ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಉಪವಿಭಾಗದ ಮಟ್ಟದ ಪರಿಶಿಷ್ಟ ಜಾತಿಮ ಪರಿಶಿಷ್ಟ ಪಂಗಡ ಸಮಾಜದ ಮುಖಂಡರೊಂದಿಗೆ ಕುಂದುಕೊರತೆ ಸಭೆ ನಡೆಯಿತು.ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಸಮಾಜದ ಮುಖಂಡರು ತಮ್ಮ ಗ್ರಾಮಗಳು, ಬಡಾವಣೆಗಳಲ್ಲಿನ ನೀರು, ವಿದ್ಯುತ್, ಬಸ್ ಸಮಸ್ಯೆಗಳ ಜೊತೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರು. ಹಲವು ಗ್ರಾಮಗಳ ಅಭಿವೃದ್ಧಿ ಕುರಿತು ಸಮಸ್ಯೆಗಳ ತಿಳಿಸಿ ಕೆಲವು ಸಮಸ್ಯೆಗಳ ಬಗ್ಗೆ ದೂರುಗಳ ನೀಡಿದರು.
ಸಮಸ್ಯೆ ಆಲಿಸಿ ದೂರು ಪಡೆದುಕೊಂಡ ಡಿವೈಎಸ್ಪಿ ಕೃಷ್ಣ ಕುಮಾರ್ ಮಾತನಾಡಿ, ಬಡಾವಣೆ ಹಾಗೂ ಸಂಚಾರ, ಇತರೆ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದು, ಸಂಬಂಧಿಸಿದ ಇಲಾಖೆಗಳಿಗೆ ವರದಿ ಮಾಡಿ ಕಳುಹಿಸಿಕೊಡಲಾಗುವುದು. ವರದಿ ನಂತರ ತಮ್ಮ ಗಮನಕ್ಕೂ ತರಲಾಗುತ್ತದೆ. ಉಳಿದಂತೆ ಯಾವುದೇ ಸಮಸ್ಯೆಗಳಿದ್ದರೆ ಖುದ್ದು ನಮ್ಮನ್ನು ಭೇಟಿ ಮಾಡಿ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ತಿಳಿಸಿದರು.ಸಭೆಯಲ್ಲಿ ಉಪವಿಭಾಗ ವ್ಯಾಪ್ತಿ ಪೊಲೀಸ್ ವೃತ್ತ ನಿರೀಕ್ಷಕರಾದ ಬಿ.ಜಿ. ಕುಮಾರ್, ವಿವೇಕಾನಂದ, ಆನಂದ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಮುಖಂಡರಾದ ಪುರಸಭಾ ಮಾಜಿ ಸದಸ್ಯ ಶ್ರೀನಿವಾಸ್, ಕುಬೇರಪ್ಪ, ರವಿಚಂದ್ರ, ಪಾಂಡು, ಶೆಟ್ಟಹಳ್ಳಿ ಸುರೇಶ್, ನಗುವನಹಳ್ಳಿ ಮಹದೇವ ಸ್ವಾಮಿ, ಪಾಂಡವಪುರ ಸೋಮಶೇಖರ್ ಅಂಕಯ್ಯ ಸೇರಿದಂತೆ ಇತರ ಮುಖಂಡರು ಹಾಜರಿದ್ದರು.ಸಮಾರಂಭ ಯಶಸ್ಸಿಗೆ ಜನತೆ ಸಹಕಾರ ಕಾರಣ: ಗಂಜಿಗೆರೆ ಮಹೇಶ್
ಕೆ.ಆರ್.ಪೇಟೆ:ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಹುಟ್ಟುಹಬ್ಬ ಅಂಗವಾಗಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ರಾಜ್ಯ ಮಟ್ಟದ ರಂಗ ಕುಣಿತ ಸ್ಪರ್ಧೆ, ಪ್ರತಿಭಾ ಪುರಸ್ಕಾರ, ಬೃಹತ್ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಲು ತಾಲೂಕಿನ ಜನತೆ ಸಹಕಾರ ಕಾರಣವಾಯಿತು ಎಂದು ಟ್ರಸ್ಟಿ ಗಂಜಿಗೆರೆ ಮಹೇಶ್ ತಿಳಿಸಿದರು.
ಟ್ರಸ್ಟ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಿಕೊಟ್ಟಂತಹ ಹರಚರ ಗುರುಮೂರ್ತಿಗಳಿಗೂ, ಗಣ್ಯರಿಗೂ, ಆರೋಗ್ಯ ಶಿಬಿರ ಆಯೋಜನೆ ಮಾಡಿಕೊಟ್ಟಂತಹ ಮೈಸೂರಿನ ಅನಘ, ಮೌರ್ಯ ಆಸ್ಪತ್ರೆ, ಕೆ.ಆರ್.ನಗರದ ವಿಸ್ಮಯ ಹಾಗೂ ಕೆ.ಆರ್.ಪೇಟೆ ನ್ಯೂ ಅಪೂರ್ವ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಗಳ ಮುಖ್ಯಸ್ಥರಿಗೂ, ಸಾಧಕರಿಗೂ, ವಿದ್ಯಾರ್ಥಿಗಳಿಗೂ, ಪೋಷಕರಿಗೂ, ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕ ಬಂಧುಗಳಿಗೂ, ಸಮಾರಂಭದ ಯಶಸ್ವಿಗೆ ಹಗಲಿರುಳು ದುಡಿದಂತಹ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೂ, ಶಿಕ್ಷಕ ವೃಂಧಕ್ಕೂ, ಆರ್‌ಟಿಒ ಮಲ್ಲಿಕಾರ್ಜುನ್ ಅಭಿಮಾನಿಗಳಿಗೂ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರಿ ನೀಡಿದ ಸರ್ವರಿಗೂ ಧನ್ಯ ಸಲ್ಲಿಸುತ್ತೇವೆ ಎಂದರು.ಸುದ್ದಿಗೋಷ್ಟಿಯಲ್ಲಿ ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ನಿವೃತ್ತ ಪ್ರಾಂಶುಪಾಲ ಡಾ.ಕೆ.ಕಾಳೇಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾಧ್ಯಕ್ಷ ಸುಜೇಂದ್ರ ಕುಮಾರ್, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಟಿ.ವೈ.ಆನಂದ್, ನಿಕಟ ಪೂರ್ವ ಅಧ್ಯಕ್ಷ ಅಪ್ಪನಹಳ್ಳಿ ಅರುಣ್ ಕುಮಾರ್, ಕ್ರೈಸ್ತ ಕಿಂಗ್ ಪಿ.ಯು ಕಾಲೇಜಿನ ಪ್ರಾಂಶುಪಾಲ ಶಿವರಾಜು, ಹಿರಿಯ ಪತ್ರಕರ್ತ ಕಿಕ್ಕೇರಿ ಬಲರಾಮು, ಪ್ರಸನ್ನ ಕುಮಾರ್, ಕಾಗಿನೆಲೆ ಕನಕ ಗುರು ಪೀಠದ ತಾಲೂಕು ಸಂಚಾಲಕ ಮಾಕವಳ್ಳಿ ಸಾಯಿ ಸುಮಿತ್ ಇದ್ದರು.