ಮೇ 18ರಂದು ಶ್ರೀನಿಮಿಷಾಂಬ ದೇವಿ ವರ್ಧಂತಿ ಮಹೋತ್ಸವ

| Published : May 16 2024, 12:45 AM IST

ಸಾರಾಂಶ

ಪುರಸಭಾ ವ್ಯಾಪ್ತಿಯ ಗಂಜಾಂ ಶ್ರೀನಿಮಿಷಾಂಬ ದೇವಿ ಅಮ್ಮನವರ ವರ್ಧಂತಿ ಮಹೋತ್ಸವವು ಮೇ 17 ಮತ್ತು 18 ನಡೆಯಲಿದೆ ಎಂದು ನಿಮಿಷಾಂಬ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ದೇವಾಲಯದಲ್ಲಿ ಮೇ 17೭ರ ಶುಕ್ರವಾರ ಗಣಪತಿ ಪೂಜೆ, ಪುಣ್ಯಾಹ, ಮಹಾ ಸಂಕಲ್ಪ, ಕಲಶ ಸ್ಥಾಪನೆ, ಸಪ್ತಶತಿ ಪಾರಾಯಣ ಕಲಶ ಪೂಜೆ ಮಹಾಮಂಗಳಾರತಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರಸಿದ್ಧ ಗಂಜಾಂನ ಶ್ರೀನಿಮಿಷಾಂಬದೇವಿ ವರ್ಧಂತಿ ಹಿನ್ನೆಲೆಯಲ್ಲಿ ಮೇ 18ರಂದು ದೇವಿ ಉತ್ಸವ ಮೂರ್ತಿಯನ್ನು ಗ್ರಾಮದ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸುವಂತೆ ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದರು.

ಗಂಜಾಂನ ಗ್ರಾಮಸ್ಥರು ದೇಗುಲದ ಇಒ ಕೃಷ್ಣ ಅವರನ್ನು ಭೇಟಿ ಮಾಡಿ, ಕಳೆದ 40 ವರ್ಷಗಳ ಹಿಂದೆ ಗ್ರಾಮದಲ್ಲಿ ಶ್ರೀನಿಮಿಷಾಂಬ ವರ್ಧಂತಿ ಅಂಗವಾಗಿ ಗ್ರಾಮದ ಬೀದಿಗಳಲ್ಲಿ ವಿಜೃಂಭಣೆಯ ಪಲ್ಲಕಿ ಉತ್ಸವ ನಡೆದುಕೊಂಡು ಬರುತ್ತಿತ್ತು. ಕಾರಣಾಂತರದಿಂದ ಮೆರವಣಿಗೆ ನಿಂತು ಹೋಗಿತ್ತು.

ಹೊಸದಾಗಿ ದೇವಾಲಯ ವ್ಯವಸ್ಥಾಪನ ಸಮಿತಿ ರಚನೆಯಾದ ನಂತರ 2019ರಲ್ಲಿ ದೇವಾಲಯದ ಸಮಿತಿ ಸಭೆ ಸೇರಿ ಸಾರ್ವಜನಿಕರ ಒತ್ತಾಯದ ಮೆರಗೆ ಮತ್ತೆ ಚಾಲನೆ ದೊರೆತು ದೇವಿ ಉತ್ಸವ ಮೆರವಣಿಗೆಯನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ನಂತರ 2019ರಲ್ಲಿ ಕೊರೋನಾದಿಂದ ಕಳೆದ 4 ವರ್ಷಗಳಿಂದ ಇಲಾಖೆ ನಿದರ್ಶನದಂತೆ ಮತ್ತೆ ಉತ್ಸವ ಮೆರವಣಿಗೆ ನಡೆಸುವುದು ಸ್ಥಗಿತಗೊಂಡಿತ್ತು. ಈಗ ನಿಮಿಷಾಂಬ ಜಯಂತಿ ಅಂಗವಾಗಿ ಈ ಹಿಂದೆ ನಡೆಯುತ್ತಿದ್ದ ಪದ್ಧತಿಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಅದಿ ದೇವತೆ ಶ್ರೀನಿಮಿಷಾಂಬ ದೇವಿ ಉತ್ಸವ ಮೂರ್ತಿ ರಾಜ ಬೀದಿಯಲ್ಲಿ ಮೆರವಣಿಗೆ ನಡೆಸಿದಾಗ ಗ್ರಾಮಸ್ಥರು ಮನೆಗಳಲ್ಲಿ ಹಣ್ಣು ಕಾಯಿ ಪೂಜಾ ವ್ಯವಸ್ಥೆಗೆ ಕಲ್ಪಿಸಬೇಕು ಎಂದು ಗ್ರಾಮದ ಪುರಸಭೆ ಮಾಜಿ ಅಧ್ಯಕ್ಷ ಎಲ್.ನಾಗರಾಜು, ಪುರಸಭೆ ಸದಸ್ಯ ಗಂಜಾಂ ಶಿವು, ಮಾಜಿ ಸದಸ್ಯೆ ಪಾರ್ವತಮ್ಮ, ಸಮಿತಿಯ ಮಾಜಿ ಸದಸ್ಯ ಗಂಜಾಂ ಮಂಜು, ಅಂಬೇಡ್ಕರ್ ಬೀದಿಯ ಯಜಮಾನ್ ಸಿದ್ದಯ್ಯ, ಶಿವಲಿಂಗು ಸೇರಿದಂತೆ ಇತರರು ಆಗ್ರಹಿಸಿದರು.

ಇದಕ್ಕೆ ಪೂರಕವಾಗಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ 2019ರಲ್ಲಿ ನಡೆಸಿದ ಮಾಹಿತಿ ಪಡೆದು ಗ್ರಾಮದಲ್ಲಿ ದೇವಿ ಉತ್ಸವ ಮೆರವಣಿಗೆಗೆ ಅವಕಾಶ ನೀಡಲಾಗುವುದು ಎಂದರು.

ಮುಖ್ಯ ಅರ್ಚಕ ಸೂರ್ಯನಾರಾಯಣ ಭಟ್, ದೇವಾಲಯ ವ್ಯವಸ್ಥಾಪಕ ಚಂದ್ರಮೋಹನ್ ಇತರ ಅಧಿಕಾರಿಗಳು ಇದ್ದರು.

ಶ್ರೀನಿಮಿಷಾಂಬ ದೇವಿ ಅಮ್ಮನವರ ವರ್ಧಂತಿ ಮಹೋತ್ಸವ:

ಪುರಸಭಾ ವ್ಯಾಪ್ತಿಯ ಗಂಜಾಂ ಶ್ರೀನಿಮಿಷಾಂಬ ದೇವಿ ಅಮ್ಮನವರ ವರ್ಧಂತಿ ಮಹೋತ್ಸವವು ಮೇ 17 ಮತ್ತು 18 ನಡೆಯಲಿದೆ ಎಂದು ನಿಮಿಷಾಂಬ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ದೇವಾಲಯದಲ್ಲಿ ಮೇ 17೭ರ ಶುಕ್ರವಾರ ಗಣಪತಿ ಪೂಜೆ, ಪುಣ್ಯಾಹ, ಮಹಾ ಸಂಕಲ್ಪ, ಕಲಶ ಸ್ಥಾಪನೆ, ಸಪ್ತಶತಿ ಪಾರಾಯಣ ಕಲಶ ಪೂಜೆ ಮಹಾಮಂಗಳಾರತಿ ನಡೆಯಲಿದೆ.

ಮೇ 18 ರಂದು ಬೆಳಗ್ಗೆ 10.30ಕ್ಕೆ ಶ್ರೀ ನಿಮಿಷಾಂಬ ಹೋಮ, ಪೂರ್ಣಾಹುತಿ, 121 ಕಲಶಗಳ ಮಹಾಭಿಷೇಕ ಅಷ್ಟದಿಗ್ಬಲಿ, ಮಧ್ಯಾಹ್ನ 1 ಗಂಟಗೆ ಮಹಾಮಂಗಳಾರತಿ ಪ್ರಸಾದ ವಿತರಣೆ, ಸಂಜೆ 6.30ಕ್ಕೆ ದಕ್ಷಿಣ ಗಂಗೆ ಕಾವೇರಿ ಮಾತೆಗೆ ಪೂಜೆ, ಮಹಾಆರತಿ, 7 ಗಂಟೆಗೆ ಪ್ರಕಾರೋತ್ಸವ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಸಲಾಗುತ್ತದೆ.

ಸಂಜೆ ಗ್ರಾಮದ ರಾಜಬೀದಿಯಲ್ಲಿ ದೇವಿ ಉತ್ಸವ ಮೆರವಣಿಗೆ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಇಲಾಖೆ ಅಧಿಕಾರಿಗಳು, ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತರು, ಗ್ರಾಮದ ಮುಖಂಡರು ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಒಂದು ದಿನದ ಸೇವೆಗೆ 50 ಸಾವಿರ ರು, ಶಾಶ್ವತ ಅನ್ನದಾನ ಸೇವೆ 3 ಲಕ್ಷ ರು, ಅಕ್ಕಿ ಸೇವೆಗಾಗಿ 100 ರು. ಸಹಸ್ರ ನಾಮ ಕುಂಕುಮಾರ್ಚನೆ 120 ರು. ಕ್ಷೀರ ಸೇವೆ 120 ರು. ತುಲಾಭಾರ ಸೇವಾ ಕಾಣಿಕೆ 300 ರೂಪಾಯಿಗಳಿವೆ. ಇನ್ನೂ ಅನೇಕ ಪೂಜೆ, ಸೇವೆ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ.