1610ರಲ್ಲೇ ಶ್ರೀರಂಗಪಟ್ಟಣ ದಸರಾ ಆರಂಭ

| Published : Oct 18 2023, 01:01 AM IST

ಸಾರಾಂಶ

1610ರಲ್ಲೇ ಶ್ರೀರಂಗಪಟ್ಟಣ ದಸರಾ ಆರಂಭ
- ಶ್ರೀರಂಗಪಟ್ಟಣ ದಸರಾಗೆ 4 ದಶಕಗಳ ಇತಿಹಾಸ - ಮೈಸೂರಿಗೆ ವರ್ಗಾವಣೆಗೊಂಡು ಜಗತ್ ಪ್ರಸಿದ್ಧಿ: ಚಲುವರಾಯಸ್ವಾಮಿ ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ ಶ್ರೀರಂಗಪಟ್ಟಣ ದಸರಾಗೆ 4 ದಶಕಗಳ ಇತಿಹಾಸವಿದೆ. 1610ರಲ್ಲೇ ಆರಂಭವಾದ ದಸರಾ ಬಳಿಕ ಮೈಸೂರಿಗೆ ವರ್ಗಾವಣೆಗೊಂಡು ಜಗತ್‌ ಪ್ರಸಿದ್ಧಿ ಪಡೆದಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮೈದಾನದಲ್ಲಿ ದಸರಾ ಅಂಗವಾಗಿ ಶ್ರೀರಂಗ ವೇದಿಕೆಯಲ್ಲಿ ಸೋಮವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಶಾಸಕರಾಗಿದ್ದ ವೇಳೆ ಸರ್ಕಾರದ ಮೇಲೆ ಒತ್ತಡ ತಂದು ಮತ್ತೆ ಶ್ರೀರಂಗಪಟ್ಟಣದಲ್ಲಿ ದಸರಾ ಆಚಣೆಗೆ ಮರು ಚಾಲನೆ ನೀಡಿದ್ದರು. ಈಗ ಹಂತ ಹಂತವಾಗಿ ಪ್ರತಿ ವರ್ಷವು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು. ಶ್ರೀರಂಗಪಟ್ಟಣ ದಸರಾವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ರಾಜ್ಯದ 116 ತಾಲೂಕುಗಳಲ್ಲಿ ಬರ ಹಾಗೂ ಕಾವೇರಿ ನೀರಿನ ಸಮಸ್ಯೆ ಎದುರಾಗಿರುವ ಕಾರಣದಿಂದಾಗಿ ಪರಂಪರೆ ಬಿಂಬಿಸುವ ನಾಡ ಹಬ್ಬ ಶ್ರೀರಂಗಪಟ್ಟಣ ದಸರಾವನ್ನು ಸರಳವಾಗಿ ಆಚರಿಸುತ್ತಿದ್ದೇವೆ ಎಂದರು. ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಶ್ರೀರಂಗಪಟ್ಟಣ ಎಂದರೆ ಐತಿಹಾಸಿಕ ಸ್ಥಳ. ದೇವಾಲಯಗಳ ನಾಡು, ಪ್ರವಾಸಿ ತಾಣ. ರಂಗನತಿಟ್ಟು ಯುನೆಸ್ಕೋದಿಂದ ಮಾನ್ಯತೆ ಜೊತೆಗೆ ಕೆಆರ್‌ಎಸ್ ಅಣೆಕಟ್ಟೆ ವಿಶ್ವ ವಿಖ್ಯಾತ ಪಡೆದಿದೆ ಎಂದರು. ದಸರಾ ಆಗಮಿಸಿದರೆ ನನಗೆ ಅಂಬರೀಶ್ ಅವರು ನೆನಪಿಗೆ ಬರುತ್ತಾರೆ. ಅಂಬರೀಶ್ ಅವರ ತಾತ ಪಿಟೀಲು ಚೌಡಯ್ಯ ಅವರು ಮೈಸೂರು ಮಹಾರಾಜರಿಗೆ ಆಪ್ತರಾಗಿದ್ದರು. ಅವರಿಂದ ಎಷ್ಟೋ ಬಾರಿ ಚಿನ್ನದ ಪದಕ ಪಡೆದ್ದಾರೆ ಎಂದರು. ಅಂಬರೀಶ್ ಸಹ ಶ್ರೀಕಂಠದತ್ತ ಒಡೆಯರ್ ಅವರೊಂದಿಗೆ ಬಹಳ ಆಪ್ತರಾಗಿದ್ದರು. ಈಗ ದಸರಾ ಉದ್ಘಾಟನೆಯನ್ನು ಅವರ ಪತ್ನಿ ಪ್ರಮೋದ ದೇವಿ ಒಡೆಯರ್ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿರುವುದು ಸಂತಸದ ವಿಷಯ ಎಂದರು. ಅಧ್ಯಕ್ಷತೆ ವಹಿಸಿದ್ದ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಶಾಸಕನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಜನತೆಗೆ ಅಭಿನಂದನೆ ತಿಳಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಕಾಯಕಲ್ಪ ಕೊಟ್ಟು ಅಭಿವೃದ್ಧಿಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು. ಚಾಮುಂಡಿ ತಾಯಿ ಆಶೀರ್ವಾದದಿಂದ ಮಳೆಯಾಗಿ ಕೆಆರ್‌ಎಸ್ ಕನ್ನಂಬಾಡಿ ಅಣೆಕಟ್ಟೆ ಭರ್ತಿಯಾಗಿ ರೈತರ ಮೊಗದಲ್ಲಿ ಸಂತಸ ಮೂಡಲಿ ಎಂದು ಪ್ರಾರ್ಥಿಸಿದರು. ಸಮಾರಂಭದಲ್ಲಿ ಎಂಎಲ್‌ಸಿ ಮರಿತಿಬ್ಬೇಗೌಡ, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ವೇದ ಬ್ರಹ್ಮ ಡಾ. ಭಾನು ಪ್ರಕಾಶ್‌ ಶರ್ಮಾ, ಜಿಲ್ಲಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು, ಜಿಲ್ಲಾ ಎಸ್ಪಿ ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ತಹಸೀಲ್ದಾರ್ ಅಶ್ವಿನಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. 17ಕೆಎಂಎನ್ ಡಿ14 ಶ್ರೀರಂಗಪಟ್ಟಣದಲ್ಲಿ ದಸರಾ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ ನೀಡಿದರು.