ಬ್ರಹ್ಮರಥೋತ್ಸವದ ಹಿನ್ನೆಲೆ ಹಸಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದೊಂದಿಗೆ ದೇಗುಲವನ್ನು ಅಲಂಕೃತಗೊಳಿಸಲಾಗಿತ್ತು.
ಕೊಳ್ಳೇಗಾಲ: ಪ್ರಸನ್ನ ಶ್ರೀ ವಿಶಾಲಾಕ್ಷಿ ಸಮೇತ ಶ್ರೀ ವಿಶ್ವನಾಥಸ್ವಾಮಿ ದಿವ್ಯ ಬ್ರಹ್ಮರಥೋತ್ಸವವು ಗುರುವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಪಟ್ಟಣದ ಬಂಗಾರಶೆಟ್ಟಿ ದೇವಸ್ಥಾನದಲ್ಲಿ ಮುಂಜಾನೆಯಿಂದ ಶಿವಯಾಗ ಪೂಜಾರಾಧನೆ, ಬಲಿಪ್ರಧಾನ, ರಥಸಂಫ್ರೋಕ್ಷಣೆ, ರಥಕ್ಕೆ ಕಳಸ ಸ್ಥಾಪನೆ, ನವಗ್ರಹ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಉತ್ಸವಮೂರ್ತಿಯನ್ನು ಅಗ್ರಹಾರ ಬೀದಿಯಲ್ಲಿ ಮಂಟಪೋತ್ಸವ ನಡೆಸಿ ನಂತರ ಶೃಂಗಾರಗೊಂಡಿದ್ದ ರಥದ ಸುತ್ತಲೂ ಪ್ರದಕ್ಷಿಣೆ ಹಾಕಿ ರಥದಲ್ಲಿ ಕುಳ್ಳಿರಿಸಿ ರಥದ ಬೀದಿಗಳಲ್ಲಿ ವಿಧಿ- ವಿಧಾನಗಳೊಂದಿಗೆ ರಥೋತ್ಸವ ನಡೆಸಲಾಯಿತು. ಬ್ರಹ್ಮರಥೋತ್ಸವದ ಹಿನ್ನೆಲೆ ಹಸಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದೊಂದಿಗೆ ದೇಗುಲವನ್ನು ಅಲಂಕೃತಗೊಳಿಸಲಾಗಿತ್ತು. ಪೂಜಾಕೈಂಕರ್ಯವನ್ನು ಪ್ರಧಾನ ಅರ್ಚಕ, ಜ್ಯೋತಿಷಿ ಕೃಷ್ಣಕುಮಾರಶರ್ಮ ನಡೆಸಿಕೊಟ್ಟರು. ರಥೋತ್ಸವದಲ್ಲಿ ಬಂಗಾರಶೆಟ್ಟರ ದೇವಸ್ಥಾನ ಟ್ರಸ್ಟಿಗಳಾದ ಡಾ.ಸಿ.ಪರಮೇಶ್ವರಯ್ಯ, ಕೆ.ವೇಣುಗೋಪಾಲ್, ಎ.ವಿ.ಚಂದ್ರಶೇಖರ್, ವಕೀಲ ಎಲ್.ಮಹದೇವಯ್ಯ, ಬಿ.ಎಸ್.ಗಣೇಶ್ ಕುಮಾರ್, ಮ್ಯಾನೇಜಿಂಗ್ ಟ್ರಸ್ಟಿಗಳು ಆರ್.ನಾಗಪ್ರಕಾಶ್, ಎ.ಪಿ. ಸತೀಶ್ ಕುಮಾರ್, ಮ್ಯಾನೇಜರ್ ಎ.ಪಿ.ಚೆನ್ನವೀರಶೆಟ್ಟಿ ಹಾಗೂ ಭಕ್ತರು ಇದ್ದರು.