ಶ್ರೀರಂಗಪಟ್ಟಣ: ಪ್ರತಿಭಟನೆ ಸ್ಥಳದಲ್ಲಿ ವಿನೂತನ ಯುಗಾದಿ ಹಬ್ಬ ಆಚರಣೆ

| Published : Apr 01 2025, 12:49 AM IST

ಸಾರಾಂಶ

ಧರಣಿ ಸತ್ಯಾಗ್ರಹ 15 ದಿನಗಳು ಕಳೆದರೂ ತಾಲೂಕು ಆಡಳಿತ ಸಮಸ್ಯೆ ಬಗೆ ಹರಿಸದ ಹಿನ್ನೆಲೆಯಲ್ಲಿ ವಿವಿಧ ರೈತ ಹಾಗೂ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನಾಲಾ ಏರಿ, ಸಾರ್ವಜನಿಕ ರಸ್ತೆ ಒತ್ತುವರಿ ಹಾಗೂ ಹಲ್ಲೆ ಖಂಡಿಸಿ ಕಳೆದ 15 ದಿನಗಳಿಂದ ತಾಲೂಕು ಕಚೇರಿ ಎದುರು ರೈತ ಡಿ.ಪ್ರಭಾಕರ್ ಏಕಾಂಗಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಸ್ಥಳದಲ್ಲೇ ಯುಗಾದಿ ಹಬ್ಬವನ್ನು ವಿನೂತನವಾಗಿ ಆಚರಣೆ ಮಾಡಲಾಯಿತು.

ಪ್ರತಿಭಟನಾ ಸ್ಥಳದಲ್ಲಿ ಕನ್ನಡ ಬಾವುಟ, ಬೇವಿನ ಸೊಪ್ಪು ಕಟ್ಟಿ ನಂತರ ಬೇವಿನ ಒಬ್ಬಟ್ಟು ಸುಟ್ಟು ಪ್ರತಿಭಟನಾ ನಿರತರಿಗೆ ವಿತರಿಸುವ ಮೂಲಕ ಯುಗಾದಿ ಹಬ್ಬವನ್ನು ಕಹಿಯಾಗಿ ಆಚರಿಸಿ , ಜಾಗಟೆ ಬಾರಿಸಿ ಪೂಜೆ ಸಲ್ಲಿಸಿ ವಿತರಿಸಲಾಯಿತು. ಜೊತೆಗೆ ಸಂಘಟನೆ ಮುಖಂಡರು ಬಾಯಿಗೆ ಬೇವಿನ ಸೊಪ್ಪು ಕಚ್ಚಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಧರಣಿ ಸತ್ಯಾಗ್ರಹ 15 ದಿನಗಳು ಕಳೆದರೂ ತಾಲೂಕು ಆಡಳಿತ ಸಮಸ್ಯೆ ಬಗೆ ಹರಿಸದ ಹಿನ್ನೆಲೆಯಲ್ಲಿ ವಿವಿಧ ರೈತ ಹಾಗೂ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಈ ವೇಳೆ ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ಕರವೇ ಅಧ್ಯಕ್ಷ ಶಂಕರ್ ಚಂದಗಾಲು, ರೈತ ಸಂಘದ ಜಿಲ್ಲಾ ಸಂಚಾಲಕ ಕಿರಂಗೂರ ಪಾಪು, ದರಸಗುಪ್ಪೆ ನಾಗೇಂದ್ರ, ಮಹೇಶ್ ಕೂಡಲಕುಪ್ಪೆ, ರಾಂಪುರ ಪುಟ್ಟು , ಅಂಕ ಶೆಟ್ಟಿ, ಜಗದೀಶ್, ಕೃಷ್ಣೇಗೌಡ, ಚಂದಗಾಲು ನಾಗೇಂದ್ರ, ಧನುಷ್ , ಮನೋಜ್, ಲೋಕೇಶ್ ಸೇರಿದಂತೆ ಇತರರಿದ್ದರು.