ಸಾರಾಂಶ
ಗುರುಮಠಕಲ್ ಪಟ್ಟಣದ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯನ್ನು ಶಾಸಕ ಶರಣಗೌಡ ಕಂದಕೂರು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಮಹಿಳೆಯರ ಸ್ವಾವಲಂಬನೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವು ಹಲವಾರು ಯೋಜನೆಗಳು ಜಾರಿಗೆ ತಂದಿದ್ದು, ಮಹಿಳೆಯರು ಸ್ವಯಂವಾಗಿ ಬದುಕಲು ಪ್ರೇರಣೆ ನೀಡುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ನಡೆದ ಮಹಿಳಾ ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರು ಮನೆ ಸಂಸಾರ ನಡೆಸಲು, ಅರ್ಥಿಕವಾಗಿ ಸದೃಢಗೊಳ್ಳಲು ಧರ್ಮಸ್ಥಳ ಸಂಘವು ಸಹಾಯಕವಾಗಿದೆ ಎಂದರು.
ಸಂಘವು ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮಾಡುವಲ್ಲಿ ಶ್ರಮಪಡುತ್ತಿದೆ. ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ ಆದಾಯಗಳಿಸುವ ಮಾರ್ಗಪಯೋಗ ಕೆಲಸಗಳಲ್ಲಿ ತೊಡಗಿಸಿದೆ. ಹಣವನ್ನು ಉಳಿತಾಯ ಮಾಡಿ ವ್ಯವಾಹರ ಮಾಡುವ ಕಲೆಯ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಮಾತನಾಡಿ, ಮಹಿಳೆಯರು ಉತ್ತಮ ಶಿಕ್ಷಿತರಾದರೆ ಕುಟುಂಬ ಅರ್ಥಿಕವಾಗಿ ಸಬಲಗೊಳ್ಳುವ ಜತೆಗೆ ಉತ್ತಮ ಸಂಸ್ಕಾರ ನೀಡುವದರೊಂದಿಗೆ ಸಮಾಜ ಪರಿವರ್ತನೆ ಮಾಡುವ ಸಬಲೆಯಳು ಎಂದರು.
ಖಾಸಾಮಠದ ಪೂಜ್ಯಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಜಿಲ್ಲಾ ನಿರ್ದೇಶಕರಾದ ಕಮಲಾಕ್ಷ, ತಾಲೂಕು ಯೋಜನಾಧಿಕಾರಿ ಮಂಜುನಾಥ, ವಲಯ ಮೇಲ್ವಿಚಾರಕ ಮಹಾಂತೇಶ, ಬಸವರಾಜ, ನರಸಿಂಹುಲು, ವಿಜಯಲಕ್ಷ್ಮಿ, ಲಕ್ಷ್ಮಿ, ಶರಣು ಸೇರಿದಂತೆ ಸಂಘದ ಮಹಿಳೆಯರು ಇದ್ದರು.