ಪಿಎಲ್‌ಡಿ ಬ್ಯಾಂಕ್ ಪ್ರತಿನಿಧಿಯಾಗಿ ಶ್ರೀಕಂಠಪ್ರಸಾದ್ ಅವಿರೋಧ ಆಯ್ಕೆ

| Published : Oct 04 2025, 01:00 AM IST

ಪಿಎಲ್‌ಡಿ ಬ್ಯಾಂಕ್ ಪ್ರತಿನಿಧಿಯಾಗಿ ಶ್ರೀಕಂಠಪ್ರಸಾದ್ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನಿಂದ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ಗೆ ತಾಲೂಕು ಪ್ರತಿನಿಧಿಯಾಗಿ ಉಡಿಗಾಲ ಕ್ಷೇತ್ರದ ನಿರ್ದೇಶಕ ಪಿ. ಶ್ರೀಕಂಠಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನಿಂದ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ಗೆ ತಾಲೂಕು ಪ್ರತಿನಿಧಿಯಾಗಿ ಉಡಿಗಾಲ ಕ್ಷೇತ್ರದ ನಿರ್ದೇಶಕ ಪಿ. ಶ್ರೀಕಂಠಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.

ನಗರದ ಪಿಎಲ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ಅಧ್ಯಕ್ಷ ಎಚ್.ಎಂ. ಬಸವಣ್ಣ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಬ್ಯಾಂಕ್‌ಗೆ ಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳುಹಿಸುವ ವಿಶೇಷ ಸಭೆ ನಡೆಯಿತು. ಸಭೆಯಲ್ಲಿ ೧೪ ಮಂದಿ ನಿರ್ದೇಶಕರು ಭಾಗವಹಿಸಿದ್ದರು. ಪಿ. ಶ್ರೀಕಂಠಪ್ರಸಾದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಭೆ ಅನುಮೋದನೆ ನೀಡಿತು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ ಮಾತನಾಡಿ, ನಮ್ಮ ಸಂಘದಿಂದ ರಾಜ್ಯ ಭೂಮಿ ಬ್ಯಾಂಕ್‌ಗೆ ಪಿ. ಶ್ರೀಕಂಠಸ್ವಾಮಿ ಅವರನ್ನು ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿದ್ದು, ಜಿಲ್ಲೆಯಿಂದ ಒಬ್ಬರು ನಿರ್ದೇಶಕರಾಗುವ ಅವಕಾಶ ಇದೆ. ಹೀಗಾಗಿ ಪಿ. ಶ್ರೀಕಂಠಪ್ರಸಾದ್ ರಾಜ್ಯ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಇತರೆ ತಾಲೂಕು ಪಿಎಲ್‌ಡಿ ಬ್ಯಾಂಕ್ ಪ್ರತಿನಿಧಿಗಳ ವಿಶ್ವಾಸವನ್ನು ಗಳಿಸಿ, ರಾಜ್ಯ ನಿರ್ದೇಶಕರಾಗಿ ಆಯ್ಕೆಯಾಗಲಿ ಎಂಬುವುದು ನಮ್ಮೇಲ್ಲರ ಅಭಿಲಾಷೆಯಾಗಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಿನಿಂದ ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ ಎಂದರು. ಪಿ. ಶ್ರೀಕಂಠಪ್ರಸಾದ್ ಮಾತನಾಡಿ, ಪಿಎಲ್‌ಡಿ ಬ್ಯಾಂಕ್ ಪ್ರತಿನಿಧಿಯಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ನಮ್ಮ ತಂದೆ ದಿ. ಉಡಿಗಾಲ ಪಾಪಣ್ಣ ೩೫ ವರ್ಷಗಳಿಗೂ ಹೆಚ್ಚು ಕಾಲ ಬ್ಯಾಂಕ್ ಮುನ್ನಡೆಸಿದ್ದರು. ಎಸ್‌ಎಲ್‌ಡಿ ಬ್ಯಾಂಕ್‌ನ ನಿರ್ದೇಶಕರಾಗಿಯು ಸೇವೆ ಸಲ್ಲಿಸಿದ್ದರು. ಅವರಂತೆ ನಾನು ಸಹ ಪಿಎಲ್‌ಡಿ ಬ್ಯಾಂಕ್‌ಗೆ ಪ್ರಥಮ ಬಾರಿಗೆ ನಿರ್ದೇಶಕನಾಗಿ ಆಯ್ಕೆಯಾಗಿದ್ದು. ಸಹಕಾರಿ ಕ್ಷೇತ್ರದಲ್ಲಿ ಅವರಂತೆ ಸೇವೆ ಸಲ್ಲಿಸುವ ಉದ್ದೇಶ ಹೊಂದಿದ್ದೇನೆ, ಅವರ ಹಾದಿಯಲ್ಲಿಯೇ ಮುಂದುವರಿಯುವುದಾಗಿ ತಿಳಿಸಿದರು.ರಾಜ್ಯ ಬ್ಯಾಂಕ್‌ನ ನಿರ್ದೇಶಕ ಸ್ಥಾನ ಪ್ರಬಲ ಅಕಾಂಕ್ಷಿಯಾಗಿದ್ದು, ಇತರೇ ಪಿಎಲ್‌ಡಿ ಬ್ಯಾಂಕ್ ಪ್ರತಿನಿಧಿಗಳ ಬೆಂಬಲದೊಂದಿಗೆ ಆಯ್ಕೆಯಾಗುವ ವಿಶ್ವಾಸ ವಿದೆ. ಚಾಮರಾಜನಗರಕ್ಕೆ ಅನೇಕ ಬಾರಿ ಈ ಅವಕಾಶ ತಪ್ಪಿ ಹೋಗಿದೆ. ಈ ಬಾರಿ ಜಿಲ್ಲೆಯ ಪ್ರತಿನಿಧಿಯಾಗಿ ಬ್ಯಾಂಕ್ ಪ್ರತಿನಿಧಿಸುವ ಉದ್ದೇಶ ನಮ್ಮದಾಗಿದೆ ಎಂದು ಶ್ರೀಕಂಠಪ್ರಸಾದ್ ತಿಳಿಸಿದರು.

ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ನಿಂಗೇಗೌಡ, ನಿರ್ದೇಶಕರಾದ ನಲ್ಲೂರು ಮಹದೇವಪ್ಪ, ಜನ್ನೂರು ದೊರೆಸ್ವಾಮಿ, ಬಸವಟ್ಟಿ ಬಿ.ಎಸ್. ಶಂಕರಮೂರ್ತಿ, ಬಸುಮರಿ, ಬಿಸಲವಾಡಿ ರವಿ, ಸಾಗಡೆ ನಂದೀಶ್, ಮಹದೇವನಾಯಕ, ಮಲೆಯೂರು ರೇವಣ್ಣ, ಪ್ರವೀಣ್ ನಾಯ್ಕ್ , ಮಾದಲಾಂಭಿಕಾ, ಜ್ಯೋತಿ, ಮುಖಂಡರಾದ ಉಡಿಗಾಲ ರಮೇಶ್, ಮಹೇಶ್, ಬಸವರಾಜು, ಪ್ರಭಾರ ವ್ಯವಸ್ಥಾಪಕ ಸತೀಶ್ ಶಶಿಕಿರಣ್, ನವೀನ್, ದಿನಕರ್ ಇದ್ದರು.