ಸಾರಾಂಶ
ಶೃಂಗೇರಿ: ತಾಲೂಕಿನಾದ್ಯಂತ ಆರಿದ್ರ ಮಳೆಯ ಅಬ್ಬರ ಜೋರಾಗಿದ್ದು, ಶನಿವಾರವೂ ಬೆಳಿಗ್ಗೆಯಿಂದಲೇ ಎಡಬಿಡದೆ ಭಾರೀ ಮಳೆ ಸುರಿಯಿತು. ಅಂಗನವಾಡಿಗಳಿಗೆ ಹೊರತುಪಡಿಸಿದಂತೆ ಶಾಲೆಗಳಿಗೆ ರಜೆ ಇರಲಿಲ್ಲ. ಎಂದಿನಂತೆ ಶಾಲೆಗಳು ನಡೆಯಿತು.
ಶೃಂಗೇರಿ: ತಾಲೂಕಿನಾದ್ಯಂತ ಆರಿದ್ರ ಮಳೆಯ ಅಬ್ಬರ ಜೋರಾಗಿದ್ದು, ಶನಿವಾರವೂ ಬೆಳಿಗ್ಗೆಯಿಂದಲೇ ಎಡಬಿಡದೆ ಭಾರೀ ಮಳೆ ಸುರಿಯಿತು. ಅಂಗನವಾಡಿಗಳಿಗೆ ಹೊರತುಪಡಿಸಿದಂತೆ ಶಾಲೆಗಳಿಗೆ ರಜೆ ಇರಲಿಲ್ಲ. ಎಂದಿನಂತೆ ಶಾಲೆಗಳು ನಡೆಯಿತು.
ಕೆರೆಕಟ್ಟೆ, ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನದಿಂದಲೇ ಬಿರುಸುಗೊಂಡ ಮಳೆ ರಾತ್ರಿಯಿಡೀ ಸುರಿಯಿತು.ನಂದಿನಿ,ನಳಿನಿ,ತುಂಗಾನದಿಯಲ್ಲಿ ನೀರಿನ ಮಟ್ಟ ಮತ್ತೆ ಹೆಚ್ಚಳವಾಗಿ ತಗ್ಗು ಪ್ರದೇಶಗಳೆಲ್ಲ ಮತ್ತೆ ಜಲಾವೃತ ಗೊಂಡಿತ್ತು.ತಾಲೂಕಿನ ವಿವಿಧೆಡೆ ಮತ್ತೆ ಭೂ, ಗುಡ್ಡಕುಸಿತ ಮುಂದುವರಿದಿತ್ತು ಮಳೆ ಜೋರಾಗಿ ಸುರಿಯುತ್ತಿರುವುದರಿಂದ ಗುಡ್ಡದ ಮಣ್ಣು ಕುಸಿದು ರಸ್ತೆಯ ಮೇಲೆ ಬೀಳುತ್ತಿದೆ. ಆನೆಗುಂದ, ತ್ಯಾವಣ,ನೆಮ್ಮಾರು,ತನಿಕೋಡು ಸೇರಿದಂತೆ ವಿವಿಧೆಡೆ ಕುಸಿತ ಮುಂದುವರೆದಿದೆ.
ಮರಗಳು ಉರುಳಿ ರಸ್ತೆ,ವಿದ್ಯುತ್ ಲೈನ್ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ಕಂಬಗಳು,ಲೈನ್ ತುಂಡಾಗುತ್ತಿದ್ದು ಪಟ್ಟಣ,ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಹಗಲು ರಾತ್ರಿ ಕಡಿತಗೊಳ್ಳುತ್ತಿದೆ.ಹಳ್ಳಗಳು ತುಂಬಿ ಉಕ್ಕಿ ಹರಿಯುತ್ತಿದೆ. ಮೆಣಸೆ ಪಂಚಾಯಿತಿ ಕಿಕ್ರೆಹಳ್ಳ ಭಾರೀ ಮಳೆಯಿಂದಾಗಿ ಉಕ್ಕಿ ಹರಿದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿ ಜನರು ಪರದಾಡುವಂತಾಗಿತ್ತು. ಕಳೆದೆರೆಡು ದಿನಗಳಿಂದ ಆರಿದ್ರ ಮಳೆಯ ಆರ್ಭಟ ಜೋರಾಗಿದ್ದು, ನದಿಗಳಲ್ಲಿ ನೀರಿನ ಪ್ರಮಾಣ ಒಂದೇ ಸಮನೆ ಹೆಚ್ಚಳವಾಗುತ್ತಿದೆ. ಶನಿವಾರ ಸಂಜೆವರೆಗೂ ಮಳೆಯ ಆರ್ಭಟ ಮುಂದುವರಿದಿತ್ತು.5 ಶ್ರೀ ಚಿತ್ರ 2-
ಶೃಂಗೇರಿ ತಾಲೂಕಿನಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಮೆಣಸೆ ಪಂಚಾಯಿತಿ ಕಿಕ್ರೆಹಳ್ಳ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿರುವುದು.