ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಇಂದಿನ ರಾಜಕಾರಣದಲ್ಲಿ ದ್ವೇಷ, ಅಸೂಯೆ ಹೆಚ್ಚಿರುವ ದಿನಗಳಲ್ಲಿ, ಅವುಗಳನ್ನು ತಮ್ಮ ರಾಜಕೀಯ ಜೀವನುದ್ದಕ್ಕೂ ಮೈಗಂಟಿಸಿಕೊಳ್ಳದೇ ೫ ದಶಕಗಳಿಗೂ ಹೆಚ್ಚು ಕಾಲ ಉತ್ತಮ ರಾಜಕಾರಣಿಯಾಗಿದ್ದವರು ಮಾಜಿ ಸಚಿವ ಎಚ್. ಸಿ. ಶ್ರೀಕಂಠಯ್ಯನವರು ಎಂದು ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ ಹೇಳಿದರು.ಮಾಜಿ ಸಚಿವರಾದ ಎಚ್. ಸಿ. ಶ್ರೀಕಂಠಯ್ಯನವರ ಜನ್ಮಶತಮಾನೋತ್ಸವದ ಅಂಗವಾಗಿ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಹೊನಲು ಬೆಳಕಿನ ರಾಜ್ಯಮಟ್ಟದ ಹೊನಲು ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀಕಂಠಯ್ಯನವರ ರಾಜಕೀಯ ಶಕ್ತಿ ಇತ್ತೀಚಿನ ಯುವಕರಿಗೆ, ಯುವ ರಾಜಕಾರಣಿಗಳಿಗೆ ತಿಳಿದಿಲ್ಲ, ರಾಜಕೀಯವಾಗಿ ಶಿಸ್ತು, ಸೇವೆ, ಬದ್ಧತೆ ಹೊಂದಿದ್ದ ಅತ್ಯಂತ ಎತ್ತರದ ವ್ಯಕ್ತಿ. ತಾಲೂಕಿನ ಪ್ರತಿ ಕುಟುಂಬಕ್ಕೆ, ಬಡವರಿಗೆ ಆಸರೆಯಾಗಿದ್ದವರು, ಮಕ್ಕಳ ವಿದ್ಯಾಭ್ಯಾಸ, ಕೆಲಸ, ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ವ್ಯಕ್ತಿ. ಇಂದಿಗೂ ಶ್ರೀಕಂಠಯ್ಯನವರ ಹೆಸರಿನಲ್ಲಿ ಅದೆಷ್ಟೋ ಕುಟುಂಬಗಳು ಜೀವನ ಕಂಡುಕೊಂಡಿವೆ. ಜಿಲ್ಲೆಯಲ್ಲಿಯ ಅಭಿವೃದ್ಧಿಗೆ ಅವರ ಸೇವೆ ಅನನ್ಯವಾದದ್ದು, ಅವರ ಸೇವಾ ಮನೋಭಾವದಿಂದoಲೇ ಅಣ್ಣಯ್ಯ ಎಂದು ಪರಿಚತರಾಗಿದ್ದರು. ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅವರ ಖ್ಯಾತಿ ಪಡೆದಿದ್ದರು, ಇಂದಿಗೂ ಅವರ ಹೆಸರು ರಾಜ್ಯ ರಾಜಕೀಯದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರು.ರಾಜಕೀಯವಾಗಿ ಅವರನ್ನು ಹತ್ತಿರದಿಂದ ಬಲ್ಲವನು ನಾನು, ಅವರ ಎದುರು ಸೋತವನು, ಗೆದ್ದವನು, ನನಗೆ ರಾಜಕೀಯವಾಗಿ ಶಕ್ತಿ ಮತ್ತು ವೈಚಾರಿಕತೆ ಇದೆ ಎಂದರೇ ಅವರ ಒಡನಾಟ ಕಾರಣ. ಅವರ ೧೦೦ನೇ ವರ್ಷದ ಜನ್ಮಶತಮಾನೋತ್ಸವವನ್ನು ಅವರ ಮೊಮ್ಮಗ ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ಎಚ್. ಸಿ. ಲಲಿತ್ ರಾಘವ್ ಮತ್ತು ಎಚ್. ಎಸ್. ವಿಜಯಕುಮಾರ್‌ ಕುಟುಂಬ ಅತ್ಯಂತ ವಿಜೃಂಭಣೆಯಿoದ ಮಾಡುತ್ತಿದೆ. ಅದಕ್ಕೆ ತಾಲೂಕಿನ ಪ್ರತಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಜನಸಾಮಾನ್ಯರು ಸಹಕಾರ ನೀಡಬೇಕು. ಈಗಾಗಲೇ ಯುವಕರಿಗೆ ಕೌಶಲ್ಯ ತರಬೇತಿ, ಸ್ಪೀಕಿಂಗ್ ಕೋಸ್ನಂತಹ ತರಬೇತಿ ನೀಡುತ್ತಿದ್ದು, ಯುವಕರನ್ನು ಕ್ರೀಡೆಯತ್ತ ಆಸಕ್ತಿ ಮೂಡಿಸುವ ಸಲುವಾಗಿ ರಾ?ಮಟ್ಟದ ವಾಲಿಬಾಲ್ ಪಂದ್ಯಾವಳಿ ಅಯೋಜಿಸಿದ್ದು ಅವರ ಪ್ರಯತ್ನಕ್ಕೆ ಶುಭವಾಗಲಿ ಎಂದರು.ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್‌ ಗೌಡ ಮಾತನಾಡಿ, ತಾಲೂಕಿನಲ್ಲಿ ಶ್ರೀಕಂಠಯ್ಯನವರ ಮಾಡಿರುವ ಅಭಿವೃದ್ಧಿ ಕಾರ್ಯಗಳು ಶಾಶ್ವತ ನೆಲೆಗಟ್ಟಿನವು, ಸಹಕಾರ ಸಕ್ಕರೆ ಕಾರ್ಖಾನೆ, ಬಸ್‌ನಿಲ್ದಾಣ, ಕೋರ್ಟ್ ಸಂಕೀರ್ಣ, ಸರ್ಕಾರಿ ಶಾಲಾ ಕಾಲೇಜುಗಳ ಕೊಡುಗೆಗಳನ್ನು ಜನ ಎಂದೆoದಿಗೂ ಸ್ಮರಿಸುತ್ತಾರೆ ಎಂದರು.ಕೇರಳ ಪೊಲೀಸ್ ಮತ್ತು ಹಿರಿಸಾವೆ ತಂಡಗಳ ನಡುವೆ ನಡೆದ ಮೊದಲ ಪಂದ್ಯಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ಎಸ್. ವಿಜಯ್ ಕುಮಾರ್‌ ಮತ್ತು ಕವಿಕಾ ಅಧ್ಯಕ್ಷರಾದ ಎಚ್. ಸಿ. ಲಲಿತ್ ರಾಘವ್ ಚಾಲನೆ ನೀಡಿದರು.ಸಮಾರಂಭದಲ್ಲಿ ಮುಖಂಡರಾದ ಜೆ.ಎಂ.ರಾಮಚಂದ್ರ, ಎಂ.ಶಂಕರ್, ಎನ್.ಡಿ.ಕಿಶೋರ್, ಸಿ.ಟಿ.ಅಶೋಕ್‌ ಕುಮಾರ್, ದಿಡಗ ಬಾಲಣ್ಣ, ಅಣತಿ ಆನಂದ್‌ ಕುಮಾರ್, ಎಂ.ಕೆ.ಮಂಜೇಗೌಡ, ಎ.ಬಿ.ನಂಜುಂಡೇಗೌಡ, ಉದಯ್‌ ಕುಮಾರ್, ವಾಸು, ಸುಹೀಲ್ ಪಾ, ಸೇರಿ ಪುರಸಭಾ ಮಾಜಿ ಸದಸ್ಯರು, ಗ್ಯಾರಂಟಿ ಸಮಿತಿ ಸದಸ್ಯರು, ಕೆಡಿಪಿ ಸದಸ್ಯರು ಹಾಗೂ ಎಚ್. ಸಿ. ಶ್ರೀಕಂಠಯ್ಯ ಸೇವಾಸಮಿತಿ ಪದಾಧಿಕಾರಿಗಳು ಹಾಜರಿದ್ದರು.