ಸಾರಾಂಶ
ಗ್ರಾಮದ ವಿವಿಧೆಡೆಗಳಲ್ಲಿ ಹೆಸರುಬೇಳೆ, ಮಜ್ಜಿಗೆ, ಪಾನಕ ವಿತರಣೆ ಮಾಡಲಾಗುತ್ತಿತ್ತು. ಸಾಲುಮರದ ತಿಮ್ಮಕ್ಕನ ಮರದ ನೆರಳಿನಲ್ಲಿ ಬಿ.ಜಿ.ರಾಮಯ್ಯ ನಿರ್ಮಿಸಿರುವ ಶ್ರೀ ರಾಮದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಿ ಮಜ್ಜಿಗೆ ಪಾನಕ ವಿತರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಕುದೂರು
ಕುದೂರು ಗ್ರಾಮವೆಲ್ಲಾ ಕೇಸರಿಮಯ. ಎಲ್ಲೆಡೆ ತಳಿರು ತೋರಣ, ಬಾವುಟಗಳ ಹಾರಾಟ, ಮನೆಯ ಮುಂದೆ ರಂಗೋಲಿ, ಪ್ರತಿ ಮನೆಯೂ ಹಬ್ಬದ ರೀತಿ ಅಲಂಕೃತವಾಗಿ ಸಡಗರದಿಂದ ಕೂಡಿತ್ತು.ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಸಂಭ್ರಮಕ್ಕೆ ಕುದೂರು ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಪೂಜೆ, ಭಜನೆ, ಹವನ ಹೋಮ ಅನ್ನಪ್ರಸಾದ ಕಾರ್ಯಕ್ರಮವನ್ನು ಆಚರಿಸಲಾಯಿತು.
ಮುಂಜಾನೆ ಶ್ರೀರಾಮ, ಸೀತಾ, ಲಕ್ಷ್ಮಣ ಸಮೇತ ಉತ್ಸವ ಮೂರ್ತಿಗಳನ್ನು ಮಂಗಳವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ನಂತರ ಶ್ರೀರಾಮಮಂದಿರದಲ್ಲಿ ಶ್ರೀರಾಮತಾರಕ ಹೋಮವನ್ನು ಏರ್ಪಡಿಸಲಾಗಿತ್ತು. ಹತ್ತಾರು ಪುರೋಹಿತರ ಸಮ್ಮುಖದಲ್ಲಿ ವೇದಮಂತ್ರಗಳೊಂದಿಗೆ ಹೋಮ ಕಾರ್ಯಕ್ರಮ ನೆರವೇರಿತು.
ಶ್ರೀರಾಮಲೀಲಾ ಮೈದಾನದಲ್ಲಿ ಸಾವಿರಾರು ಜನರು 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾಲುಗಟ್ಟಿ ಅನ್ನಪ್ರಸಾದ ಸೇವಿಸಿದರು. ಬಡವ, ಶ್ರೀಮಂತ, ರಾಜಕೀಯ ಪಕ್ಷಗಳ ಬೇಧವಿಲ್ಲದೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದು ವಿಶೇಷವಾಗಿತ್ತು.ಗ್ರಾಮದ ಮಹಿಳಾ ತಂಡದ ಚಂಡೇವಾದ್ಯವನ್ನು ಸಾವಿರಾರು ಜನರು ವೀಕ್ಷಿಸಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಶ್ರೀರಾಮ ಸೀತಾ ಲಕ್ಷ್ಮಣ ಆಂಜನೇಯ ಸ್ವಾಮಿಯ ವೇಷಭೂಷಣಗಳನ್ನು ಹಾಕಿಕೊಂಡು ಜನರು ಸಂಭ್ರಮಿಸಿದರು.
ಗ್ರಾಮದ ವಿವಿಧೆಡೆಗಳಲ್ಲಿ ಹೆಸರುಬೇಳೆ, ಮಜ್ಜಿಗೆ, ಪಾನಕ ವಿತರಣೆ ಮಾಡಲಾಗುತ್ತಿತ್ತು. ಸಾಲುಮರದ ತಿಮ್ಮಕ್ಕನ ಮರದ ನೆರಳಿನಲ್ಲಿ ಬಿ.ಜಿ.ರಾಮಯ್ಯ ನಿರ್ಮಿಸಿರುವ ಶ್ರೀ ರಾಮದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಿ ಮಜ್ಜಿಗೆ ಪಾನಕ ವಿತರಣೆ ಮಾಡಲಾಯಿತು.----------------------------
22ಕೆಆರ್ ಎಂಎನ್ 8,9.ಜೆಪಿಜಿ8.ಕುದೂರು ಗ್ರಾಮದ ಶ್ರೀರಾಮ ಸೀತಾ ಲಕ್ಷ್ಮಣ ಸಮೇತ ಉತ್ಸವ ಮೂರ್ತಿಗಳನ್ನು ಮಂಗಳವಾದ್ಯಗಳೊಂದಿಗೆ ಗ್ರಾಮದೆಲ್ಲೆಡೆ ಮೆರವಣಿಗೆ ಮಾಡಲಾಯಿತು.
----9.ರಾಮ ಸೀತಾ, ಲಕ್ಷ್ಮಣ ಆಂಜನೇಯನ ವೇಷ ಧರಿಸಿ ಮಕ್ಕಳು ಸಂಭ್ರಮಿಸಿದರು.
-------------------------------