ಸಾರಾಂಶ
ಆಲೆಕಟ್ಟೆ ರಸ್ತೆಯ ಸಾರ್ವಜನಿಕ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಶಾಸಕ ಡಾ. ಮಂತರ್‌ಗೌಡ ಪಾಲ್ಗೊಂಡರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಆಲೆಕಟ್ಟೆ ರಸ್ತೆಯ ಸಾರ್ವಜನಿಕ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಬುಧವಾರ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡಿದ್ದರು.ಸಂಜೆ 5ರಿಂದ ಶ್ರದ್ಧಾ ಭಕ್ತಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ರಾತ್ರಿ 8 ಗಂಟೆಗೆ ಮಹಾಮಂಗಳಾರತಿಯೊಂದಿಗೆ ಆಗಮಿಸಿದ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವಾಲಯ ಸಮಿತಿ ಅಧ್ಯಕ್ಷ ಬಿ.ಡಿ. ಗೋವಿಂದ, ಉಪಾಧ್ಯಕ್ಷ ಪೆರುಮಾಳ್, ಮಹೇಶ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಎಚ್. ಮಂಜುನಾಥ್, ಸಹ ಕಾರ್ಯದರ್ಶಿ ಟಿ.ಎ. ಪ್ರಕಾಶ್ ಹಾಗೂ ಖಜಾಂಚಿ ಸಿ.ಯು. ಉದಯಕುಮಾರ್ ಇದ್ದರು.-------------------
ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಚಾಲಕ ದಾರುಣ ಸಾವುಕನ್ನಡಪ್ರಭ ವಾರ್ತೆ ನಾಪೋಕ್ಲು
ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಚಾಲಕ ದಾರುಣವಾಗಿ ಮೃತಪಟ್ಟ ಘಟನೆ ಬೇತು ಗ್ರಾಮದ ಕೈಕಾಡು ಸಮೀಪ ಶುಕ್ರವಾರ ಸಂಜೆ ಜರುಗಿದೆ.ಇಲ್ಲಿಗೆ ಸಮೀಪದ ಕೈಕಾಡು ಗ್ರಾಮದ ನಿವಾಸಿ ನರೇಂದ್ರ (ನರುನ್) (37) ಶುಕ್ರವಾರ ಸಂಜೆ ನಾಪೋಕ್ಲು ಕಡೆಯಿಂದ ಕೈಕಾಡು ಕಡೆಗೆ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ವೇಳೆ ಕೈಕಾಡು ಸಮೀಪ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಕೆಳಗೆ ಬಿದ್ದ ಸಂದರ್ಭ ಚಾಲಕ ಟ್ರ್ಯಾಕ್ಟರ್ ಟೈಯರ್ ಕೆಳಗಡೆ ಸಿಲುಕಿ ಮೃತಪಟ್ಟಿದ್ದಾರೆ.
ಕೈಕಾಡು ಗ್ರಾಮದ ಕದ್ದಣಿಯ೦ಡ ಶ್ರೀ ಗಣೇಶ್ ಮಾಲೀಕತ್ವದ ಟ್ರ್ಯಾಕ್ಟರ್ ಚಾಲಕನಾಗಿದ್ದು ಅವರ ಲೈನ್ ಮನೆಯಲ್ಲಿ ನರೇಂದ್ರ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದರು .ನಾಪೋಕ್ಲು ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.