ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರು
ಪರಸ್ಪರ ಆರ್ಥಮಾಡಿಕೊಳ್ಳವುದ ರೊಂದಿಗೆ ಏಕದೃಷ್ಟಿ ಇದ್ದಾಗ ಸುಖಿ ದಾಂಪತ್ಯ ಸಾಧ್ಯ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಿಶ್ಲೇಷಿಸಿದರು,ಪಟ್ಟಣದ ಬಿಡುಗಲು ಪಡುವಲು ಶ್ರೀವಿರಕ್ತ ಮಠದಲ್ಲಿ ಭಾನುವಾರ ಶ್ರೀಕಾಳ ಒಡೆಯ ಗುರುಗಳ ಆರಾಧನೆ ಮತ್ತು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಟಿಯ ಸಹಯೋಗದಲ್ಲಿ ನಡೆದ ವೀರಶೈವ ಲಿಂಗಾಯತ ವಧೂ-ವರರ ಉಚಿತ ಸಾಮೂಹಿಕ ವಿವಾಹ ಹಾಗೂ ಧಾರ್ಮಿಸಭೆಯಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಸಾಮರಸ್ಯ ದಾಂಪತ್ಯದಿಂದ ಕುಟುಂಬದ ಏಳಿಗೆಯು ಸಾಧ್ಯ, ಯಶಸ್ವಿ ಬದುಕಿನೊಂದಿಗೆ ಸಮಾಜದ ಶ್ಲಾಘನೆಗೆ ಪಾತ್ರರಾಗಬಹುದು, ಶರಣರಾದ ಅಲ್ಲಮ ಪ್ರಭುಗಳು ಹೇಳಿದಂತೆ ಉಭಯರ ದೃಷ್ಟಿಯಲ್ಲೂ ಏಕದೃಷ್ಟಿ ಬಿಂಬಿತವಾದಾಗ ಯಾವುದೇ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು, ದಾಂಪತ್ಯ ಜೀವನಕ್ಕೆ ಕಾಲಿರಿಸಿದವರು ಈವಿಚಾರವನ್ನು ಆರ್ಥಮಾಡಿಕೊಳ್ಳಬೇಕು ಎಂದರು.ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ಮಠಮಾನ್ಯಗಳು ಸಾಮಾಜಿಕ ಸೇವಾಕಾರ್ಯಗಳಿಗೂ ಹೆಚ್ಚು ಆದ್ಯತೆ ನೀಡುತ್ತವೆ. ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಇವುಗಳಿಗೂ ಹೆಚ್ಚು ಗಮನಕೊಡಬೇಕು, ಮನಶಾಂತಿ ಹಾಗೂ ಆರೋಗ್ಯದ ದೃಷ್ಟಿಯಿಂದ ಇವುಗಳನ್ನು ಅನುಸರಿವುದು ಅಗತ್ಯ ಎಂದು ಅವರು ಹೇಳಿದರು.
ಬೆಟ್ಟದಪುರ ಸಲೀಲಾಖ್ಯಾ ಮಠದ ಶ್ರೀ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಮೂಢನಂಬಿಕೆ ಬಿಡಬೇಕು, ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಶ್ರೀಮಠದ ಸೇವಾಕಾರ್ಯವನ್ನು ಶ್ಲಾಘಿಸಿ, ಮಠ, ಮಾನ್ಯಗಳು ಜಾತಿ, ಮತ, ಬೇಧವಿಲ್ಲದೆ, ಬಡಮಕ್ಕಳಿಗೆ ಅನ್ನ ದಾಸೋಹ, ವಿದ್ಯಾ ದಾಸೋಹ, ವಸತಿ ದಾಸೋಹ ನೀಡುತ್ತಿರುವ ಅವರನ್ನು ನಾವು ದಿನನಿತ್ಯ ಸ್ಮರಿಸಬೇಕು. ರಾಜ್ಯದಲ್ಲಿ ಮಠಗಳು ನಿರಂತರ ಸೇವೆ ಮಾಡುತ್ತಿವೆ ಇವುಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಶ್ರೀವೀರಭದ್ರೇಶ್ವರ ದೇವಾಲಯದ ನಿರ್ಮಿಣಕ್ಕೆ ಪೂರ್ಣ ಸಹಕಾರ ನೀಡಿದ ಉದ್ಯಮಿ ಸಮಾಜ ಸೇವಕ ಯು.ಎಸ್. ಶೇಖರ್ ಮಾತನಾಡಿ, ಪಡುವಲು ಶ್ರೀವಿರಕ್ತ ಮಠದಲ್ಲಿ ನಡೆಸಲಾಗುತ್ತಿರುವ ಸಾಮೂಹಿಕ ವಿವಾಹವು ಗ್ರಾಮೀಣ ಭಾಗದ ಬಡವರ್ಗದವರಿಗೆ ಅನುಕೂಲವಾಗಲಿದೆ. ಇಂಥ ಸೇವಾಕಾರ್ಯಕ್ಕೆ ಶ್ರೀಮಠ ತೊಡಗಿಸಿಕೊಂಡಿರುವುದು ಶ್ಲಾಘನೀಯ. ದೇವರು ಕೊಟ್ಟಿರುವುದರಲ್ಲಿ ಅಲ್ಪ ಪ್ರಮಾಣವನ್ನು ಭಗವಂತನಿಗೆ ನೀಡಿದ್ದೇನೆ. ಭಕ್ತರಿಗಾಗಿ ಶ್ರೀವೀರಭದ್ರೇಶ್ವರ ದೇವಾಲಯ ನಿರ್ಮಿಸಲಾಗಿದೆ ಎಂದರು,ಬಿಡಗಲು ವಿರಕ್ತ ಮಠದ ಮಹದೇವ ಸ್ವಾಮೀಜಿ ಮಾತನಾಡಿ, ಸುತ್ತೂರು ಶ್ರೀಗಳ ಮಾರ್ಗದರ್ಶನದೊಡನೆ ಧಾರ್ಮಿಸಭೆ, ಸಾಮೂಹಿಕ ವಿವಾಹ, ಗೋಷ್ಟಿ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಬದುಕು ಬಗವಂತನ ಕೊಡುಗೆ, ಅದ್ದರಿಂದ ಜೀವನವನ್ನು ಸಾರ್ಥಕವಾಗಿ ನಡೆಸಿಕೋಂಡು ಹೋಗಬೇಕು ಎಂದು ಅವರು ಹೇಳಿದರು.
ದೇವನೂರು ಮಠದ ಮಹಾಂತಸ್ವಾಮೀಜಿ, ಶಾಂತಮಲ್ಲಿಕಾರ್ಜಸ್ವಾಮೀಜಿ ಆಶೀರ್ವಚನ ನೀಡಿದರು, ಹಂಚೀಪುರ ಮಠದ ತೋಂಟದಾರ್ಯ ಸ್ವಾಮೀಜಿ, ಪುರಮಠದ ಚಂದ್ರಶೇಖರ ಸ್ವಾಮೀಜಿ, ಮಾದಾಪುರ ಮಠದ ಮಲ್ಲಿಕಾರ್ಜನ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಇದ್ದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸರಗೂರು ತಾಲೂಕು ಘಟಕದ ಅಧ್ಯಕ್ಷ ಡಿ.ಜಿ. ಶಿವರಾಜು, ಕೋಟೆ ತಾಲೂಕು ಅಧ್ಯಕ್ಷ ಮೊತ್ತ ಬಸವರಾಜು, ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಂ. ಕೆಂಡಗಣ್ಣಸ್ವಾಮಿ, ದಡದಹಳ್ಳಿ ಗುರುಸ್ವಾಮಿ, ವೀರಶೈವ ಸಮಾಜದ ಪಟ್ಟಣ ಅಧ್ಯಕ್ಷ ಎಸ್.ಎನ್. ಮೋಹನ್ ಕುಮಾರ್, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸನ್ನ, ಸದಸ್ಯರು, ಶ್ರೀಕಾಳ ಒಡೆಯ ಗುರುಗಳ ಮಹಾ ವಿದ್ಯಾಪೀಠ ಟ್ರಸ್ಟ್ ಅಧ್ಯಕ್ಷ ಮಹದೇವಸ್ವಾಮೀಜಿ, ಕಾರ್ಯದರ್ಶಿ ಶ್ರೀಕಂಠಸ್ವಾಮಿ, ಖಜಾಂಚಿ ಹಂಚೀಪುರ ಗಣಪತಿ, ನಿರ್ದೇಶಕರಾದ ಕಾಟವಾಳು ಗುರುಸ್ವಾಮಿ, ಶಿವಪುರ ಪ್ರಕಾಶ್, ಕೊತ್ತೇಗಾಲ ಶಿವಣ್ಣ, ಮಳಲಿ ಶಿವಕುಮಾರ್, ಬಿಡಗಲು ರಾಜಶೇಖರ್ ದೇವರು, ಎಸ್.ಪಿ.ವಿ. ವಿನಯ್, ಧಾರ್ಮಿಕ ಸಭೆ ವ್ಯವಸ್ಥಾಪಕ ಗಿರೀಶ್ ಮೂರ್ತಿ, ಸೂರ್ಯ ಸೌಂಡ್ ಮಾಲೀಕ ಮಹೇಶ್, ಸೂರ್ಯ ಇದ್ದರು.
ಶ್ರೀಕಾಳ ಒಡೆಯ ಗುರುಗಳ ಮಹಾ ವಿದ್ಯಾಪೀಠ ಮಕ್ಕಳಿಂದ ನಡೆಸಿಕೊಟ್ಟ ಯೋಗ, ಮಹದೇಶ್ವರ ಕುರಿತು ಕಂಸಾಳೆ ನೃತ್ಯ ರಂಜಿಸಿದತು. ಶಿಕ್ಷಕರು, ಮಕ್ಕಳು ಇದ್ದರು.