ವಿಜೃಂಭಣೆಯಿಂದ ನಡೆದ ಶ್ರೀವೀರಭದ್ರಸ್ವಾಮಿ, ಶ್ರೀಭದ್ರಕಾಳಮ್ಮ ದಿವ್ಯ ರಥೋತ್ಸವ

| Published : Aug 08 2024, 01:31 AM IST

ವಿಜೃಂಭಣೆಯಿಂದ ನಡೆದ ಶ್ರೀವೀರಭದ್ರಸ್ವಾಮಿ, ಶ್ರೀಭದ್ರಕಾಳಮ್ಮ ದಿವ್ಯ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಮದ್ದೂರು ಗ್ರಾಮದ ಅಂತಾರಾಷ್ಟ್ರೀಯ ವೀರಗಾಸೆ ಕಲಾವಿದರಾದ ಮಲ್ಲೇಶ್ ಮತ್ತು ರಾಜಪ್ಪ ಹಾಗೂ ಪುಟ್ಟ ಪೋರ ಹರ್ಷನ ವೀರಗಾಸೆ ಕುಣಿತ ಅಪಾರ ಭಕ್ತರ ಮನ ಸೆಳೆಯಿತು.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀವೀರಭದ್ರಸ್ವಾಮಿ, ಶ್ರೀಭದ್ರಕಾಳಮ್ಮ ದಿವ್ಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಪಟ್ಟಣದ ಪುರಸಭೆ ಮುಂಭಾಗದ ರಸ್ತೆಯ ಶ್ರೀವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಗಂಗೆ ಪೂಜೆ, ಗಣಪತಿ ಪೂಜೆ, ದ್ವಜಾಪೂಜೆ, ಪುಣ್ಯೋ, ನವಗ್ರಹ ಪೂಜೆ ,ಏಕದಶರುದ್ರ ಕಳಸ ಪೂಜೆ, ಹೋಮ, ಶ್ರೀವೀರಭದ್ರಸ್ವಾಮಿ, ಭದ್ರಕಾಳಮ್ಮ ದೇವರಿಗೆ ಪ್ರದಾನ ಹೋಮ, ಪ್ರದಾನ ದೇವರ ಹಾಗೂ ಉತಸ್ವ ಮೂರ್ತಿಗೆ ಪಂಚಾಮೃತ ಅಭಿಷೇಕ ಪೂಜಾ ಕೈಂಕರ್ಯಗಳು ಸಂಪ್ರದಾಯಬದ್ಧವಾಗಿ ಜರುಗಿದವು.

ಮಧ್ಯಾಹ್ನ ಶ್ರೀವೀರಭದ್ರಸ್ವಾಮಿ ಹಾಗೂ ಶ್ರೀಭದ್ರಕಾಳಮ್ಮ ದೇವರ ದಿವ್ಯ ರಥೋತ್ಸವಕ್ಕೆ ಮುಜುರಾಯಿ ಶಿರಸ್ತೇದಾರ್ ಗುರುಪ್ರಸಾದ್ ಹಾಗೂ ರಾಗಿಬೊಮ್ಮನಹಳ್ಳಿ, ಚಿದರಹಳ್ಳಿ ಗವಿಮಠದ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ನಂತರ ರಥೋತ್ಸವವು ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚಾರ ನಡೆಸಿತು.

ಗಮನ ಸೆಳೆದ ವೀರಗಾಸೆ ಕುಣಿತ:

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಮದ್ದೂರು ಗ್ರಾಮದ ಅಂತಾರಾಷ್ಟ್ರೀಯ ವೀರಗಾಸೆ ಕಲಾವಿದರಾದ ಮಲ್ಲೇಶ್ ಮತ್ತು ರಾಜಪ್ಪ ಹಾಗೂ ಪುಟ್ಟ ಪೋರ ಹರ್ಷನ ವೀರಗಾಸೆ ಕುಣಿತ ಅಪಾರ ಭಕ್ತರ ಮನ ಸೆಳೆಯಿತು.

ದಿವ್ಯ ರಥೋತ್ಸವದಲ್ಲಿ ರಾಜ್ಯದ ಹಲವೆಡೆಯಿಂದ ಅಗಮಿಸಿದ ಸಾವಿರಾರು ಭಕ್ತರು, ದಿವ್ಯ ರಥೋತ್ಸವದ ಸಮಿತಿ ಪದಾಧಿಕಾರಿಗಳು, ತಾಲೂಕಿನ ಹಲವು ಗಣ್ಯರು ಅಗಮಿಸಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.