ಸಾರಾಂಶ
ಶ್ರೀರಾಮುಲು ಕೂಡ್ಲಿಗಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಸ್ವತಃ ಅವರೇ ತಾವು ಸ್ಪರ್ಧಿಸುವುದು ಖಚಿತ ಎಂದೂ ಸಹ ಹೇಳಿದ್ದಾರೆ.
ಹೊಸಪೇಟೆ: ಮಾಜಿ ಸಚಿವ ಬಿ.ಶ್ರೀರಾಮುಲು ಕೊಟ್ಟೂರು ಶ್ರೀ ಗುರು ಬಸವೇಶ್ವರ ಜಾತ್ರೆಯ ನಿಮಿತ್ತ ಶುಕ್ರವಾರ ಸಂಜೆ ಕೂಡ್ಲಿಗಿಯ ಕೊತ್ತಲ ಆಂಜನೇಯ ದೇವಾಲಯದಿಂದ ಪಾದಯಾತ್ರೆ ನಡೆಸಿದರು.
ಇದೇ ಪ್ರಥಮ ಬಾರಿಗೆ ಬಿ. ಶ್ರೀರಾಮುಲು ಕೊಟ್ಟೂರು ಜಾತ್ರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಕೊಟ್ಟೂರು ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಪಾದಯಾತ್ರೆಯ ಮೂಲಕ ಭಕ್ತರು ಮೊದಲಿನಿಂದಲೂ ಆಗಮಿಸುವ ಸಂಪ್ರದಾಯ ಇದೆ.ಶುಕ್ರವಾರ ಸಂಜೆ 7 ಗಂಟೆಯ ಹೊತ್ತಿಗೆ ಕೂಡ್ಲಿಗಿಯಿಂದ ಹೊರಟಿರುವ ಬಿ. ಶ್ರೀರಾಮುಲು ಮತ್ತು ಅವರ ಬೆಂಬಲಿಗರು 20 ಕಿ.ಮೀ. ಕ್ರಮಿಸಿ ರಾತ್ರಿ 12 ಗಂಟೆಯ ಹೊತ್ತಿಗೆ ಕೊಟ್ಟೂರು ತಲುಪಿದ್ದಾರೆ.
ಶ್ರೀರಾಮುಲು ಕೂಡ್ಲಿಗಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಸ್ವತಃ ಅವರೇ ತಾವು ಸ್ಪರ್ಧಿಸುವುದು ಖಚಿತ ಎಂದೂ ಸಹ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಟ್ಟೂರೇಶ್ವರನ ಕೃಪೆಗಾಗಿ ಪಾದಯಾತ್ರೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಪಾದಯಾತ್ರೆಯಲ್ಲಿ ಕೂಡ್ಲಿಗಿ ಬಿಜೆಪಿ ಮಂಡಳ ಅಧ್ಯಕ್ಷ ನಾಗರಾಜ ಕಾಮಶೆಟ್ಟಿ ಹಾಗೂ ಶ್ರೀರಾಮುಲು ಅವರ ನೂರಾರು ಬೆಂಬಲಿಗರು ಕೂಡ ಭಾಗವಹಿಸಿದ್ದರು.