ಶ್ರೀಮಂಚಮ್ಮ ದೇವಸ್ಥಾನದ ಅಭಿವೃದ್ಧಿ ಅನುದಾನ ಶಾಸಕ ಮಧುಗೆ ಮನವಿ

| Published : Nov 15 2024, 12:32 AM IST

ಶ್ರೀಮಂಚಮ್ಮ ದೇವಸ್ಥಾನದ ಅಭಿವೃದ್ಧಿ ಅನುದಾನ ಶಾಸಕ ಮಧುಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಮಧು ಜಿಮಾದೇಗೌಡರನ್ನು ಭೇಟಿ ನೀಡಿದ ಅಣ್ಣೂರು ಗ್ರಾಮದ ಮುಖಂಡರು, ನ.25, 26ರಂದು ದೇವಸ್ಥಾನ ಉದ್ಘಾಟನೆ ಗೊಳ್ಳುತ್ತಿದೆ. ಸದ್ಯಕ್ಕೆ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ತಮ್ಮ ಶಾಸಕರ ಅನುದಾನದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಭಾರತೀನಗರ

ಅಣ್ಣೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀಮಂಚಮ್ಮ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಕೋರಿ ಸೇವಾ ಸಮಿತಿ ಮುಖಂಡರು ಶಾಸಕ ಮಧು ಜಿ.ಮಾದೇಗೌಡರಿಗೆ ಮನವಿ ಸಲ್ಲಿಸಿದರು.

ಶಾಸಕರ ಕಚೇರಿಗೆ ಭೇಟಿ ನೀಡಿದ ಮುಖಂಡರು, ನ.25, 26ರಂದು ದೇವಸ್ಥಾನ ಉದ್ಘಾಟನೆ ಗೊಳ್ಳುತ್ತಿದೆ. ಸದ್ಯಕ್ಕೆ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ತಮ್ಮ ಶಾಸಕರ ಅನುದಾನದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಕೊಡಬೇಕೆಂದು ಮನ್ಮುಲ್ ಮಾಜಿ ನಿರ್ದೇಶಕ ಎ.ಸಿ.ಸತೀಶ್ ಮನವಿ ಸಲ್ಲಿಸಿದರು.

ಇದಕ್ಕೆ ಸ್ಪಂದಿಸಿದ ಶಾಸಕರು, ನನಗೆ ಅನುದಾನ ಬಂದ ಕೂಡಲೇ ಹಣ ಬಿಡುಗಡೆಗೊಳಿಸಿ ಕೊಡುತ್ತೇನೆ. ದೇವಸ್ಥಾನದ ಅಭಿವೃದ್ಧಿಗೆ ನನ್ನ ಸಹಕಾರ ಇದ್ದೇ ಇರುತ್ತದೆ ಎಂದರು.

ಈ ವೇಳೆ ಆರ್.ಸಿದ್ದಪ್ಪ, ಯಜಮಾನ್ ಪಟೇಲ್ ರಮೇಶ್, ಹೊಂಡಾ ಸಿದ್ದೇಗೌಡ, ಚಿಕ್ಕಣ್ಣ, ರವಿಕೃಷ್ಣಪ್ಪ, ಜಯಸ್ವಾಮಿ, ರವಿ, ಸಿದ್ದರಾಜು, ಚಾಟಿ ಸಿದ್ದೇಗೌಡ ಸೇರಿದಂತೆ ಹಲವರಿದ್ದರು.

ಇಂದು ವಿದ್ಯುತ್ ವ್ಯತ್ಯಯ

ಭಾರತೀನಗರ:

ಭಾರತೀನಗರ ಶಾಖೆ 2ರ ವ್ಯಾಪ್ತಿಗೆ ಬರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನ.15 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮದ್ದೂರು ಪಟ್ಟಣದ ಉಪ ವಿಭಾಗದ ಭಾರತೀನಗರ ಶಾಖೆ 2 ರ ವ್ಯಾಪ್ತಿಯ ಕೆ.ಎಂ.ದೊಡ್ಡಿ ವಿತರಣಾ ಕೇಂದ್ರದಿಂದ ಹಾದು ಬರುವ ಇ-7 ಮುಟ್ಟನಹಳ್ಳಿ ಎನ್‌ಜೆವೈ ಮಾರ್ಗದಲ್ಲಿ ನ.15 ರಂದು ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ದೇವರಹಳ್ಳಿ, ಕುರಿಕೆಂಪನದೊಡ್ಡಿ, ದೊಡ್ಡರೆಸಿನಕೆರೆ, ಮುಟ್ಟನಹಳ್ಳಿ ಹಾಗೂ ಅಂಬರಹಳ್ಳಿ ಗ್ರಾಮಗಳಿಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ ಕೋರಿದ್ದಾರೆ.ಮನ್ಮುಲ್ ಒಕ್ಕೂಟಕ್ಕೆ ಆರ್.ಎನ್.ವಿಶ್ವಾಸ್ ನಾಮನಿರ್ದೇಶನ

ಮಳವಳ್ಳಿ:

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಗೆ ಅಧಿಕಾರೇತರ ಸದಸ್ಯರನ್ನಾಗಿ ತಾಲೂಕಿನ ರಾಗಿಬೊಮ್ಮನಹಳ್ಳಿ ಆರ್.ಎನ್.ವಿಶ್ವಾಸ್ ಅವರನ್ನು ನಾಮನಿರ್ದೇಶನ ಮಾಡಿ ಗುರುವಾರ ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಜಿ.ರಂಗನಾಥ ಆದೇಶ ಹೊರಡಿಸಿದ್ದಾರೆ. ಮದ್ದೂರು ತಾಲೂಕಿನ ಕದಲೂರು ರಾಮಕೃಷ್ಣರ ನಾಮನಿರ್ದೇಶನ ರದ್ದುಪಡಿಸಿ ಅವರ ಜಾಗಕ್ಕೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ, ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಆರ್.ಎನ್.ವಿಶ್ವಾಸ್ ಅವರನ್ನು ನೇಮಿಸಲಾಗಿದೆ. ಆರ್.ಎನ್. ವಿಶ್ವಾಸ್ ಮಾತನಾಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಮಾರ್ಗದರ್ಶನದಲ್ಲಿ ರೈತರ ಹಿತಕಾಯುವ ಕೆಲಸ ಮಾಡಲಾಗುವುದು ಎಂದರು.