ಇಲ್ಲಿನ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಶನಿವಾರ ಪುರುಶೋತ್ತಮ ಮಾಸದ ಶುಭಾವಸರದಲ್ಲಿ ಪಂಚದುರ್ಗಾ ಹೋಮ ಸಹಿತ ವಿವಿಧ ಧಾರ್ಮಿಕ ಅನುಷ್ಠಾನಗಳು ಕ್ಷೇತ್ರದ ವೈದಿಕರಾದ ಸುಧೀಂದ್ರ ಭಟ್ ನೇತೃತ್ವದಲ್ಲಿ ವೈದಿಕರಾದ ಸಂದೇಶ್ ಭಟ್, ಶ್ರೀಕಾಂತ್ ಭಟ್, ನರೇಶ್ ಭಟ್, ಮಂಜುನಾಥ್ ಭಟ್, ರವಿಚಂದ್ರ ಭಟ್, ಎಣ್ಣೆಹೊಳೆ ಲಕ್ಷ್ಮೀಪುರ ಶ್ರೀಕಾಂತ್ ಭಟ್ ಸಹಭಾಗಿತ್ವದಲ್ಲಿ ಜರುಗಿತು.

ಶಿರ್ವ: ಇಲ್ಲಿನ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಶನಿವಾರ ಪುರುಶೋತ್ತಮ ಮಾಸದ ಶುಭಾವಸರದಲ್ಲಿ ಪಂಚದುರ್ಗಾ ಹೋಮ ಸಹಿತ ವಿವಿಧ ಧಾರ್ಮಿಕ ಅನುಷ್ಠಾನಗಳು ಕ್ಷೇತ್ರದ ವೈದಿಕರಾದ ಸುಧೀಂದ್ರ ಭಟ್ ನೇತೃತ್ವದಲ್ಲಿ ವೈದಿಕರಾದ ಸಂದೇಶ್ ಭಟ್, ಶ್ರೀಕಾಂತ್ ಭಟ್, ನರೇಶ್ ಭಟ್, ಮಂಜುನಾಥ್ ಭಟ್, ರವಿಚಂದ್ರ ಭಟ್, ಎಣ್ಣೆಹೊಳೆ ಲಕ್ಷ್ಮೀಪುರ ಶ್ರೀಕಾಂತ್ ಭಟ್ ಸಹಭಾಗಿತ್ವದಲ್ಲಿ ಜರುಗಿತು.

ಬೆಳಿಗ್ಗೆ ಗಣಹೋಮ, ಶ್ರೀದೇವಿಗೆ ಪಂಚಾಮೃತಾಭಿಷೇಕ, ಸೀಯಾಳ ಅಭಿಷೇಕ, ಅಲಂಕಾರ, ಮಧ್ಯಾಹ್ನ ಮಹಾನೈವೇದ್ಯ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು. ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ಶ್ರೀದೇವೀ ಸನ್ನಿಧಿಯಲ್ಲಿ ರಂಗಪೂಜೆ ಸಹಿತ ವಿವಿಧ ಧಾರ್ಮಿಕ ಅನುಷ್ಠಾನಗಳು ಜರುಗಿದವು. ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ಅಧ್ಯಕ್ಷ ಉಮೇಶ ಪ್ರಭು ಪಾಲಮೆ ಸಹಿತ ಆಡಳಿತ ಮಂಡಳಿ ಸದಸ್ಯರು, ಮಾಜಿ ಆಡಳಿತ ಮೊಕ್ತೇಸರರು, ಕ್ಷೇತ್ರದ ಭಗವದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.