ಕನ್ನಡಪ್ರಭ ವಾರ್ತೆ ಹರಿಹರ
ಸೌಹಾರ್ದ, ಸಹಬಾಳ್ವೆ ಬದುಕನ್ನು ನಾಡಿನ ಜನತೆಗೆ ಸಾರಿದವರು ಜಗದ್ಗುರು ರೇಣುಕಾಚಾರ್ಯರು ಎಂದು ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯಪಟ್ಟರು.ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ರೇಣುಕಾಚಾರ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಸಿದ್ಧಾಂತ ಶಿಖಾಮಣಿಯಂತಹ ಮಹಾನ್ ಗ್ರಂಥವನ್ನು ಈ ಸಮಾಜಕ್ಕೆ ಕೊಡುಗೆ ನೀಡಿ, ಆ ಮೂಲಕ ಸರ್ವರಲ್ಲೂ ಭಗವಂತನನ್ನು ಕಂಡಂತವರು ಅವರು. ಕರ್ನಾಟಕವು ಸೇರಿದಂತೆ ದಕ್ಷಿಣ ಭಾರತದಾದ್ಯಂತ ಭಕ್ತ ಸಮೂಹವನ್ನು ಹೊಂದಿದ್ದರು ಎಂದರು.
ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರು. ಇವರ ತತ್ವ ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಸಾಧನೆಗಳು, ಭಾರತೀಯ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿವೆ. ಅವಮಾನಿತ ವರ್ಗಗಳನ್ನು ಪ್ರೀತಿಸಿ ಅವರಿಗೆ ತತ್ವಶಾಸ್ತ್ರದ ಮತ್ತು ಧಾರ್ಮಿಕ ಶಿಕ್ಷಣವನ್ನು ನೀಡಿದ್ದರು. ವಚನಗಳ ಮೂಲಕ ತಮ್ಮ ತತ್ವಗಳನ್ನು ಜನರಿಗೆ ತಿಳಿಸಿಕೊಟ್ಟರು. ಜನರಿಗೆ ಶ್ರಮ, ಭಕ್ತಿ, ನೈತಿಕತೆ ಮತ್ತು ಸಮಾನತೆ ತತ್ವ ಸಾರಿದವರಾಗಿದ್ದಾರೆ ಎಂದರು.ಈ ವೇಳೆ ತಹಸೀಲ್ದಾರ್ ಸಂತೋಷ್‌ಕುಮಾರ್, ಬಿಇಒ ಡಿ.ದುರುಗಪ್ಪ, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ, ಟಿ.ಜೆ.ಮುರುಗೇಶಪ್ಪ, ಮುಖಂಡರಾದ ಕೆ.ಪಂಚಾಕ್ಷರಿ, ಸಮಾಳದ ಹೆಚ್.ಚಂದ್ರಶೇಖರಪ್ಪ, ಎನ್.ಇ. ಸುರೇಶ್ ಸ್ವಾಮಿ, ರಾಚಪ್ಪ, ಎಂ.ಉಮ್ಮಣ್ಣ, ಭೂಮೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
- - -
-01HRR.04:
ಹರಿಹರ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು. ಶಾಸಕ ಬಿ.ಪಿ.ಹರೀಶ್, ತಹಸೀಲ್ದಾರ್ ಸಂತೋಷ್ ಕುಮಾರ್, ಡಿ.ಜಿ.ಶಿವಾನಂದಪ್ಪ ಇತರರಿದ್ದರು.