ಸಾರಾಂಶ
ಮಾಗಡಿ: ತಾಲೂಕಿನ ಸಾವನದುರ್ಗದ ಶ್ರೀ ಸಾವಂದಿ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಮ್ಮದೇವಿ ಬ್ರಹ್ಮರಥೋತ್ಸವ ಫೆ.20ರಿಂದ 24ರವರೆಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕ ಎಸ್.ರೇಣುಕಾರಾಧ್ಯ ತಿಳಿಸಿದರು.
ಮಾಗಡಿ: ತಾಲೂಕಿನ ಸಾವನದುರ್ಗದ ಶ್ರೀ ಸಾವಂದಿ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಮ್ಮದೇವಿ ಬ್ರಹ್ಮರಥೋತ್ಸವ ಫೆ.20ರಿಂದ 24ರವರೆಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕ ಎಸ್.ರೇಣುಕಾರಾಧ್ಯ ತಿಳಿಸಿದರು.
ತಾಲೂಕಿನ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಬ್ರಹ್ಮ ರಥೋತ್ಸವ ಆಚರಿಸಲಾಗುತ್ತಿದೆ. ಈ ಬಾರಿಯ ವಿಶೇಷವೆಂದರೆ ನೂತನ ಧ್ವಜಸ್ತಂಭ ಲೋಕಾರ್ಪಣೆಯನ್ನು ಸುತ್ತೂರು ಕ್ಷೇತ್ರದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ನೆರವೇರಿಸಲಿದ್ದಾರೆ ಎಂದು ಹೇಳಿದರು.ಪೂಜಾ ಕಾರ್ಯಕ್ರಮ:
ಫೆ.20ರಂದು ಮಂಗಳವಾರ ಬೆಳಗ್ಗೆ 6 ಗಂಟೆಗೆ ಪುಣ್ಯಾಹ ಧ್ವಜಾರೋಹಣ, ನೂತನ ಧ್ವಜಸ್ತಂಭ ಉದ್ಘಾಟನೆ, ರುದ್ರಾಭಿಷೇಕ, ಗಣಪತಿ ಹೋಮ, ಗಣಪತಿ ಉತ್ಸವ, ವಿಶೇಷ ವೀರಗಾಸೆ ಹಾಗೂ ಕರಡಿವಾದ್ಯ, ಮಧ್ಯಾಹ್ನ ಮಹಾದಾಸೋಹ, ಫೆ.21ರಂದು ಬುಧವಾರ ಬೆಳಗ್ಗೆ 9 ಗಂಟೆಗೆ ರುದ್ರಾಭಿಷೇಕ, ದೇವರಿಗೆ ಬೆಳ್ಳಿ ವಜ್ರಾಂಗಿ ಧರಣಿ, ಪ್ರಕಾರೋತ್ಸವ ಮಧ್ಯಾಹ್ನ ಮಹಾ ದಾಸೋಹ, ಸಂಜೆ ಗಣಪತಿ ಹೋಮ, ರುದ್ರ ಹೋಮ, ಶ್ರೀ ಸ್ವಾಮಿಗೆ ಬೆಣ್ಣೆ ಅಲಂಕಾರ, ಕಲ್ಯಾಣೋತ್ಸವ, ವಿಶೇಷ ವೀರಗಾಸೆ ಕುಣಿತ, ಭೂಕೈಲಾಸ ಎಂಬ ಶಿವಕಥಾ ಭಾಗ, ಫೆ.22ರಂದು ಗುರುವಾರ ಬೆಳಗ್ಗೆ ಆಗ್ರೋದಕ, ಮಹಾ ರುದ್ರಾಭಿಷೇಕ, ರಥಾಂಗಹೋಮ, ಬಿಜಂಗೈ ಉತ್ಸವ, ಮಧ್ಯಾಹ್ನ 12 ಗಂಟೆಗೆ ಬ್ರಹ್ಮ ರಥೋತ್ಸವ ನೆರವೇರಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಸಕ ಬಾಲಕೃಷ್ಣ, ಸಂಸದ ಡಿ.ಕೆ.ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಎಸ್.ರವಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಬ್ರಹ್ಮರಥೋತ್ಸವದ ಅಂಗವಾಗಿ ವಿವಿಧ ಜನಾಂಗದ ಅಡ್ವಟಿಕೆ ಮಹಾದಾಸೋಹ, ಸಂಜೆ ನಂದಿ ವಾಹನೋತ್ಸವ, ಗಜ ವಾಹನೋತ್ಸವ, ಬೆಳ್ಳಿ ಪ್ರಭಾವಳಿ ಉತ್ಸವ, ಖಡ್ಗೋತ್ಸವ, ಶರಂಭೋತ್ಸವ, ಭರತನಾಟ್ಯ, ಪ್ರಕಾರೋತ್ಸವ, ಉಯ್ಯಾಲೆ ಉತ್ಸವ, ರಾತ್ರಿ 9 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ, ವೀರಗಾಸೆ ದಾಸೋಹ ನಡೆಯಲಿದೆ.23 ಶುಕ್ರವಾರ ಬೆಳಗ್ಗೆ ರುದ್ರಾಭಿಷೇಕ, ಸೂರ್ಯ ಮಂಡಲ ಉತ್ಸವ, ಶೇಷವಾಹನ, ನವಿಲು, ವಾಹನೋತ್ಸವ, ಮಧ್ಯಾಹ್ನ ಪ್ರಕಾರ ಉತ್ಸವ, ವಾಹನೋತ್ಸವ, ದಾಸೋಹ ಚಿಕ್ಕಕುದುರೆ ಉತ್ಸವ, ಪ್ರಭಾವಳಿ ಜೊತೆಗೆ ಕುದುರೆ ಉತ್ಸವ, ಸಂಜೆ ಅಶ್ವರೋಹಣ ಉತ್ಸವ ಮತ್ತು ದಾಸೋಹ, ಬಿಲ್ವಾರುಕ್ಷೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ವಿಶೇಷ ಮದ್ದಿನ ಮರ ಬಾಣ ಬಿರುಸು ದಾಸೋಹ ನಡೆಯಲಿದೆ ಎಂದರು.
ಫೆ.24 ಶನಿವಾರ ಬೆಳಗ್ಗೆ ರುದ್ರಾಭಿಷೇಕ, ಪ್ರಕಾರೋತ್ಸವ, ಅವಂಭೃತ ಸ್ನಾನ ಮತ್ತು ದಾಸೋಹ, ಮಧ್ಯಾಹ್ನ ಶ್ರೀ ಸ್ವಾಮಿಯವರಿಗೆ ಹೂವಿನ ಅಲಂಕಾರ ಉತ್ಸವ ಹಾಗೂ ವೀರಗಾಸೆ ಧ್ವಜಾವಾರೋಹಣ, ಸಂಜೆ ಚಂದ್ರಮಂಡಲ ಉತ್ಸವ, ಹೂವಿನ ಪಲ್ಲಕ್ಕಿ ಉತ್ಸವ, ಶಯನೋತ್ಸವ ಮತ್ತು ರಾತ್ರಿ ದಾಸೋಹ ಸಹಸ್ರ ಬಿಲ್ವಾರ್ಚನೆ, ವಿದ್ಯುತ್ ಅಲಂಕಾರ ಸೇರಿದಂತೆ ದೇವಸ್ಥಾನದಲ್ಲಿ ಸತತವಾಗಿ ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ ವೀರಭದ್ರಸ್ವಾಮಿ ಕೃಪೆಗೆ ಪಾತ್ರರಾಗಿ ಎಂದು ಮನವಿ ಮಾಡಿದರು. ಪೋಟೋ 30ಮಾಗಡಿ1:ಮಾಗಡಿ ತಾಲೂಕಿನ ಸಾವನದುರ್ಗದ ಶ್ರೀ ಸಾವಂದಿ ವೀರಭದ್ರ ಸ್ವಾಮಿಯ ಬ್ರಹ್ಮರಥೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.