ನಾಡಹಬ್ಬ ದಸರೆಯ ಸಂಭ್ರಮ ಸಾಂಸ್ಕೃತಿಕ ನಗರಿಯಲ್ಲಿ ಆವರಿಸುತ್ತಿದ್ದು, ಈ ಬಾರಿ ಪ್ರಮುಖ ಆಕರ್ಷಣೆಯಾಗಿರುವ ಶ್ರೀಕಂಠ ಆನೆಯು ಗಜಪಡೆ ಪೈಕಿ ಅತಿ ಹೆಚ್ಚು (5790 ಕೇಜಿ) ತೂಗುವ ಮೂಲಕ ಬಲಿಷ್ಠ ಆನೆಯಾಗಿ ಹೊರಹೊಮ್ಮಿದೆ.

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ನಾಡಹಬ್ಬ ದಸರೆಯ ಸಂಭ್ರಮ ಸಾಂಸ್ಕೃತಿಕ ನಗರಿಯಲ್ಲಿ ಆವರಿಸುತ್ತಿದ್ದು, ಈ ಬಾರಿ ಪ್ರಮುಖ ಆಕರ್ಷಣೆಯಾಗಿರುವ ಶ್ರೀಕಂಠ ಆನೆಯು ಗಜಪಡೆ ಪೈಕಿ ಅತಿ ಹೆಚ್ಚು (5790 ಕೇಜಿ) ತೂಗುವ ಮೂಲಕ ಬಲಿಷ್ಠ ಆನೆಯಾಗಿ ಹೊರಹೊಮ್ಮಿದೆ.

ಮೈಸೂರಿನಲ್ಲಿ ಜಂಬೂಸವಾರಿಗೆ ಆಗಮಿಸಿದ ಆನೆಗಳ ತೂಕವನ್ನು ಇಲ್ಲಿನ ಖಾಸಗಿ ವೇ ಬ್ರಿಡ್ಜ್‌ನಲ್ಲಿ ತೂಗಲಾಯಿತು. 9 ಆನೆಗಳನ್ನು ಹಿಂದಿಕ್ಕಿ, 57 ವರ್ಷದ ಶ್ರೀಕಂಠ ಮೊದಲ ಸ್ಥಾನ ಪಡೆದಿದ್ದಾನೆ.

ಕಳೆದ ಬಾರಿಯಷ್ಟೇ ದಸರೆಗೆ ಆಗಮಿಸಿದ್ದ ಶ್ರೀಕಂಠ ಆನೆಯು ಪಟ್ಟದ ಆನೆಯಾಗಿ ಕಾರ್ಯ ನಿರ್ವಹಿಸುವ ಮೂಲಕ ಗಮನ ಸೆಳೆದಿತ್ತು. ಇದೀಗ 2ನೇ ಬಾರಿ ದಸರಾ ಮಹೋತ್ಸಕ್ಕೆ ಆಗಮಿಸಿರುವ ಶ್ರೀಕಂಠ ತೂಕದಲ್ಲಿ ಉಳಿದೆಲ್ಲ ಆನೆಗಳನ್ನು ಹಿಂದಿಕ್ಕುವ ಮೂಲಕ ಮತ್ತೆ ಗಮನ ಸೆಳೆದಿದೆ.

ಶ್ರೀಕಂಠನ ನಂತರದಲ್ಲಿ 41 ವರ್ಷದ ಏಕಲವ್ಯ ಆನೆ 5600 ತೂಕವಿದ್ದು, 2ನೇ ಸ್ಥಾನ ಪಡೆದಿದೆ. ನಂತರದಲ್ಲಿ ಧನಂಜಯ (5530), ಮಹೇಂದ್ರ (5490) ಆನೆಗಳು ಸ್ಥಾನ ಪಡೆದವು. ಇನ್ನೂ 54 ವರ್ಷದ ಲಕ್ಷ್ಮಿ ಆನೆಯು 3990 ಕೆ.ಜಿ. ತೂಕದೊಂದಿಗೆ 8ನೇ ಸ್ಥಾನ ಹಾಗೂ 46 ವರ್ಷದ ಕಾವೇರಿ ಆನೆಯು 3075 ಕೆ.ಜಿ. ತೂಕದೊಂದಿಗೆ 9ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಪ್ರತಿ ಆನೆಗೆ 50 ರು. ಶುಲ್ಕ:

ಸಾಯಿರಾಂ ಆ್ಯಂಡ್ ಕೋ- ಎಲೆಕ್ಟ್ರಾನಿಕ್ ತೂಕದ ಯಂತ್ರದ ಮೇಲೆ ನಿಲ್ಲಿಸಿ 9 ಆನೆಗಳ ತೂಕ ಪರೀಕ್ಷಿಸಲಾಯಿತು. ಪ್ರತಿ ಆನೆಗೆ 50 ರುಪಾಯಿಗಳಂತೆ 9 ಆನೆಗಳಿಗೆ 450 ರು. ಅನ್ನು ಅರಣ್ಯ ಇಲಾಖೆಯವರು ಪಾವತಿಸಿದರು.ಯಾವ ಆನೆ, ಎಷ್ಟು ತೂಕ?=

ಆನೆವಯಸ್ಸುತೂಕ

=

ಶ್ರೀಕಂಠ575790

ಏಕಲವ್ಯ415600

ಧನಂಜಯ455530

ಮಹೇಂದ್ರ425490

ಪ್ರಶಾಂತ545205

ಗೋಪಿ435170

ಶ್ರೀರಾಮ414820

ಲಕ್ಷ್ಮೀ543990

ಕಾವೇರಿ463075