21ರಿಂದ ಶ್ರೀಗಳ ಚಾತುರ್ಮಾಸ

| Published : Jul 19 2024, 12:47 AM IST

ಸಾರಾಂಶ

ತೀರ್ಥಹಳ್ಳಿಯ ಭೀಮಸೇತು ಮುನಿವೃಂದ ಮಠದ ಪೀಠಾಧಿಪತಿ ರಘುವರೇಂದ್ರ ತೀರ್ಥ ಶ್ರೀಪಾದಂಗಳವರ 16 ನೇ ಚಾತುರ್ಮಾಸ ವ್ರತವು ಜು.21 ರಿಂದ ಸೆ.18 ರವರೆಗೆ

ತುಮಕೂರು: ತೀರ್ಥಹಳ್ಳಿಯ ಭೀಮಸೇತು ಮುನಿವೃಂದ ಮಠದ ಪೀಠಾಧಿಪತಿ ರಘುವರೇಂದ್ರ ತೀರ್ಥ ಶ್ರೀಪಾದಂಗಳವರ 16 ನೇ ಚಾತುರ್ಮಾಸ ವ್ರತವು ಜು.21 ರಿಂದ ಸೆ.18 ರವರೆಗೆ ತುಮಕೂರಿನ ಕೆ.ಆರ್.ಬಡಾವಣೆಯ ಶ್ರೀಕೃಷ್ಣ ಮಂದಿರದಲ್ಲಿ ನಡೆಯಲಿದೆ.

ಜುಲೈ 20 ರಂದು ಶನಿವಾರ ಸಂಜೆ 5 ಗಂಟೆಗೆ ತುಮಕೂರು ನಗರದ ಟೌನ್‌ಹಾಲ್ ವೃತ್ತದ ಬಳಿ ಶ್ರೀಪಾದಂಗಳ ಪುರಪ್ರವೇಶ ನಡೆಯಲಿದೆ. ಚಾತುರ್ಮಾಸದ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯವರೆಗೆ ಶ್ರೀಗಳಿಂದ ಶ್ರೀ ಭಗವದ್ಗೀತಾ ಪಾಠ ನಡೆಯಲಿದೆ . ಬೆಳಗ್ಗೆ 8 ರಿಂದ 10 ರವರೆಗೆ ಗೃಹ ಪಾದಪೂಜೆ, ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಶ್ರೀಗಳಿಂದ ಸಂಸ್ಥಾನಪೂಜೆ ನೆರವೇರಲಿದೆ. ಸಂಜೆ 5 ರಿಂದ 6.30 ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ನಂತರ ಶ್ರೀಗಳಿಂದ ಉಪನ್ಯಾಸ ಹಾಗೂ ಪೂಜಾದಿಗಳು ನಡೆಯುವುದು. ಪ್ರತಿ ಶನಿವಾರ, ಭಾನುವಾರ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗೆ ವ್ಯವಸ್ಥಾಪಕ ಜನಾರ್ಧನ ಭಟ್ 9880639012 ಅವರನ್ನು ಸಂಪರ್ಕಿಸಬಹುದು ಎಂದು ಕೃಷ್ಣಮಂದಿರದ ಅಧ್ಯಕ್ಷ ಶ್ರೀನಿವಾಸ ಹತ್ವಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.