ಶ್ರೀ ರಾಮಾಂಜನೇಯ ಮಾಲಾಧಾರಣೆ ಕಾರ್ಯಕ್ರಮ

| Published : Jan 21 2024, 01:30 AM IST

ಸಾರಾಂಶ

ಕಲಾದಗಿ: ಸಂಶಿ ಕ್ರಾಸ್ ಬಳಿ ನೂತವಾಗಿ ನಿರ್ಮಾಣವಾಗಿರುವ ರಾಮಾಂಜನೇಯ ದೇವಸ್ಥಾನ ಉದ್ಘಾಟನೆ ಹಾಗೂ ರಾಮಾಂಜನೇಯ ಮೂರ್ತಿ ಪ್ರತಿಷ್ಠಾಪಣೆ ಕಾರ್ಯಕ್ರಮ ಅಂಗವಾಗಿ ಕಲಾದಗಿಯಲ್ಲಿನ ಅನೇಕ ಶ್ರಿ ಹನುಮಾನ್‌, ರಾಮ ಭಕ್ತರಿಂದ ರಾಮಾಂಜನೇಯ ಮಾಲಾಧಾರಣೆ ಕಾರ್ಯಕ್ರಮ ನಡೆಯಿತು. ೧೨೦ಕ್ಕೂ ಅಧಿಕ ಶ್ರೀರಾಮ ಭಕ್ತರು ಶ್ರೀರಾಮಾಂಜನೇಯ ಮಾಲೆ ಧಾರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಸಂಶಿ ಕ್ರಾಸ್ ಬಳಿ ನೂತವಾಗಿ ನಿರ್ಮಾಣವಾಗಿರುವ ರಾಮಾಂಜನೇಯ ದೇವಸ್ಥಾನ ಉದ್ಘಾಟನೆ ಹಾಗೂ ರಾಮಾಂಜನೇಯ ಮೂರ್ತಿ ಪ್ರತಿಷ್ಠಾಪಣೆ ಕಾರ್ಯಕ್ರಮ ಅಂಗವಾಗಿ ಕಲಾದಗಿಯಲ್ಲಿನ ಅನೇಕ ಶ್ರಿ ಹನುಮಾನ್‌, ರಾಮ ಭಕ್ತರಿಂದ ರಾಮಾಂಜನೇಯ ಮಾಲಾಧಾರಣೆ ಕಾರ್ಯಕ್ರಮ ನಡೆಯಿತು.

ಶ್ರೀ ಆಂಜನೆಯ ವಾರದ ದಿನ ಶನಿವಾರ ಬ್ರಾಹ್ಮೀ ಮುಹೂರ್ತದಲ್ಲಿ ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ನೂರಾರು ಶ್ರೀರಾಮ, ಹನುಮ ಭಕ್ತರಿಗೆ ಪುರೋಹಿತ ವಸಂತ ಮಮದಾಪುರ ವಿಧಿ-ವಿಧಾನವಾಗಿ ಮಾಲಾಧರಣೆ ಮಾಡಿಸಿದರು. ೧೨೦ಕ್ಕೂ ಅಧಿಕ ಶ್ರೀರಾಮ ಭಕ್ತರು ಶ್ರೀರಾಮಾಂಜನೇಯ ಮಾಲೆ ಧಾರಣೆ ಮಾಡಿದರು. ನಂತರ ಶ್ರೀ ರಾಮನ ಭಾವಚಿತ್ರ, ಆರತಿ ಹಿಡಿದು ರಾಮಜಪ ಮಾಡುತ್ತ ಗ್ರಾಮದಲ್ಲಿನ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬದ್ರು ಶಿಲ್ಪಿ, ದಯಾನಂದ ವಾಘ್, ಸತ್ಯಪ್ಪ ಕರೆಯಪ್ಪನವರ, ಶ್ರೀಧರ ವಾಘ, ನಿಂಗಪ್ಪ ಅಗಸರ, ಯಮನಪ್ಪ ಬೂದಿಹಾಳ ಇತರರು ಇದ್ದರು.