮುದ್ದಾಪುರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಯೋಧ್ಯೆಯ ಮಂತ್ರಾಕ್ಷತೆ ಪೂಜೆ ಮತ್ತು ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ವ ಕಾಲದಲ್ಲಿಯೂ ಧರ್ಮ, ಪಕ್ಷ ಮತ್ತು ಲಿಂಗ ಬೇಧವಿಲ್ಲದೆ ತನ್ನ ಉದಾತ್ತ ಗುಣಗಳಿಂದಾಗಿ ಶ್ರೀರಾಮ ಈ ನೆಲದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮರಸ್ಯದ ಬದುಕಿನ ಸ್ತೋತ್ರವೇ ಆಗಿದ್ದಾರೆ, ಶ್ರೀ ರಾಮಚಂದ್ರ ಸರ್ವರ ಸಾಮಾಜಿಕ, ಧಾರ್ಮಿಕ ಮತ್ತು ಸಕಲ ಜೀವರಾಶಿಗಳಲ್ಲಿಯೂ ಕ್ಷಮಾಗುಣ ತೋರಿಸಿದ ಮಹಾನ್ ದಾರ್ಶನಿಕ. ಇಂದಿಗೂ ಅವರ ತತ್ವಾದರ್ಶಗಳು ಅನುಕರಣೀಯವಾಗಿವೆ ಎಂದರು.
ಮುಖಂಡರಾದ ನಬೀ ಹಾಜಿಬಾಯಿ, ವಿಜಯ ಕಮತಗಿ, ಬಸಪ್ಪ ಶಿರಸಂಗಿ, ಸದಾಶಿವ ಮಾಳಿ, ಸುರೇಶ ಮಠಪತಿ, ಹೊಳಬಸಯ್ಯ ಜಂಬಗಿ, ಮಲ್ಲಪ್ಪ ಪೂಜಾರ, ಬಸವರಾಜ ನಾಯ್ಕ, ಮಹಾಲಿಂಗಪ್ಪ ಕೋರಿ, ಬಸವಣ್ಣೆಪ್ಪ ಗುಡಗೇರಿ, ಬಸವರಾಜ ಮಾಳಿ, ಸುಭಾಸ ಮಾಳಿ ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))