ಸಾರಾಂಶ
ಸ್ವಾಮಿಗೆ ಮಂಗಳ ಸ್ನಾನ ಮಾಡಿಸಿ ಮಂಗಳಾರತಿ ಬೆಳಗಲಾಯಿತು. ಅಭಿಷೇಕ, ಪುಣ್ಯಾಹವಾಚನ, ಒರಳುಪೂಜೆ, ಬಳೆ ಕೊಡಿಸುವ ಶಾಸ್ತ್ರ, ಮಾಂಗಲ್ಯ ಧಾರಣೆ ಎಲ್ಲವೂ ಶಾಸ್ತ್ರೋಕ್ತವಾಗಿ ನೆರವೇರಿದವು.ಸಭಾಂಗಣದಲ್ಲಿ ಗೋವಿಂದ ನಾಮ ಸ್ಮರಣೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಣ್ಣೆನಗರಿಯಲ್ಲಿ ಭಾನುವಾರ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದಲ್ಲಿ ತಿರುಪತಿ ತಿಮ್ಮಪ್ಪನ ದೇಗುಲದ ಶ್ರೀನಿವಾಸ ಕಲ್ಯಾಣ ವೈಭವ ಅನಾವರಣಗೊಂಡಿತು. ಈ ಸಂದರ್ಭ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ನೂರಾರು ಮಂದಿ ನಿಂತುಕೊಂಡೇ ವೀಕ್ಷಿಸಿದರು. ಕಣ್ಣು ಹಾಯಿಸಿದಲ್ಲೆಲ್ಲ ಜನವೋ ಜನ. ಗಣಪತಿ ಪೂಜೆಯೊಂದಿಗೆ ಕಲ್ಯಾಣೋತ್ಸವಕ್ಕೆ ಚಾಲನೆ ದೊರೆಯಿತು. ಸ್ವಾಮಿಗೆ ಮಂಗಳ ಸ್ನಾನ ಮಾಡಿಸಿ ಮಂಗಳಾರತಿ ಬೆಳಗಲಾಯಿತು. ಅಭಿಷೇಕ, ಪುಣ್ಯಾಹವಾಚನ, ಒರಳುಪೂಜೆ, ಬಳೆ ಕೊಡಿಸುವ ಶಾಸ್ತ್ರ, ಮಾಂಗಲ್ಯ ಧಾರಣೆ ಎಲ್ಲವೂ ಶಾಸ್ತ್ರೋಕ್ತವಾಗಿ ನೆರವೇರಿದವು.ಸಭಾಂಗಣದಲ್ಲಿ ಗೋವಿಂದ ನಾಮ ಸ್ಮರಣೆ. ಹರೇ ಶ್ರೀನಿವಾಸ ಗುರೋ ರಾಘವೇಂದ್ರ, ಹರೇ ರಾಮ ಹರೇ ರಾಮ ಎಂದು ಭಗವಂತನಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಕೌತಾಳಂ ಶ್ರೀ ಗುರು ಜಗನ್ನಾಥ ಸೇವಾ ಸಮಿತಿಯವರು ಕಲ್ಯಾಣೋತ್ಸವ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಪಲಿಮಾರು ಶ್ರೀಗಳು ಸಾನ್ನಿಧ್ಯದಲ್ಲಿ ಸಾಂಗವಾಗಿ ನೆರವೇರಿತು. ಕೆ. ಅಪ್ಪಣ್ಣಾಚಾರ್ಯ, ಸದಾನಂದ ಶಾಸ್ತ್ರಿಗಳು, ಸಂಪನ್ನ ಮುತಾಲಿಕ್, ಕಂಪ್ಲಿ ಗುರುರಾಜಾಚಾರ್ ಸೇರಿ ಮಹೋತ್ಸವ ಸಮಿತಿ ಸದಸ್ಯರಿದ್ದರು.